ಗರ್ಲ್‌ಫ್ರೆಂಡ್‌ ಜೊತೆ ಮೊದಲ ಫೋಟೋ ಹಂಚಿಕೊಂಡ 'ಮಂಗಳಗೌರಿ ಮದುವೆ' ನಟ Gagan!

Suvarna News   | Asianet News
Published : Feb 08, 2022, 05:13 PM IST

ಸಿಂಗಲ್ ಹುಡುಗಿಯರ ಹಾರ್ಟ್‌ ಬ್ರೇಕ್‌ ಮಾಡಿದ ಗಗನ್ ಚಿನ್ನಪ್ಪ. ಗರ್ಲ್‌ಫ್ರೆಂಡ್‌ ಜೊತೆಗಿರುವ ಫೋಟೋ ವೈರಲ್...

PREV
17
ಗರ್ಲ್‌ಫ್ರೆಂಡ್‌ ಜೊತೆ ಮೊದಲ ಫೋಟೋ ಹಂಚಿಕೊಂಡ 'ಮಂಗಳಗೌರಿ ಮದುವೆ' ನಟ Gagan!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳಗೌರಿ ಮದುವೆ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದ ನಟ ಗಗನ್ ಚಿನ್ನಪ್ಪ. 

27

ಸೋಷಿಯಲ್ ಮೀಡಿಯಾದಲ್ಲಿ ಗಗನ್ ತಮ್ಮ ಪ್ರೇಯಸಿ ಪ್ರಾರ್ಥನಾ ಹುಟ್ಟುಹಬ್ಬಕ್ಕೆ ಶುಭ ಕೋರುವ ಮೂಲಕ ಅವರೊಟ್ಟಿಗಿರುವ ಮೊದಲ ಫೋಟೋ ಹಂಚಿಕೊಂಡಿದ್ದಾರೆ. 

37

'ನನ್ನ ಹೃದಯಕ್ಕೆ ಸಂತೋಷ ತಂದು ಕೊಟ್ಟ ವ್ಯಕ್ತಿ, ಸೂರ್ಯನಷ್ಟೇ ಸನ್ನಿಯಾಗಿರಲಿ. ಈ ನಿನ್ನ ದಿನ ಹಾಗೂ ನಿನ್ನಷ್ಟೇ ಸುಂದರವಾಗಿರಲಿ ಈ ವರ್ಷ,' ಎಂದು ಗಗನ್ ಬರೆದುಕೊಂಡಿದ್ದಾರೆ.

47

'ನೀನು ಕೊಟ್ಟಿರುವ ನೆನಪುಗಳು ಸದಾ ಅಮರ. ನಮಗೆ ಎಷ್ಟೇ ವಯಸ್ಸಾದರೂ ಎಷ್ಟೇ ಬರ್ತಡೇಗಳು ಬರಲಿ ನಾನು ನಿಮ್ಮ ಪಕ್ಕದಲ್ಲಿ ಸದಾ ಇರುವೆ,' ಎಂದಿದ್ದಾರೆ ಗಗನ್.

57

'ನಾವು ಜೊತೆಗಿರುವ ಮೊದಲ ಫೋಟೋ. ನಾವು ಭೇಟಿಯಾಗಿ 5 ವರ್ಷಗಳು ಕಳೆದಿದೆ. ಹೀಗೂ ಸದಾ ಜೊತೆಗಿರೋಣ' ಎಂದು ಗಗನ್ ಹೇಳಿದ್ದಾರೆ.. 

67

'ಥ್ಯಾಂಕ್ಯು ಮೈ ಲವ್. ಹೀಗೆ ತುಂಬಾ ತುಂಬಾ ವರ್ಷ ಜೊತೆಗಿರೋಣ. ಸಾವಿರಾರೂ ನೆನಪುಗಳನ್ನು ಕ್ರಿಯೇಟ್ ಮಾಡೋಣ,' ಎಂದು ಗಗನ್ ಪ್ರೇಯಸಿ ಪ್ರಾರ್ಥನಾ ಕಾಮೆಂಟ್ ಮಾಡಿದ್ದಾರೆ.

77

ಪಾರ್ಥನಾ ವೃತ್ತಿಯಲ್ಲಿ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌. ನಟಿ ಶುಭ್ರ ಅಯ್ಯಪ್ಪ, ರುಕ್ಮಿಣಿ ವಸಂತ್, ಮೇಘನಾ ಗಾಂವ್ಕರ್, ಶಾನ್ವಿ ಸೇರಿದಂತೆ ಅನೇರಿಗೆ ಮೇಕಪ್ ಮಾಡಿದ್ದಾರೆ.

click me!

Recommended Stories