ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ ಇದೀಗ ಕುಟುಂಬಸ್ಥರ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಹಳದಿ ಮತ್ತು ಕೆಂಪು ಬಣ್ಣದ ಫ್ಲೋರಲ್ ಸೀರೆಯನ್ನು ಧರಿಸಿರುವ ನಮ್ರತಾ ರಾಯರ ಗುಡಿ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಹೊಸ ಟ್ವಿಸ್ಟ್ ಮೂಲಕ ನಾಗಿಣಿ 2 (Nagini 2) ಧಾರಾವಾಹಿ ವೀಕ್ಷಕರ ಗಮನ ಸೆಳೆದಿದೆ. ನಮ್ರತಾಗೆ ಜೋಡಿಯಾಗಿ ನೀನಾದ್ ಅಭಿನಯಿಸಿದ್ದಾರೆ.
ನಮ್ರತಾ ಅಭಿನಯಕ್ಕಿಂತ ಆಕೆ ಧರಿಸುವ ಉಡುಪು ಮತ್ತು ಕೇಶ ವಿನ್ಯಾಸ ವೀಕ್ಷಕರ ಗಮನ ಸೆಳೆದಿದೆ. ಆರಂಭದಿಂದಲೂ ಒಂದು ಉಡುಪು ಕೂಡ ಮತ್ತೆ ರಿಪೀಟ್ ಮಾಡಿಲ್ಲ ಎನ್ನಬಹುದು.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಮ್ರತಾ ಗೌಡ 1,514 ಫೋಟೋಗಳನ್ನು ಅಪ್ಲೋಡ್ ಮಾಡಿ ಏಳೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿದ್ದಾರೆ.
ನಮ್ರತಾನೇ ನಾಗಮಣಿ ಹುಡುಕಿಕೊಂಡು ಬಂದಿರುವ ನಾಗಿಣಿ ಎಂದು ಆಕೆಯನ್ನು ಕೊಲೆ ಮಾಡಲು ಆದಿಶೇಷ ಹೊಸ ಪ್ಲ್ಯಾನ್ ಮಾಡುತ್ತಿದ್ದಾನೆ. ಒಟ್ಟಿನಲ್ಲಿ ಹೊಸ ಸೀರಿಯಲ್ ಕಥೆಯ ಟ್ವಿಸ್ಟ್ ರೋಚಕವಾಗಿದೆ.
ಧಾರಾವಾಹಿ ಹೊರತು ಪಡಿಸಿ ನಮತ್ರಾ ಖಾಸಗಿ ಫೋಟೋ ಶೂಟ್‌ಗಳಲ್ಲಿ ಭಾಗಿಯಾಗುತ್ತಾರೆ. ಉಡುಪು, ಕೇಶ್ ಮತ್ತು ಆಭರಣ ಕಂಪನಿಗಳ ಜೊತೆ collaborate ಮಾಡಿಕೊಳ್ಳುತ್ತಾರೆ.