300 ಸಂಚಿಕೆ ಪೂರೈಸಿದ Sathya ಧಾರಾವಾಹಿ, ದಿವ್ಯಾಳ ಮದುವೆ ನಿಜಕ್ಕೂ ಆಗುತ್ತಾ?

First Published | Feb 3, 2022, 4:56 PM IST

300ನೇ ಸಂಚಿಕೆಗೆ ಮದುವೆ ಸಂಭ್ರಮ ಜೋರು. ಅಮೂಲ್ ಬೇಬಿ ಗಂಡ ದಿವ್ಯಾ ನಾ? ಅಥವಾ ಸತ್ಯಾ ನಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಇದೀಗ  300 ಸಂಚಿಕೆ ಪೂರೈಸಿದೆ. ಇಡೀ ತಂಡ ಅದ್ಧೂರಿಯಾಗಿ ಈ ಯಶಸ್ಸನ್ನು ಆಚರಿಸಿದೆ. ನಿರ್ದೇಶಕ ಸ್ವಪ್ನ ಕೃಷ್ಣ ಸಹ ತಂದದೊಂದಿಗೆ ಸಂಭ್ರಮಿಸಿದ್ದಾರೆ. 

ಕಾರ್ತಿಕ್ ಮತ್ತು ದಿವ್ಯಾ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದ್ದು, ಸತ್ಯಾಳನ್ನು ಮದುವೆ ಕಾರ್ಯಕ್ರಮದಿಂದ ದೂರವಿಟ್ಟಿದ್ದಾರೆ. 

Tap to resize

ಗೌತಮಿ ಯಾದವ್, ಸಾಗರ್ ಬಿಳ್ಳಿಗೌಡ, ಗಿರಿಜಾ ಲೋಕೇಶ್, ಪ್ರಿಯಾಂಕಾ ಶಿವಣ್ಣ, ಅನು ಜನಾರ್ಧನ್, ಮಂಜುಶ್ರೀ ಮತ್ತು ರೂಪ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. 

ತಂದೆ ಅಗಲಿದ ನಂತರ ಇಡೀ ಮನೆ ಜವಾವ್ದಾರಿಯನ್ನು ತೆಗೆದುಕೊಳ್ಳುವ ಸತ್ಯ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಅಕ್ಕನ ಮದುವೆಗೆಂದು ಹಣ ಕೂಡಿಡುತ್ತಾಳೆ. 

ಒಬ್ಬ ಹುಡುಗನನ್ನು ಇಷ್ಟ ಪಡುತ್ತಿದ್ದ ದಿವ್ಯಾ ಮದುವೆ ಆಗಲು ಬಂದಿರುವ ಸಂಬಂಧ ಇನ್ನೂ ಸಿರಿವಂತರು ಎಂದು ಪ್ರೀತಿಸಿದ ಹುಡುಗನಿಗೆ ಮೋಸ ಮಾಡಲು ಹೋಗುತ್ತಾಳೆ. 

ಸದಾ ಹಣ ಹಣ ಹಣ ಎಂದು ಆಸೆ ಪಡುವ ದಿವ್ಯಾ ತವರು ಮನೆ ಇನ್ನೂ ಹೆಚ್ಚಿಗೆ ಹಣ ಖರ್ಚು ಮಾಡಲಿ ಎಂದು ಒತ್ತಾಯ ಮಾಡುತ್ತಾಳೆ. ಹೀಗಾಗಿ ಸತ್ಯ ದಿನಕ್ಕೆ ಮೂರ್ನಾಲ್ಕು ಕೆಲಸ ಮಾಡುತ್ತಾಳೆ. 

ಏನೇ ಮಾಡಿದರೂ ಮದುವೆಗೆ ಹಣ ಸಾಕಾಗದ ಕಾರಣ ತನ್ನ ತಂದೆ ನಡೆಸಿಕೊಂಡು ಬಂದಿದ್ದ ಗ್ಯಾರೇಜ್‌ನ ಮಾರಲು ಮುಂದಾಗುತ್ತಾಳೆ. ಅಮೂಲ್ ಬೇಬಿ ಮತ್ತು ಸತ್ಯ ಸ್ನೇಹವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. 

ಧಾರಾವಾಹಿ ಪ್ರಸಾರವಾದ ದಿನದಿಂದಸೂ ಟಿಆರ್‌ಪಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಈ ಧಾರಾವಾಹಿ  300 ಸಂಚಿಕೆಗಳ ಮದುವೆ ಸಂಭ್ರಮ ಶುರು ಮಾಡಿರುವುದು ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. 

ವೀಕ್ಷಕರ ಗಮನ ಸೆಳೆಯುವುದಕ್ಕೆ ಮದುವೆ ಸಂಭ್ರಮದ ಎಪಿಸೋಡ್‌ಗಳನ್ನ ಸಾಮಾನ್ಯವಾಗಿ 200 ಎಪಿಸೋಡ್‌ಗಳ ನಂತರವೇ ಶುರು ಮಾಡಿಕೊಳ್ಳುತ್ತಾರೆ. ಆದರೆ ಸತ್ಯ ಧಾರಾವಾಹಿ ತಂಡ ಕೊಂಚ ಡಿಫರೆಂಟ್.

Latest Videos

click me!