ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿ ಪ್ರಸಾರದ ಸಮಯ ಬದಲಾದರೂ, ವೀಕ್ಷಕರು ಪ್ರೀತಿ ತೋರಿಸುವುದು ಕಡಿಮೆ ಅಗಿಲ್ಲ.
ಚರಣ್ ತಾಯಿ ಪಾತ್ರದಲ್ಲಿ ನಟಿ ಯುಮುನಾ ಶ್ರೀನಿಧಿ ನಟಿಸಿದ್ದಾರೆ. ಪಾತ್ರದ ಹೆಸರು ಧನಲಕ್ಷ್ಮಿ ಆಗಿದ್ದು, ಬಡತನ ಕುಟುಂಬ ಇವರದ್ದಾಗಿರುತ್ತದೆ.
ಎಲ್ಲಾ ಭಾವನೆಗಳನ್ನು ಅದ್ಭುತವಾಗಿ ಅಭಿನಯಿಸುವ ನಟಿ ಯಮುನಾ ಅವರ ಪಾತ್ರಕ್ಕೆ ಪ್ರತಿಯೊಬ್ಬ ಗೃಹಿಣಿಯರೂ ಕನೆಕ್ಟ್ ಆಗುತ್ತಾರೆ.
'ನಾವು ನಿರ್ವಹಿಸುವ ಪಾತ್ರಕ್ಕೆ ವೀಕ್ಷಕರು ತಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನೀಡಿದಾಗ ಅದು ನಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. "ಕನ್ಯಾಕುಮಾರಿ" ಧಾರಾವಾಹಿಯಲ್ಲಿ ನನ್ನ ಧನಲಕ್ಷ್ಮಿ ಪಾತ್ರವನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
'ಧನಲಕ್ಷ್ಮಿ ಪಕ್ಕಾ lower middle class ಮುಗ್ಧ ಮಹಿಳೆ ಆದರೆ ದೊಡ್ಡ ಜವಾಬ್ದಾರಿ ಹೊಂದಿರುತ್ತಾಳೆ. ಅವಳು ಗಂಡ ಮತ್ತು ಕುಟುಂಬ ಆಕೆಯ ಪ್ರಪಂಚ,' ಎಂದು ಯಮುನಾ ಪಾತ್ರದ ಬಗ್ಗೆ ಹೇಳಿದ್ದಾರೆ.
'ಆಕೆ ಗಂಡನಿಗೆ ಜವಾಬ್ದಾರಿ ಇಲ್ಲದ ಕಾರಣ ಇಡೀ ಮನೆ ಅವಳ ಬೆನ್ನು ಮೇಲಿರುತ್ತದೆ. ಎಲ್ಲಾ ಕಷ್ಟಗಳನ್ನು ಎದುರಿಸಿ ಮನೆ ಸಾಗಿಸುವ ಮಹಿಳೆ ಈಕೆ,' ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಯಮುನಾ ಸಮಾಜ ಸೇವೆ ಕಾರ್ಯಕಗಳಲ್ಲೂ ಭಾಗಿಯಾಗಿರುತ್ತಾರೆ. ಹೀಗಾಗಿ ಅವರು ಮಲ್ಟಿ ಟ್ಯಾಲೆಂಟ್ ಎಂದು ನೆಟ್ಟಿಗರು ಅವರ ಫೋಟೋಗೆ ಕಾಮೆಂಟ್ ಮಾಡುತ್ತಾರೆ.