ಅಪ್ಪು ಹೆಸರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರು ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ ಮಾರ್ಚ್ 17ರಂದು ಜೀವನ ಪೂರ್ತಿ ಮರೆಯಲಾಗದ ದಿನವಾಗಿ ಬದಲಾಯಿಸಿಕೊಂಡಿದ್ದಾರೆ.
ಟ್ಯಾಟೂ ಸ್ಟುಡಿಯೋದಲ್ಲಿ
ನಮ್ರತಾ ತಮ್ಮ ನೆಚ್ಚಿನ ನಟನಿಗೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಪ್ರೀತಿ ವ್ಯಕ್ತ ಪಡಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದಾರೆ.
ಬಾಲನಟಿ ನಮ್ಮಿ
ಅಪ್ಪು ಹುಟ್ಟುಹಬ್ಬದ ದಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಡಿಫರೆಂಟ್ ಆಗಿರುವ ಫಾಂಟ್‌ನಲ್ಲಿ ಪುನೀತ್ ರಾಜ್‌ಕುಮಾರ್ ಎಂದು ಕೈ ಮೇಲೆ ಬರೆಸಿಕೊಂಡಿದ್ದಾರೆ.
ಬ್ಲ್ಯಾಕ್ ಔಟ್‌ಫಿಟ್ ಲುಕ್
2007ರಲ್ಲಿ ಪುನೀತ್ ನಟನೆಯ ಮಿಲನಾ ಸಿನಿಮಾದಲ್ಲಿ ನಮ್ರತಾ ಬಾಲನಟಿಯಾಗಿ ಅಭಿನಯಿಸಿದ್ದಾರೆ. ನಟ ಸಹಿಕಹಿ ಚಂದ್ರು ಪುತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಮ್ರತಾ ಸೀರೆ ಲುಕ್
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಮತ್ರಾ ಸುಮಾರು 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಉದ್ದ ಕೂದಲು ಮತ್ತು ಫ್ಯಾಷನ್‌ಗೆ ಫಾಲೋವರ್ಸ್ ಜಾಸ್ತಿ ಅಂದ್ರೆ ತಪ್ಪಾಗದು.
ನಟ ರಘು ಪುತ್ರಿ
ಇನ್ನು ಅಪ್ಪು ನೆನಪು ಜೀವನದಲ್ಲಿ ಸದಾ ಉಳಿಯಬೇಕು ಎಂದು ನಮ್ಮನೆ ಯುವರಾಣಿ ನಟ ರಘು ಗೌಡ ತಮ್ಮ ಮಗಳಿಗೆ ಅಪ್ಪು ಪುತ್ರಿ ಧೃತಿ ಹೆಸರನ್ನು ಇಟ್ಟಿದ್ದಾರೆ.