ಸುದೀಪ್ ಜೊತೆ ನಟಿಸಿ ಸೈ ಎನಿಸಿಕೊಂಡ ಕಲಾವಿದೆ, ಇದೀಗ ಮಾಹಾನಟಿ ಶೋನಲ್ಲಿ ಸ್ಪರ್ಧಿ

Published : Jul 25, 2025, 10:19 AM IST

Mahanati Season 2 Reality Show: ಖಾಸಗಿ ವಾಹಿನಿಯ 'ಮಹಾನಟಿ' ರಿಯಾಲಿಟಿ ಶೋನಲ್ಲಿ ಸುದೀಪ್ ಜೊತೆ ನಟಿಸಿದ್ದ ಬಾಲ ಕಲಾವಿದೆ ಸ್ಪರ್ಧಿಯಾಗಿದ್ದಾರೆ. ಎರಡನೇ ಸೀಸನ್ ಯಶಸ್ವಿಯಾಗಿ ಅರಂಭಗೊಂಡಿದ್ದು, ಸ್ಪರ್ಧಿಗಳು ತಮ್ಮ ನಟನಾ ಕೌಶಲ್ಯದಿಂದ ಮನೆಮಾತಾಗಿದ್ದಾರೆ.

PREV
16

ಅಭಿನಯ ಚಕ್ರವರ್ತಿ, ಕರುನಾಡಿನ ಮಾಣಿಕ್ಯ ಸುದೀಪ್ ಜೊತೆ ಕೆಲಸ ಮಾಡಲು ಉದಯನ್ಮೋಖ ಕಲಾವಿದರು ಕಾಯುತ್ತಿರುತ್ತಾರೆ. ಹಾಗೆಯೇ ಸುದೀಪ್ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಸುದೀಪ್ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದ ಬಾಲ ಕಲಾವಿದೆ ಇಂದು ಖಾಸಗಿ ವಾಹಿನಿಯ 'ಮಹಾನಟಿ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.

26

ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಮಹಾನಟಿ ಶೋನಲ್ಲಿ ನಟಿಯರಾದ ಪ್ರೇಮಾ, ನಿಶ್ವಿಕಾ ಮತ್ತು ನಿರ್ದೇಶಕ ತರುಣ್ ಸುಧೀರ್ ತೀರ್ಪುಗಾರರಾಗಿದ್ದಾರೆ. ನಟ ರಮೇಶ್ ಅರವಿಂದ್ ಕಾರ್ಯಕ್ರಮ ಮಹಾ ತೀರ್ಪುಗಾರರಾಗಿದ್ದಾರೆ. ನಿರೂಪಕಿ ಅನುಶ್ರೀ ಶೋನ ನಿರೂಪಣೆ ಮಾಡುತ್ತಾರೆ. ಎರಡನೇ ಸೀಸನ್ ಯಶಸ್ವಿಯಾಗಿ ಅರಂಭಗೊಂಡಿದ್ದು, ಸ್ಪರ್ಧಿಗಳು ತಮ್ಮ ನಟನಾ ಕೌಶಲ್ಯದಿಂದ ಮನೆಮಾತಾಗಿದ್ದಾರೆ.

36

ಮಹಾನಟಿ ಸೀಸನ್ ಎರಡರಲ್ಲಿ ಹಲವು ಪ್ರತಿಭೆಗಳು ಭಾಗಿಯಾಗಿದ್ದಾರೆ. ಸುದೀಪ್ ಜೊತೆ ಬಾಲ ಕಲಾವಿದೆಯಾಗಿ ನಟಿಸಿದ್ದ ನಟಿಯೂ ಈ ಸ್ಪರ್ಧೆಯಲ್ಲಿದ್ದಾರೆ. ಸದ್ಯ ಈ ಕಲಾವಿದೆಯನ್ನು ಕಾರ್ಯಕ್ರಮದಲ್ಲಿ ಎಲ್ಲರೂ ಜೂನಿಯರ್ ಪ್ರೇಮಾ ಎಂದು ಕರೆಯಲಾಗುತ್ತದೆ. ತಮ್ಮ ನಟನೆಯಿಂದ ಪ್ರತಿ ವಾರವೂ ತೀರ್ಪುಗಾರರಿಂದ ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ವಾರ ನಿಮ್ಮನ್ನು ಚಾಲೆಂಜಿಂಗ್ ಪಾತ್ರದಲ್ಲಿ ನೋಡಲು ಇಷ್ಟಪಡುತ್ತೇನೆ ಎಂದು ಹಿರಿಯ ನಟಿ ಪ್ರೇಮಾ ಹೇಳಿದ್ದಾರೆ.

46

ಯಾರು ಈ ಜೂನಿಯರ್ ಪ್ರೇಮಾ?

ಡ್ರಾಮಾ ಜೂನಿಯರ್ಸ್ ಸೀಸನ್ 2ರ ವಿನ್ನರ್ ವಂಶಿ ಆರ್‌ಕೆ (ವಂಶಿ ರತ್ನ ಕುಮಾರ್) ಮಹಾನಟಿ ಶೋನ ಸ್ಪರ್ಧಿಯಾಗಿದ್ದಾರೆ. ಡ್ರಾಮಾ ಜೂನಿಯರ್ಸ್‌ನಲ್ಲಿ ನಟನೆ ತರಬೇತಿ ಪಡೆದುಕೊಂಡಿದ್ದ ವಂಶಿ ಮತ್ತೊಮ್ಮೆ ತಮ್ಮ ಮೋಹಕ ನಟನೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಡ್ರಾಮಾ ಜೂನಿಯರ್ಸ್‌ನಿಂದ ಹೊರ ಬಂದ ಬಳಿಕ ಬಾಲ ಕಲಾವಿದೆಯಾಗಿ ವಂಶಿ ನಟಿಸಿದ್ದಾರೆ. ಮಂಗಳೂರು ಮೂಲದ ವಂಶಿ, ಸುದೀಪ್ ಜೊತೆ ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ನಿಮಗೆ ಗೊತ್ತಿದೆಯಾ?

56

ಯಾವುದು ಆ ಸಿನಿಮಾ?

2019ರಲ್ಲಿ ಬಿಡುಗಡೆಯಾದ ಪೈಲ್ವಾನ್ ಸಿನಿಮಾದಲ್ಲಿ ವಂಶಿ ಬಾಲನಟಿಯಾಗಿ ನಟಿಸಿದ್ದರು. ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್, ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ನಟಿಸಿದ್ದರು. ವಂಶಿ ಮತ್ತು ಸುದೀಪ್ ನಡುವಿನ ಸಂಭಾಷಣೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುತ್ತಿರುತ್ತದೆ. ಸುದೀಪ್ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ವಂಶಿ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

66

ಸುಮಾ ಪಾತ್ರದಲ್ಲಿ ವಂಶಿ

ನಮ್ಮೂರ ಮಂದಾರ ಹೂವೇ ಕನ್ನಡ ಚಿತ್ರರಂಗದ ಐಕಾನಿಕ್ ಸಿನಿಮಾ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ತ್ರಿಕೋನ ಪ್ರೇಮಕಥೆ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ರಮೇಶ್ ಅರವಿಂದ್ ಮತ್ತು ಪ್ರೇಮಾ ನಟಿಸಿದ್ದರು. ಈ ಚಿತ್ರದ ಪ್ರೇಮಾ ನಟಿಸಿದ್ದ ಸುಮಾ ಪಾತ್ರದಲ್ಲಿ ವಂಶಿ ಪರಕಾಯ ಪ್ರವೇಶ ಮಾಡಿದ್ದರು. ಓಂ ಸಿನಿಮಾದ ಪ್ರೇಮಾ ಪಾತ್ರವನ್ನು ಆಡಿಷನ್‌ನಲ್ಲಿ ನಕಲು ಮಾಡಿದ್ದರು ವಂಶಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories