Bigg Boss Kannada Show ಮುಗಿದ್ಮೇಲೆ ತೆರೆಯಿಂದ ಮರೆಯಾದ ಸೆಲೆಬ್ರಿಟಿಗಳಿವರು! ಯಾರು? ಯಾರು?

Published : Jul 25, 2025, 10:06 AM ISTUpdated : Jul 25, 2025, 10:08 AM IST

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಕೆಲ ಕಲಾವಿದರು ಇಂದು ಒಳ್ಳೆಯ ಸ್ಥಾನ ಪಡೆದಿದ್ದಾರೆ. ಇನ್ನೂ ಕೆಲವರು ತೆರೆಯಿಂದ ದೂರ ಸರಿದಿದ್ದಾರೆ. ಯಾಕೆ? 

PREV
18
ಆ ಸ್ಪರ್ಧಿಗಳು ಯಾರು?

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಭಾಗವಹಿಸಿದ ಕೆಲ ಸ್ಪರ್ಧಿಗಳು ಸದ್ಯ ಸಿನಿಮಾ,  ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿಲ್ಲ. ಯಾಕೆ ಮನರಂಜನೆ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ.

28
ದುನಿಯಾ ರಶ್ಮಿ

ʼದುನಿಯಾʼ ಸಿನಿಮಾ ಬಳಿಕ ರಶ್ಮಿ ಅವರಿಗೆ ಅಷ್ಟಾಗಿ ಸಿನಿಮಾ ಕೈಹಿಡಿಯಲಿಲ್ಲ. ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಶೋನಲ್ಲಿ ಭಾಗವಹಿಸಿದ್ದ ರಶ್ಮಿ ಕೂಡ ಕೆಲ ವರ್ಷಗಳಿಂದ ಸಿನಿಮಾ, ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿಲ್ಲ. 

38
ದಿವಾಕರ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ಶೋನಲ್ಲಿ ಭಾಗವಹಿಸಿದ್ದ ದಿವಾಕರ್‌ ಅವರು ಶೋ ಮುಗಿದ ಬಳಿಕ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದರೆ ಅವರೀಗ ಮತ್ತೆ ಸೇಲ್ಸ್‌ಮ್ಯಾನ್‌ ಆಗಿ ಮುಂದುವರೆಯುತ್ತಿದ್ದಾರೆ ಎನ್ನಲಾಗಿದೆ.

48
ಹುಚ್ಚ ವೆಂಕಟ್‌

ಹುಚ್ಚ ವೆಂಕಟ್‌ ಅವರು ಸಾಕಷ್ಟು ವಿವಾದಗಳನ್ನು ಮಾಡಿದ ಬಳಿಕ ಸದ್ಯ ಎಲ್ಲಿಯೂ ಕಾಣಿಸುತ್ತಿಲ್ಲ. ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾದರೂ ಕೂಡ, ಅದನ್ನು ಅವರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ.

58
ದೊಡ್ಡ ಗಣೇಶ್‌

ಮಾಜಿ ಕ್ರಿಕೆಟರ್‌ ದೊಡ್ಡ ಗಣೇಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿಯೂ ಆಕ್ಟಿವ್‌ ಆದಂತಿಲ್ಲ. ಅವರು ಕೂಡ ಮನರಂಜನಾ ಕ್ಷೇತ್ರದಿಂದ ದೂರ ಉಳಿದಂತಿದೆ.

68
ಮಾಧುರಿ ಇಟಗಿ

ಮಾಧುರಿ ಇಟಗಿ ಅವರು ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ ಬಳಿಕ ಫೋಟೋಗ್ರಾಫರ್‌ ಆಗಿ ಮುಂದುವರೆಯುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸಿದ ಈ ನಟಿ ಯಾಕೆ ಸಿನಿಮಾ ಮಾಡ್ತಿಲ್ಲ ಎಂದು ಅವರೇ ಉತ್ತರಕೊಡಬೇಕಿದೆ.

78
ಚಂದ್ರಿಕಾ

ಬಿಗ್‌ ಬಾಸ್‌ ಕನ್ನಡ ಸೀಸನ್‌ 1 ಶೋ ಸ್ಪರ್ಧಿ ಚಂದ್ರಿಕಾ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಕೆಲ ವರ್ಷಗಳಿಂದ ಇವರು ಕೂಡ ನಟಿಸುತ್ತಿಲ್ಲ. ಚಿತ್ರರಂಗದಲ್ಲಿ ಅಷ್ಟಾಗಿ ಆಕ್ಟಿವ್‌ ಇಲ್ಲ.

88
ಶ್ವೇತಾ ಪಂಡಿತ್‌

ಉತ್ತರ ಕನ್ನಡದ ಶ್ವೇತಾ ಪಂಡಿತ್‌ ಅವರು ಮಾಡೆಲ್‌, ನಟಿಯೂ ಹೌದು. ʼಪರಮಾತ್ಮʼ, ʼಕೇಸ್‌ ಅಫ್‌ ನಂ 18/9’, ‘ಎರಡೊಂದ್ಲ ಮೂರುʼ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 1’ ಶೋನಲ್ಲಿ ಭಾಗವಹಿಸಿದ್ದರು. ಕೆಲ ವರ್ಷಗಳಿಂದ ಶ್ವೇತಾ ಪಂಡಿತ್‌ ಅವರು ತೆರೆ ಮೇಲಾಗಲಿ, ಸೋಶಿಯಲ್‌ ಮೀಡಿಯಾದಲ್ಲಾಗಲೀ ಆಕ್ಟಿವ್‌ ಆಗಿಲ್ಲ.

Read more Photos on
click me!

Recommended Stories