Kannada TV Stars: ಭಾರ್ಗವಿನ ಬಿಟ್ಟು ಅಮ್ಮು ಜೊತೆ ಅರ್ಜುನ್ ಡುಯೆಟ್… ನಂದನ ಸೊಸೆಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್

Published : Jul 15, 2026, 11:46 AM IST

Manoj Kumar and Urjitha: ‘ಭಾರ್ಗವಿ LLB’ ಧಾರಾವಾಹಿಯ ಮನೋಜ್ ಕುಮಾರ್ ಹಾಗೂ ‘ನಂದಗೋಕುಲ’ದ ಊರ್ಜಿತಾ ವಲ್ತಾಜೆ ಜೊತೆಯಾಗಿ ಡುಯೆಟ್ ಹಾಡಿದ್ದು, ಇದೀಗ ಇಬ್ಬರ ಮುದ್ದಾದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನ ಕಾಮೆಂಟ್ ಮಾಡಿ ಏನು ಹೇಳ್ತಿದ್ದಾರೆ ನೋಡಿ.

PREV
16
ಅಮ್ಮು-ಅರ್ಜುನ್ ಡುಯೆಟ್

‘ಭಾರ್ಗವಿ LLB’ ಧಾರಾವಾಹಿಯ ಅರ್ಜುನ್ ಹಾಗೂ ‘ನಂದಗೋಕುಲ’ ಧಾರಾವಾಹಿಯ ಅಮ್ಮು ಅಂದ್ರೆ ಅಮೂಲ್ಯ ಇಬ್ಬರು ಜೊತೆಯಾಗಿ ಡುಯೆಟ್ ಹಾಡಿದ್ದು, ಮುದ್ದಾದ ರೀಲ್ಸ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

26
ಭಲೆ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು

ಅಮೃತವರ್ಷಿಣಿ ಸಿನಿಮಾದ ಭಲೆ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು ಹಾಡಿಗೆ ಈ ಮನೋಜ್ ಕುಮಾರ್ ಮತ್ತು ಊರ್ಜಿತಾ ವಲ್ತಾಜೆ ಜೋಡಿ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ. ಊರ್ಜಿತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದಕ್ಕೆ ಭರ್ಜರಿಯಾಗಿ ರೆಸ್ಪಾನ್ಸ್ ಬಂದಿದೆ, ಕಾಮೆಂಟ್ ಸೆಕ್ಷನ್ ತುಂಬಾನೆ ಮಜವಾಗಿದೆ ಎಂದೇ ಹೇಳಬಹುದು.

36
‘ಭಾರ್ಗವಿ LLB’ ನಿರ್ದೇಶಕಿ ಏನಂದ್ರು?

‘ಭಾರ್ಗವಿ LLB’ ಧಾರಾವಾಹಿ ನಿರ್ದೇಶಕಿಯಾಗಿರುವ ಸ್ವಪ್ನ ಕೃಷ್ಣ ಕಾಮೆಂಟ್ ಮಾಡಿ, ಇದು ಚೆನ್ನಾಗಿದೆ. ಮುಂದೆ ಊರ್ಜಿತಾ ಮತ್ತು ಮನೋಜ್ ರನ್ನು ಜೊತೆ ಸೇರಿಸಿ ಒಂದು ಕಾರ್ಯಕ್ರಮ (ಧಾರಾವಾಹಿ) ಮಾಡೋಣ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಮನೋಜ್ ಮುಂದಿನ ರೀಲ್ಸ್ ನಮ್ಮ ಇಬ್ಬರದು ಮೇಡಂ ಎಂದಿದ್ದಾರೆ.

46
ನಂದಗೋಕುಲ ತಂಡದ ಮುದ್ದಾದ ಕಾಮೆಂಟ್

ನಂದನ ಎರಡನೇ ಸೊಸೆ ಮೀನಾ ಪಾತ್ರಧಾರಿ ಮೇಘಾ ವಿ ಕಾಮೆಂಟ್ ಮಾಡಿ, ಇರು ಇದೆ ನಿನಗೆ ಮನೆಗೆ ಬಾ ಎಂದರೆ, ದೊಡ್ಡ ಸೊಸೆ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ, ಅಮ್ಮು ಮಾವಂಗೆ ಹೇಳ್ತಿನಿ ಇರು ಎಂದಿದ್ದಾರೆ. ಇನ್ನು ವಲ್ಲಭನ ಪಾತ್ರ ನಿರ್ವಹಿಸುವ ಅಭಿದಾಸ್ ಏನಿದು ಏನಿದು ಕರಿಬೆಕ್ಕು ಎಂದರೆ, ರಕ್ಷಾ ಪಾತ್ರಧಾರಿ ಕೃಷ್ಣ ಪ್ರಿಯಾ ಭಟ್ ಕಾಮೆಂಟ್ ಮಾಡಿ ನಮ್ಮ ಅಣ್ಣಂಗೆ ಮೋಸ ಮಾಡೊದಕ್ಕೆ ಹೆಂಗಾದ್ರು ಮನಸ್ಸು ಬಂತು ದ್ರೋಹಿ ಎಂದಿದ್ದಾರೆ.

56
ವೀಕ್ಷಕರು ಏನು ಹೇಳ್ತಿದ್ದಾರೆ?

ಮನೋಜ್ ಮತ್ತು ಊರ್ಜಿತಾ ರೀಲ್ಸ್ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆದರೆ ಈ ಜೋಡಿಯನ್ನು ನಿರೀಕ್ಷೆ ಮಾಡಿರಲೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ನಂದಕುಮಾರ್ ಗೆ ಗೊತ್ತಾದ್ರೆ ಸುಮ್ನೆ ಇರಲ್ಲ ಅಮ್ಮು ಜಾಗೃತೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೂ ಭಾರ್ಗವಿ ಹಾಗೂ ವಲ್ಲಭ ಕೂಡ ಒಂದು ರೀಲ್ಸ್ ಜೊತೆಯಾಗಿ ಮಾಡಿ ರಿವೇಂಜ್ ತೀರಿಸಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದಾರೆ.

66
ಏನಾಗ್ತಿದೆ ಧಾರಾವಾಹಿಗಳಲ್ಲಿ?

‘ನಂದಗೋಕುಲ’ ಧಾರಾವಾಹಿಯಲ್ಲಿ ಅಮೂಲ್ಯಂಗೆ ನಿಧಾನವಾಗಿ ವಲ್ಲಭನ ಮೇಲೆ ಲವ್ ಆಗಿದೆ. ಅದೇ ರೀತಿ ವಲ್ಲಭನ ಮನಸು ಕೂಡ ಬದಲಾಗುತ್ತಿದೆ. ಇನ್ನೊಂದೆಡೆ ‘ಭಾರ್ಗವಿ LLB’ ಧಾರಾವಾಹಿಯಲ್ಲಿ ಕೇಸು ಗೆದ್ದು, ಮಾವನನ್ನು ಶಿಕ್ಷೆಯಿಂದ ಪಾರು ಮಾಡಿದ್ದಾಳೆ ಭಾರ್ಗವಿ. ಪತ್ನಿಯ ಸಾಧನೆ ನೋಡಿ ಖುಷಿ ಪಟ್ಟಿದ್ದಾನೆ ಅರ್ಜುನ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories