ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಭಾವನಾ ಪಾತ್ರಧಾರಿ ದಿಶಾ ಮದನ್ ರಿಯಲ್ ಲೈಫ್‌ನಲ್ಲಿ ಸಖತ್ ಮಾಡರ್ನ್ ಹುಡುಗಿ.
ಮದುವೆ ಸೆಟ್ ಆಗದ ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿರುತ್ತದೆ ಹಾಗೂ ಯಾರಿಗೂ ಗೊತ್ತಿಲ್ಲದೆ ಕುತ್ತಿಗೆಯಲ್ಲಿ ತಾಳಿ ಇಟ್ಟುಕೊಂಡು ಜೀವನ ಮಾಡುವ ಭಾವನಾ ಪರಿಸ್ಥಿತಿ ನೆನಪಿಸಿಕೊಂಡೆ ಕಷ್ಟ ಕಷ್ಟ.
ಸೀರಿಯಲ್‌ನಲ್ಲಿ ಸದಾ ಕಾಟನ್ ಡ್ರೆಸ್, ಜಡೆ ಅದಕ್ಕೊಂದು ಹೂವ ಮುಡಿದು ದೇವಸ್ಥಾನ ಆಫೀಸ್ ಅಂತ ಸುತ್ತಾಡುವ ಭಾವನಾ ರಿಯಲ್ ಲೈಫ್‌ನಲ್ಲಿ ಮಾಡರ್ನ್ ಸುಂದರಿ..
ಹೌದ! ಭಾವನಾ ಉರ್ಫ್ ದಿಶಾ ಮದನ್ ಸಖತ್ ಮಾಡರ್ನ್ ಹುಡುಗಿ. ವಿಯಾನ್ ಮತ್ತು ಅವೀರಾ ಎಂಬ ಇಬ್ಬರು ಮಕ್ಕಳು ಇರುವ ಯಂಗ್ ಮಾಮ್.
ನಟನೆಯನ್ನು ಪ್ಯಾಶನ್‌ಗೆಂದು ಸ್ವೀಕರಿಸಿರುವ ದಿಶಾ ಮದನ್ ಟ್ರ್ಯಾವಲ್ ಮಾಡಲು ತುಂಬಾ ಖುಷಿ ಪಡುತ್ತಾರೆ. ಹೆಚ್ಚಾಗಿ ವಿದೇಶ ಪ್ರಯಾಣ ಮಾಡುತ್ತಾರೆ.
ದಿಶಾ ಮದನ್ ಮಾಡರ್ನ್ ಲುಕ್‌ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಮ್ಮೆಯಾದರೂ ಭಾವನಾ ಮಾಡರ್ನ್ ಡ್ರೆಸ್ ಧರಿಸಬೇಕು ಎಂದು ವೀಕ್ಷಕರು ಡಿಮ್ಯಾಂಡ್ ಇಟ್ಟಿದ್ದಾರೆ.
9 ಲಕ್ಷ 33 ಸಾವಿರ ಫಾಲೊವರ್ಸ್ ಹೊಂದಿರುವ ದಿಶಾ ಮದನ್ ಸುಮಾರ 690 ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿದ್ದಾರೆ. ಪ್ರೆಗ್ನೆಂಟ್ ಆದಾಗ ಹಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿಬಿಟ್ಟರು.