ಎದುರಲ್ಲಿ ಕೋಪ, ಮನಸಲ್ಲಿ ಪ್ರೀತಿ ತೋರೊ ಸಮರ್ಥ್ ನಟನೆಗೆ ಭಾರಿ ಪ್ರಶಂಸೆ…ಈ ಸೈಲೆಂಟ್ ಹುಡುಗ ರಿಯಲ್ ಲೈಫಲ್ಲಿ ರಗಡ್ ಅಂತೆ!

First Published | Aug 17, 2024, 5:06 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗ ಸಮರ್ಥ್ ಆಗಿ ಅಭಿನಯಿಸುತ್ತಿರುವ ದರ್ಶಿತ್ ಗೌಡ ಪಾತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ದರ್ಶಿತ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 
 

ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿ ಅಭಿನಯಿಸುತ್ತಾ ಜನರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಸಮರ್ಥ್ ಪಾತ್ರವೂ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟಕ್ಕೂ ಸಮರ್ಥ್ ಪಾತ್ರಧಾರಿ ನಿಜವಾದ ಹೆಸರೇನು? ಅವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. 
 

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ನದ್ದು, ಮಿಡಲ್ ಕ್ಲಾಸ್ ಹುಡುಗನ ಪಾತ್ರ. ಯಾರಿಗೂ ಯಾವತ್ತೂ ನೋವು ಮಾಡದ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ, ಆದರೆ ಎದುರಲ್ಲಿ ಮಾತ್ರ ಸದಾ ಸಿಡಿಮಿಡಿಗೊಳ್ಳುವ, ಯಾರಿಗೂ ಮುಖ ಕೊಟ್ಟು ಮಾತನಾಡದ ಪಾತ್ರ. 
 

Tap to resize

ಸಮರ್ಥ್ ಪಾತ್ರದಲ್ಲಿ ನಟಿಸುತ್ತಿರುವ ನಟ ದರ್ಶಿತ್ ಗೌಡ (Darshith Gowda). ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಪ್ರೀತಿಯ ದಂಡಪಿಂಡ, ತುಳಸಿಯ ಮುದ್ದಿನ ಮಗ. ಆದರೆ ಅಮ್ಮ ಹೇಳದೆ ಕೇಳದೆ ಮಾಧವ ಜೊತೆ ಮದುವೆಯಾಗಿರೋದನ್ನು ಇಷ್ಟಪಡದೇ, ಆದ್ರೆ ಅಮ್ಮನ ಸಾಧನೆಯನ್ನು ಮನಸಾರೆ ಮೆಚ್ಚಿಕೊಳ್ಳುವ, ಅಮ್ಮನ ಎದುರು ಹುಸಿಕೋಪ ಪ್ರದರ್ಶಿಸುವ ಹುಡುಗ ಸಮರ್ಥ್. 
 

ಬೇರೆ ಕೆಲಸಕ್ಕೆ ಹೋದ್ರೆ ಎಲ್ಲಿ ಅಮ್ಮನಿಂದ ದೂರ ಆಗ್ತೀನಿ ಎನ್ನೋ ಭಯದಿಂದ, ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿದ್ರೂ ಸಹ ಅದನ್ನ ಬಿಟ್ಟು, ಮಾಧವನ ಮನೆಯಲ್ಲಿ ಕಾರ್ ಡ್ರೈವರ್, ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿರೋ ಸಮರ್ಥ್ ಎದುರಲ್ಲಿ ಕೋಪ ಮಾಡೋ, ಮನಸದಲ್ಲಿ ಬೆಟ್ಟದಷ್ಟು ಪ್ರೀತಿ ತುಂಬಿರೋ ಮಗ, ಸಹೋದರ ಎರಡೂ ಹೌದು ತುಳಸಿ -ಸಮರ್ಥ್ ತಾಯಿ ಮಗನ ಸೆಂಟ್ ಮೆಂಟ್ ಸೀನ್ ಗಳಂತೂ ವೀಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು, ಅಷ್ಟು ಅಮೋಘವಾಗಿ ನಟಿಸಿದ್ದರು ದರ್ಶಿತ್. 
 

ಕಣ್ಣಲ್ಲೇ ಮಾತನಾಡೋ, ಯಾರಿಗೂ ಗೊತ್ತಾಗದಂತೆ ಪ್ರೀತಿ ತೋರೋ, ಎದುರಲ್ಲಿ ಎಷ್ಟು ಕಿತ್ತಾಡಿಕೊಂಡರೂ, ತಮ್ಮ ಅಭಿ ಕಷ್ಟದಲ್ಲಿದ್ದಾಗ ಆತನಿಗೆ ನೆರವಾಗುವ ಸಮರ್ಥ್ ಪಾತ್ರ ಜನರಿಗೆ ಎಷ್ಟೊಂದು ಇಷ್ಟ ಆಗಿದೆ ಅಂದ್ರೆ, ಸೀರಿಯಲ್ ನಿಜವಾದ ಹೀರೋ ಸಮರ್ಥ್ ಅಂತಾನೆ ಹೇಳ್ತಿದ್ದಾರೆ ಜನ. ಅಷ್ಟರಮಟ್ಟಿಗೆ ಸಮರ್ಥ್ ಪಾತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ. 
 

ಸಮರ್ಥ್ ಪಾತ್ರಧಾರಿ ದರ್ಶಿತ್ ಗೌಡ, ಈಗಾಗಲೆ ಕನ್ನಡ ತೆಲುಗಿನ ಅಮ್ಮ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಅಷ್ಟೇ ಅಲ್ಲ ಗುಳಿ ಕೆನ್ನೆ ಚೆಲುವ ದರ್ಶಿತ್ ಗೌಡ, ಕಣ್ಸೆಳೆವ ಮಾಯಾವಿ ಎನ್ನುವ ಆಲ್ಬಂ ಹಾಡಿನಲ್ಲಿ ಕೂಡ ನಟಿಸಿದ್ದರು. ದರ್ಶಿತ್ ನಗು, ನಟನೆಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. 
 

ಸೀರಿಯಲ್ ನಲ್ಲಿ ಸಾಫ್ಟ್ ಆಗಿರೋ ದರ್ಶಿತ್ ಮನೆಯಲ್ಲಿ ತುಂಬಾನೆ ರಗಡ್ ಅಂತೆ, ಆದ್ರೆ ಹೊರಗಡೆ ಸೈಲೆಂಟ್ ಆಗಿರೋ ಹುಡುಗ. ದೊರೆಸಾನಿ ಧಾರಾವಾಹಿಗೆ ಆಡಿಶನ್ ಕೊಟ್ಟು ಸೀರಿಯಲ್ ಆಯ್ಕೆಯಾಗಿದ್ದರು, ಕೊರೋನಾ ಟೈಮಲ್ಲಿ ತೆಲುಗಿನ ಅಮ್ಮ ಸೀರಿಯಲ್ (telugu serial) ಮಾಡ್ತಿದ್ರಿಂದ ಕಷ್ಟದ ಸಮಯದಲ್ಲೂ ಕಷ್ಟ ಅಂತ ಅನ್ಸಿಲ್ವಂತೆ ಈ ನಟನಿಗೆ. ಸದ್ಯಕ್ಕಂತೂ ದರ್ಶಿತ್ ಶ್ರೀರಸ್ತು ಶುಭಮಸ್ತುವಿನ ಸಮರ್ಥ್ ಪಾತ್ರವನ್ನ ಜೀವಿಸ್ತಿದ್ದಾರೆ. 
 

Latest Videos

click me!