ಕನ್ನಡ ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್ ಸ್ಪರ್ಧಿ ಚಂದನಾ ಅನಂತಕೃಷ್ಣ ಮತ್ತು ಸಹೋದರಿ ಚಿನ್ಮಯಿ ಅನಂತಕೃಷ್ಣ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಾನವಿ ಪಾತ್ರದಲ್ಲಿ ಚಂದನಾ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಫ್ಯಾಮಿಲಿಯ ಪ್ರೀತಿ ಮಾತ್ರವಲ್ಲ ವೀಕ್ಷಕರ ಪ್ರೀತಿ ಕೂಡ ಗಳಿಸಿದ್ದಾರೆ.
ಚಂದನಾ ಮತ್ತು ಅಕ್ಕ ಚಿನ್ಮಯಿ ನೋಡಲು ಒಂದೇ ತರ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದಾಗಲೆಲ್ಲಾ...ಇಬ್ರು ಝೆರಾಕ್ಸ್, ಮೂಗು ಸೇಮ್ ಟು ಸೇಮ್, ಸ್ಮೈಲ್ ಸೇಮ್ ಟು ಸೇಮ್ ಎಂದು ಕಾಮೆಂಟ್ ಮಾಡುತ್ತಾರೆ.
'ತಾಯಿ,ಅಕ್ಕ ಮತ್ತು ತಮ್ಮ..ಮೂವರನ್ನು ನಾನು ಈಕೆಯಲ್ಲಿ ನೋಡುತ್ತೀನಿ. ಆಕೆ ನನ್ನ ಸಂತೋಷ. ನಾನು ಎಲ್ಲವನ್ನು ಕಳೆದುಕೊಂಡಾಗ ನನ್ನ ಜೊತೆ ನಿಂತಿದ್ದಾಳೆ' ಎಂದು ಚಂದನ್ ಬರೆದುಕೊಂಡಿದ್ದಾರೆ.
'ಪರಿಸ್ಥಿತಿ ಏನೇ ಇರಲಿ ನನ್ನ ಜೊತೆ ನಿಂತು ಫೈಟ್ ಮಾಡುತ್ತಾಳೆ. ನಿಸ್ವಾರ್ಥ ವಿಲ್ಲದೆ ನನ್ನ ಜೊತೆಯಾಗಿರುತ್ತಾಳೆ. ಈಕೆ ನನ್ನ ಏಂಜಲ್' ಎಂದು ಚಂದನಾ ಹೇಳಿದ್ದಾರೆ.
ಚಂದನಾ ಅಪ್ಪಿತಪ್ಪಿ ಸೀರಿಯಲ್ ಶೂಟಿಂಗ್ ಮಿಸ್ ಮಾಡಿದರೆ ಒಂದೆರಡು ಡೂಪ್ ಶೂಟಿಂಗ್ ಮಾಡಲು ಅವರ ಅಕ್ಕ ಬಂದರೂ ಯಾರಿಗೂ ತಿಳಿಯುವುದಿಲ್ಲ ಅಂತಾರೆ ನೆಟ್ಟಿಗರು.