6 ವರ್ಷಕ್ಕೆ 20 ಲಕ್ಷ ಮೌಲ್ಯದ ದುಬಾರಿ ಕಾರಿನ ಒಡತಿಯಾದ ಲಕ್ಷ್ಮೀ ನಿವಾಸ ಖುಷಿ… ನೆಟ್ಟಿಗರಿಗೊಂದು ಡೌಟ್!

First Published | Aug 27, 2024, 4:48 PM IST

ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನಾ ಸಾಕು ಮಗಳಾಗಿ ನಟಿಸುತ್ತಿರುವ ಬಾಲನಟಿ  ಖುಷಿ ತಾ ಅಲಿಯಾಸ್ ನಿಶಿತಾ ಇದೀಗ ದುಬಾರಿ ಹ್ಯುಂಡೈ ಕ್ರೆಟಾ ಕಾರನ್ನು ಖರೀದಿಸಿದ್ದು, ಬರೀ ಆರು ವಯಸ್ಸಿಗೆ ದುಬಾರಿ ಕಾರಿನ ಒಡೆತನ ಹೊಂದಿರೋದನ್ನ ಪ್ರಶ್ನಿಸಿದ್ದಾರೆ ನೆಟ್ಟಿಗರು. 
 

ಲಕ್ಷ್ಮೀ ನಿವಾಸ (Lakshmi Nivasa)  ಧಾರಾವಾಹಿಯಲ್ಲಿ ಭಾವನಾ ಸಾಕು ಮಗಳಾಗಿ, ಒಂದು ಕಾಲಿನ ಮೂಳೆ ಮುರಿದುಕೊಂಡು ಡೊಂಕಾಗಿ ನಡೆಯುತ್ತಾ, ತಮ್ಮ ಅಮೋಘ ಅಭಿನಯ,  ಮುದ್ದು ಮಾತಿನಲ್ಲಿ ಎಲ್ಲರನ್ನೂ ಸೆಳೆಯುವ ಖುಷಿ ಅಂದ್ರೆ ಎಲ್ಲರಿಗೂ ಇಷ್ಟ. ಇದೀಗ 6 ವರ್ಷದ ಖುಷಿ ದೊಡ್ಡ ಸಾಧನೆ ಮಾಡಿದ್ದಾರೆ. 

ಹೌದು, ಖುಷಿ ಪಾತ್ರದಲ್ಲಿ ನಟಿಸುತ್ತಿರುವ ಬಾಲ ನಟಿ ನಿಶಿತಾ (Nishitha). ಈಕೆ ತಮ್ಮ ಮುದ್ದು ಮುದ್ದು ಮಾತು, ನಟನೆಯಿಂದ ಸೀರಿಯಲ್ ಪ್ರಿಯರಿಗೆ ಇಷ್ಟವಾಗಿದ್ರೆ, ಈಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್, ದಿನವೊಂದಕ್ಕೆ ಡ್ಯಾನ್ಸ್, ತನ್ನ ಆಕ್ಟಿವಿಟಿ ವಿಡಿಯೋ ಹಾಕೋ ಮೂಲಕ ಸಾವಿರಾರು ಅಭಿಮಾನಿಗಳನ್ನ ಪಡೆದಿದ್ದಾರೆ ಈಕೆ. 
 

Tap to resize

ಕೇವಲ ಆರು ವರ್ಷ ವಯಸ್ಸಿನ ನಿಶಿಕಾ ಇದೀಗ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಹೌದು, ನಿಶಿತಾ ಈಗ ಹ್ಯುಂಡೈ ಕ್ರೆಟಾ ಕಾರನ್ನು (Hundai Creta Car) ಖರೀದಿಸಿದ್ದು, ಕಾರು ಖರೀದಿ ಸಂದರ್ಭದಲ್ಲಿ ತೆಗೆದಂತಹ ವಿಡಿಯೋ ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಆಕೆ ದಾಖಲೆ ಪತ್ರಗಳಿಗೆ ಸಹಿಹಾಕುವ ಫೋಟೋಗಳು ಸದ್ಯ ಸದ್ದು ಮಾಡುತ್ತಿದೆ. 
 

ಹೌದು ನಿಶಿಕಾ ಬರೋಬ್ಬರಿ 20 ಲಕ್ಷ ಮೌಲ್ಯದ ಹ್ಯುಂಡೈ ಕ್ರೆಟಾ ಕಾರನ್ನು ಖರೀದಿಸಿದ್ದಾರೆ. ಕಾರಿನ ಶೋ ರೂಮಿಗೆ ಹೋಗುವ, ಅಲ್ಲಿ ಕಾರು ಖರೀದಿಸಲು ಡಾಕ್ಯೂಮೆಂಟ್ ಗಳಿಗೆ ಸಹಿ ಹಾಕುವ ಹಾಗೂ ಕಾರಿನಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಇದನ್ನ ನೋಡಿದ ಜನರಿಗೆ ಪ್ರಶ್ನೆಯೊಂದು ಮೂಡಿದ್ದು, ಅಪ್ರಾಪ್ತರು ಡಾಕ್ಯೂಮೆಂಟ್ ಸಹಿ ಹಾಕಬಹುದೇ ಎಂದು ಕೇಳಿದ್ದಾರೆ. 
 

ಇದಕ್ಕೆ ಉತ್ತರಿಸಿರೋ ನಿಶಿಕಾ ತಾಯಿ ಅಪ್ರಾಪ್ತರು ಡಾಕ್ಯೂಮೆಂಟ್ ಸಹಿ ಹಾಕುವ ಹಾಗಿಲ್ಲ, ಆಕೆಗೆ ಸೈನ್ ಮಾಡೊದು ಇಷ್ಟ ಅದಕ್ಕಾಗಿ ಫೇಕ್ ಡಾಕ್ಯೂಮೆಂಟ್ ಮಾಡಿ, ಅದಕ್ಕೆ ಸೈನ್ ಮಾಡಿದ್ದು ಅಷ್ಟೇ ಎಂದಿದ್ದಾರೆ. ಕಾರು ನಿಶಿಕಾ ತಾಯಿ ಪ್ರಿಯಾ ಹೆಸರಿನಲ್ಲಿದೆ. 
 

ಈ ಪುಟಾಣಿ ಬಾಲೆ ಈ ವಯಸ್ಸಿನಲ್ಲೇ ಇಷ್ಟೊಂದು ದೊಡ್ಡ ಸಾಧನೆ ಮಾಡಿರೋದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಕಾರು ಖರೀದಿಸಿದ ನಿಶಿಕಾಗೆ ಅಭಿನಂದನೆಗಳ(congratulations) ಮಹಾಪೂರವೇ ಹರಿದು ಬಂದಿದೆ, ಇನ್ನೂ ಕೆಲವರು ನಮಗೆ ಈಗ ಸ್ಕೂಟರ್ ಖರೀದಿಸೋಕು ಗತಿ ಇಲ್ಲ, ಈ ಪುಟಾಣಿ ಈಗ್ಲೇ ಕಾರು ಖರೀದಿ ಮಾಡಿದ್ದಾರೆ, ಬೇಷ್ ಎಂದು ಹೊಗಳಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಿಶಿಕಾ ಬಾಲ ನಟಿ ಹಾಗೂ ಕಿಡ್ ಮಾಡೆಲ್ ಕೂಡ ಹೌದು. ಇವರ ಇನ್’ಸ್ಟಾಗ್ರಾಮ್ ಖಾತೆಯನ್ನು ತಾಯಿ ಪ್ರಿಯಾ ಹ್ಯಾಂಡಲ್ ಮಾಡ್ತಿದ್ದಾರೆ. ಈ ಪುಟಾಣಿಗೆ ಈಗಾಗಲೇ 926 ಸಾವಿರ ಫಾಲೋವರ್ಸ್ ಇದ್ದಾರೆ. ಯೂಟ್ಯೂಬ್ ನಲ್ಲೂ ಆಕ್ಟೀವ್ ಆಗಿರುವ ಇವರು ಈಗಾಗಲೇ ಗೋಲ್ಡನ್ ಬಟನ್ (golden button) ಸಹ ಪಡೆದಿದ್ದಾರೆ. 

Latest Videos

click me!