ಪಾಯಲ್ ಯಾದವ್‌ ಮೀರಿಸೋ ಹಾಗೆ ಸೀರೆಯುಟ್ಟ ನಮ್ರತಾ ಗೌಡ!

First Published | Aug 27, 2024, 4:11 PM IST

ಪಾರುಲ್ ಯಾದವ್ ಕಪ್ಪು ಸೀರೆ ಬೋಲ್ಡ್ ಫೋಟೊ ವೈರಲ್ ಆಗುತ್ತಿದ್ದಂತೆ, ಇದೀಗ ಅವರನ್ನ ಮೀರಿಸೋ ಹಾಗೆ ನಟಿ ನಮ್ರತಾ ಗೌಡ ಫೋಟೊ ಶೂಟ್ ಮಾಡಿಸಿದ್ದಾರೆ. 
 

ಪ್ಯಾರ್ ಗೆ ಆಗ್ಬಿಟೈತೆ ನಟಿ ಪಾರುಲ್ ಯಾದವ್ ಸೊಂಟಕ್ಕಿಂತ ತುಸು ಹೆಚ್ಚು ಕೆಳಕ್ಕೆ ಜಾರಿ ಬ್ಲ್ಯಾಕ್ ಸೀರೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದು, ವೈರಲ್ ಆಗಿತ್ತು. ಇದೀಗ ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಸಖತ್ ಹಾಟ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದಾರೆ. 
 

ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Season 10) ಮೂಲಕ ಮನೆಮಾತಾದ ನಟಿ ನಮ್ರತಾ ಗೌಡ, ಸ್ಲೀವ್ ಲೆಸ್ ಬ್ಲೌಸ್ ಜೊತೆ ಕಪ್ಪು ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯುಟ್ಟು, ಅದಕ್ಕೊಂಡು ಜಾಗ್ವರ್ ಬೆಲ್ಟ್ ತೊಟ್ಟು ಸಖತ್ ಸ್ಟೈಲಿಶ್ ಲುಕ್ ನೀಡಿದ್ದಾರೆ. 
 

Tap to resize

ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರೋ ಸೀರೆ ಮತ್ತು ಜ್ಯುವೆಲ್ಲರಿ ಧರಿಸಿರುವ ನಮ್ರತಾ ಗೌಡ, ಕೈಗಳಿಗೆ ನೆಟೆಡ್ ಗ್ಲೌಸ್ ಕೂಡ ಧರಿಸಿದ್ದಾರೆ. ಕುತ್ತಿಗೆಗೊಂದು ಸಿಂಪಲ್ ಸರ, ಕೈಬೆರಳಲ್ಲಿ ಉಂಗುರ ತೊಟ್ಟು ಸಿಂಪಲ್ ಆದ್ರೆ ಎಲಿಗೆಂಟ್ ಲುಕ್ ನಲ್ಲಿ ತುಂಬಾನೆ ಚೆನ್ನಾಗಿ ಪೋಸ್ ನೀಡಿದ್ದಾರೆ ನಟಿ. 
 

ಅಷ್ಟೇ ಅಲ್ಲ ತಮ್ಮ ಫೋಟೊಗಳ ಜೊತೆಗೆ ಸಖತ್ ಆಗಿರೋ ಪಂಚಿಂಗ್ ಕ್ಯಾಪ್ಶನ್ ಕೂಡ ಹಾಕಿದ್ದು, ಕೆಲವೊಂದು ಯುದ್ಧಗಳು ನಮಗೆ ಗೆಲ್ಲೋದಕ್ಕೆ ಸಹಾಯ ಮಾಡುತ್ತೆ (Some wars help us bloom) ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಟ್ರೋಲ್ ಮಾಡೋರಿಂದಲೇ ನಾನು ಗೆಲ್ತೀನಿ ಅಂತ ಇರ್ಬೋದೇನೊ. 
 

ಯಾಕೇ ಇದನ್ನ ಹೇಳ್ತಿದೀವಿ ಅಂದ್ರೆ, ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಮ್ರತಾ ಗೌಡ, ಹೆಚ್ಚಾಗಿ ತಮ್ಮ ಮಾಡರ್ನ್, ಟ್ರೆಡಿಶನಲ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಕಿಶನ್ ಬಿಳಗಲಿ ಜೊತೆಗಿನ ಡ್ಯಾನ್ಸ್ ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

ಕಿಶನ್ ಜೊತೆಗಿನ ವಿಡಿಯೋಗಳಿಗೆ ತುಂಬಾನೆ ಕೆಟ್ಟದಾಗಿ ಕಾಮೆಂಟ್ ಗಳು (bad comments) ಬರುತ್ತಿದ್ದು, ಇದರಿಂದ ನಮ್ರತಾಗೆ ಬೇಜಾರಾಗ್ತಿದೆ ಎಂದು ಸಹ ಹೇಳಿದ್ದರು. ನನ್ನ ಮತ್ತು ಕಿಶನ್ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಗಳು ಬೇಸ್ ಲೆಸ್, ಕಿಶನ್ ಒಳ್ಳೆಯ ಡ್ಯಾನ್ಸರ್ ನಾವು ಕೊಲಾಬರೇಶನ್ ನಲ್ಲಿ ಕೆಲಸ ಮಾಡ್ತಿದ್ದೀವಿ ಎಂದು ಹೇಳಿದ್ದರು. 
 

ಇದೀಗ Some wars help us bloom ಎಂದು ಕ್ಯಾಪ್ಶನ್ ನೀಡಿದ್ದು, ಕೆಟ್ಟದಾಗಿ ಮಾತನಾಡುವ ವ್ಯಕ್ತಿಗಳಿಂದಲೇ ನಾವು ಬೆಳೆಯೋದಕ್ಕೆ ಸಾಧ್ಯ ಅಂತ ಇನ್ ಡೈರೆಕ್ಟ್ ಆಗಿ ಹೇಳಿದ್ದಾರೆ ಅನಿಸುತ್ತೆ. ಅದೇನೇ ಇರಲಿ ನಟಿಯ ಬ್ಲ್ಯಾಕ್ ಸೀರೆ ಲುಕ್ ಮಾತ್ರ ತುಂಬಾನೆ ಚೆನ್ನಾಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ನಮ್ ಹುಡುಗಿ, ಹಾಟ್, ಬ್ಯೂಟಿ, ಗಾರ್ಜಿಯಸ್ ಎನ್ನುತ್ತಾ ಹಾರ್ಟ್ ಇಮೋಜಿಗಳ ಸುರಿಮಳೆ ಸುರಿಸಿದ್ದಾರೆ. 
 

Latest Videos

click me!