ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿ ಟಿಆರ್‌ಪಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ದಿನದಿಂದ ದಿನಕ್ಕೆ ಕಥೆಯನ್ನು ಅದ್ಭುತವಾಗಿ ಮುಂದುವರೆಸುತ್ತಿದ್ದಾರೆ ನಿರ್ದೇಶಕರು ಅಂತಾರೆ ವೀಕ್ಷಕರು.
ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಯೂ ವೀಕ್ಷಕರಿಗೆ ತುಂಬಾನೇ ಕನೆಕ್ಟ್ ಆಗುತ್ತಾರೆ. ಅದರಲ್ಲೂ ಭಾವನಾ ಪಾತ್ರದಲ್ಲಿ ಮಿಂಚುತ್ತಿರುವ ದಿಶಾ ಮನದ್ ಅಂದ್ರೆ ಫೇಮಸ್. ಭಾವನಾ ಲುಕ್ ಮತ್ತು ಮಾತನಾಡುವ ಶೈಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ಸೀರಿಯಲ್‌ನಲ್ಲಿ ಹೆಚ್ಚಾಗಿ ಕಾಟನ್ ಸೀರೆ, ಸೆಲ್ವಾರ್ ಧರಿಸುವ ದಿಶಾ ಮದನ್ ಇತ್ತೀಚಿಗೆ ಸಿಕ್ಕಾಪಟ್ಟೆ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಬಣ್ಣದ ಡಿಸೈನರ್ ಗೌನ್ ಧರಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಇತ್ತೀಚಿಗೆ ದುಬೈನಲ್ಲಿ ನಡೆದ ಸೈಮಾ 2024 ಅವಾರ್ಡ್ ಕಾರ್ಯಕ್ರಮದಲ್ಲಿ ದಿಶಾ ಮದನ್ ಭಾಗಿಯಾಗಿದ್ದರು. ಅಲ್ಲಿದ್ದ ಅದೆಷ್ಟೋ ಸಿನಿಮಾ ಸ್ಟಾರ್‌ಗಳು ಜೊತೆ ದಿಶಾ ಮದನ್ ಕೂಡ ಮಿಂಚಿದ್ದಾರೆ. ಈ ಕಾರ್ಯಕ್ರಮಕ್ಕೆ ದಿಶಾ ಧರಿಸಿದ್ದ ಗೌನ್ ಇದೇ.
ಅಯ್ಯೋ! ನೀವು ಇದ್ದಕ್ಕಿದ್ದಂತೆ ಈ ರೀತಿ ಲುಕ್ ಬದಲಾಯಿಸಿ ಬಿಟ್ಟರೆ ನಮ್ಮ ಸಿದ್ದೇಗೌಡ್ರು ಏನ್ ಮಾಡ್ಬೇಕು..ಗೌರಮ್ಮ ಅಂದುಕೊಂಡು ನಿಮ್ಮನ್ನು ಲವ್ ಮಾಡುತ್ತಿದ್ದಾರೆ ದಯವಿಟ್ಟು ಮೋಸ ಮಾಡಬೇಡಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ನಟಿಸುವ ಮುನ್ನ ದಿಶಾ ಕುಲವಧು ಧಾರಾವಾಹಿಯಲ್ಲಿ ಮಿಂಚಿದ್ದರು. ಅದಾದ ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇದರಿಂದ ದಿಶಾ ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಂಡರು.
ಹಂಬಲ್ ಪೊಲಿಟೀಷಿಯನ್ ನಾಗರಾಜ್ ಮತ್ತು ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ದಿಶಾ ನಟಿಸಿದ್ದಾರೆ. ಸೀರಿಯಲ್ ಜೊತೆ ಆನ್‌ಲೈನ್‌ನಲ್ಲಿ ಹಲವು ಬ್ರ್ಯಾಂಡ್‌ಗಳ ಪ್ರಮೋಷ್ ಮತ್ತು ಜಾಹೀರಾತುಗಳಲ್ಲಿ ದಿಶಾ ಮದನ್ ಮಿಂಚುತ್ತಾರೆ.