ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಲಕ್ಷ್ಮೀ ಟಿಫನ್ ರೂಮ್ ನಾಯಕಿ‌...ಇಲ್ಲಿ ಸೋತ ನಟಿ ಅಲ್ಲಾದ್ರೂ ಗೆಲ್ತಾರ?

First Published | Sep 19, 2024, 6:00 PM IST

ಸದ್ಯದಲ್ಲೇ ತಮಿಳು ಕಿರುತೆರೆ ಸ್ಟಾರ್ ವಿಜಯ್ ವಾಹಿನಿಯಲ್ಲಿ ಶುರುವಾಗುತ್ತಿರುವ ಕಣ್ಮಣಿ ಅಂಬುದನ್ ಧಾರವಾಹಿಯ ನಾಯಕಿಯಾಗಿ ಲಕ್ಷ್ಮೀ ಟಿಫನ್ ರೂಮ್ ಧಾರವಾಹಿ ನಟಿ ಮಧುಮಿತಾ ಆಯ್ಕೆಯಾಗಿದ್ದಾರೆ. 
 

ಕನ್ಯಾದಾನ ಹಾಗೂ ಲಕ್ಷ್ಮೀ ಟಿಫನ್ ರೂಮ್ (Lakshmi Tiffin Room) ಧಾರಾವಾಹಿಯ ನಾಯಕಿಯಾಗಿದ್ದ ಮಧುಮಿತಾ ಇದೀಗ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನ ಕಣ್ಮಣಿ ಅಣ್ಮುಡನ್ ಧಾರಾವಾಹಿಗೆ ನಾಯಕಿಯಾಗಿ ಮಧುಮಿತಾ ನಟಿಸುತ್ತಿದ್ದಾರೆ. 
 

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಟಿಫನ್ ರೂಂ ಧಾರಾವಾಹಿಯಲ್ಲಿ ಮಧುಮಿತಾ ಲಕ್ಷ್ಮೀಯಾಗಿ ನಟಿಸಿದ್ದರು. ಐಎಎಸ್ ಆಫೀಸರ್ ಆಗುವ ಕನಸು ಹೊತ್ತಿರುವ ಹುಡುಗಿ ಹೆಣ್ಣುಮಕ್ಕಳೆಂದರೆ ಅಡುಗೆ ಕೋಣೆಗೆ ಮಾತ್ರ ಸೀಮಿತ ಎನ್ನುವ ಕುಟುಂಬಕ್ಕೆ ಮದುವೆಯಾಗಿ ಹೋದರೆ ಏನಾಗುತ್ತೆ ಅನ್ನೋದು ಕಥೆಯಾಗಿತ್ತು, 
 

Tap to resize

ಆರಂಭದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಲಕ್ಷ್ಮೀ ಟಿಫನ್ ರೂಮ್, ಕಥೆ ಚೆನ್ನಾಗಿ ಓಡದೇ ಕೇವಲ ಮೂರು ತಿಂಗಳಿಗೆ ಧಾರಾವಾಹಿ ಮುಗಿಸಬೇಕಾಗಿ ಬಂದಿತ್ತು. ಹಾಗಾಗಿ ಕೊನೆಯ ವಾರದಲ್ಲೇ ಕಥೆಗೆ ಟ್ವಿಸ್ಟ್ ಕೊಟ್ಟು ಅಜ್ಜನ ಮನಸ್ಸು ಬದಲಾಗುವಂತೆ ಮಾಡಲಾಗಿತ್ತು, ಆದರೆ ಲಕ್ಷ್ಮೀ ಐಎಎಸ್ ಆಫೀಸರ್ (IAS Officer) ಆಗುತ್ತಾಳೆ ಎಂದು ಕಾದು ಕೂತಿದ್ದ ವೀಕ್ಷಕರಿಗೆ ಮಾತ್ರ ಭಾರಿ ಬೇಸರವನ್ನುಂಟು ಮಾಡಿತ್ತು. 
 

ಕನ್ನಡದಲ್ಲಿ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸಿದ್ದರೂ ನೀರೀಕ್ಷಿಸಿದಷ್ಟು ಯಶಸ್ಸು ಕಾಣದೇ ಸೋತಿದ್ದ ಮಧುಮಿತಾ ಇದೀಗ ತಮಿಳು ಸೀರಿಯಲ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದು, ಅಲ್ಲಿ ಯಶಸ್ಸು ಕಾಣುತ್ತಾರ ಅನ್ನೋದನ್ನು ಕಾದು ನೋಡಬೇಕು. 
 

ಕಣ್ಮಣಿ ಅಣ್ಮುಡನ್ (Kanmani Anbudan) ಸೀರಿಯಲ್ ಪ್ರೊಮೋ ಈಗಾಗಲೇ ಬಿಡುಗಡೆಯಾಗಿದ್ದು, ಕಣ್ಮಣಿಯಾಗಿ ಮಧುಮಿತಾ ನಟಿಸುತ್ತಿದ್ದಾರೆ. ಈಕೆ ಬಡ ಕುಟುಂಬದ ಸಿಂಪಲ್ ಹುಡುಗಿ. ಈಕೆಯ ಸ್ನೇಹಿತೆ ವೆನ್ನಿಲ್ಲಾ ಶ್ರೀಮಂತೆ. ಇಬ್ಬರೂ ಎಂಥ ಸಂದರ್ಭ ಬಂದರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸ್ನೇಹಿತರು. 
 

ಇಲ್ಲಿ ಕಣ್ಮಣಿಗೆ ಒಬ್ಬ ಹುಡುಗನ ಮೇಲೆ ಕ್ರಶ್ ಆಗುತ್ತೆ, ಆ ಹುಡುಗನಿಗೆ ಕಣ್ಮಣಿ ಸ್ನೇಹಿತೆ ವೆನ್ನಿಲಾ ಮೇಲೆ ಲವ್ ಆಗುತ್ತೆ. ವೆನ್ನಿಲ್ಲಾಗೂ ಅವನ ಮೇಲೆ ಲವ್ ಆಗುತ್ತಾ? ಗೊತ್ತಿಲ್ಲ. ಈ ತ್ರಿಕೋನ ಪ್ರೇಮ ಕತೆ ಮುಂದೆ ಹೇಗೆ ಸಾಗುತ್ತದೆ? ಯಾರು ಯಾರಿಗೆ ಸೇರುತ್ತಾರೆ ಅನ್ನೋದನ್ನ ಕಾದು ನೋಡಬೇಕು. 
 

ಹೊಸ ಪಾತ್ರದಿಂದ ಮಧುಮಿತಾ (Madhumitha) ಖುಷಿಯಾಗಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೀರಿಯಲ್ ಪ್ರೊಮೋ, ಫೋಟೋ, ತಮ್ಮ ಕ್ಯಾರೆಕ್ಟರ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇಲ್ಲಿ ಸಿಗದ ಯಶಸ್ಸು ತಮಿಳಿನಲ್ಲಾದ್ರೂ ಸಿಗಲಿ ಎಂದು ಹಾರೈಸೋಣ. 
 

Latest Videos

click me!