ಗೋವಾದಲ್ಲಿ ನೀನಾದೆ ನಾ ಜೋಡಿ ದಿಲೀಪ್ ಶೆಟ್ಟಿ-ಖುಷಿ…. ಬೇಗ ಗುಡ್ ನ್ಯೂಸ್ ಕೊಡಿ ಅಂತಿದ್ದಾರೆ ಫ್ಯಾನ್ಸ್

First Published | Sep 19, 2024, 8:46 PM IST

ನೀನಾದೆ ನಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಜೋಡಿಗಳಾದ ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ಇದೀಗ ಜೊತೆಯಾಗಿ ಗೋವಾ ಟೂರ್ ಮಾಡುತ್ತಿದ್ದು, ಈ ಮುದ್ದಾದ ಜೋಡಿಯನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. 
 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ನೀನಾದೆ ನಾ (Neenade Naa) ಜೋಡಿಗಳಾದ ವಿಕ್ರಮ್ ಮತ್ತು ವೇದಾ ಅಂದ್ರೆ ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ. ಈ ಜೋಡಿಯನ್ನು ರಿಯಲ್ ಲೈಫಲ್ಲೂ ಜೊತೆಯಾಗಿ ನೋಡಬೇಕು ಎನ್ನುವ ಹಂಬಲ ಅಭಿಮಾನಿಗಳದ್ದು. 
 

ನೀನಾದೆ ನಾ ಹಿಂದಿನ ಅಧ್ಯಯ ಮುಗಿದಾಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ, ಅದರ ಮುಂದುವರೆದ ಹೊಸ ಅಧ್ಯಾಯದಲ್ಲಿ ಮತ್ತೆ ದಿಲೀಪ್ ಶೆಟ್ಟಿ (Dileep Shetty) ವಿಕ್ರಮ್ ಆಗಿ ಹಾಗೂ ಖುಷಿ ಶಿವು ವೇದಾ ಆಗಿ ಕರಾವಳಿಗರಾಗಿ ಕಾಣಿಸಿಕೊಂಡಿದ್ದು ವೀಕ್ಷಕರ ಸಂಭ್ರಮ ಹೆಚ್ಚಿಸಿದೆ. 
 

Tap to resize

ವಿಕ್ರಮ್-ವೇದಾ ಎಂದೇ ಕನ್ನಡಿಗರ ನಡುವೆ ಖ್ಯಾತಿ ಪಡೆದಿರುವ ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು (Kushi Shivu) ಇದೀಗ ಜೊತೆಯಾಗಿ ಗೋವಾ ಟೂರ್ ಮಾಡಿ, ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಮುದ್ದಾದ ಜೋಡಿಯನ್ನು ಹೀಗೆ ಒಂದಾಗಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

ಖುಷಿ ಶಿವು  ಅವರ ತಂದೆ ಹಾಗೂ ದಿಲೀಪ್ ಅವರ ಸಹೋದರ ಧೀರಜ್ ಶೆಟ್ಟಿ ಹಾಗೂ ತಾಯಿ ಐದು ಜನ ಸೇರಿ ಗೋವಾಕ್ಕೆ ಹಾರಿದ್ದಾರೆ. ಅಲ್ಲಿ ಜೊತೆಯಾಗಿ ಕಳೆದ ಸಮಯದ ಮುದ್ದಾದ ಫೋಟೊಗಳನ್ನು ಸೆರೆ ಹಿಡಿದು ದಿಲೀಪ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಇಬ್ಬರ ಫ್ಯಾಮಿಲಿ ಜೊತೆಯಾಗಿ ಗೋವಾ ಟೂರ್  (Goa Tour) ಮಾಡಿರೋದನ್ನು ನೋಡಿ ಅಭಿಮಾನಿಗಳಲ್ಲಿ ಗುಸು ಗುಸು ಶುರುವಾಗಿದೆ. ಇಬ್ಬರ ನಡುವೆ ಏನೋ ನಡಿತಿದೆ. ನಮಗೆ ಆದಷ್ಟು ಬೇಗನೆ ಗುಡ್ ನ್ಯೂಸ್ ಕೊಡಿ, ಇಬ್ಬರ ಜೋಡಿ ಸೂಪರ್, ನೀವಿಬ್ಬರೇ ಮದ್ವೆ ಆಗಿ ಆದಷ್ಟು ಬೇಗ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 
 

ದಿಲೀಪ್ ಮತ್ತು ಖುಷಿ ತೆರೆ ಮೇಲೆ ಹೇಗೆ ಮುದ್ದಾದ ಜೋಡಿಯೋ, ಈ ಜೋಡಿ ತೆರೆ ಹಿಂದೆಯೂ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾಳೆ. ಒಟ್ಟಾಗಿ ರೀಲ್ಸ್ ಮಾಡುತ್ತಾ, ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಈ ಜೋಡಿಗೆ ಪ್ರೀತಿಯಿಂದ ಇಟ್ಟ ಹೆಸರು ದಿಲ್ ಖುಷ್ (DilKush). ಇದೇ ಹೆಸರಲ್ಲಿ ಈ ಜೋಡಿ ಯೂಟ್ಯೂಬ್ ಕೂಡ ಆರಂಭಿಸಿದ್ದಾರೆ. 
 

ಇತ್ತೀಚೆಗೆ ಖುಷಿ ಹುಟ್ಟುಹಬ್ಬಕ್ಕೆ ದಿಲೀಪ್ ಶೆಟ್ಟಿ ವಿಶೇಷವಾಗಿ ಪೋಸ್ಟ್ ಮಾಡಿದ್ದು, ನೀನು ನನ್ನ ಜೀವನದ ಒಂದು ಭಾಗ ಎಂದು ಹೇಳಿಕೊಂಡಿದ್ದರು. ಇದೆಲ್ಲಾ ನೋಡಿದ್ರೆ ಖುಷಿ ಮತ್ತು ದಿಲೀಪ್ ಲವ್ ಮಾಡ್ತಿದ್ದಾರೆ ಅನ್ಸತ್ತೆ, ಹಾಗಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಇಬ್ರ ನಡುವೆ ಏನಿದೆ ಅನ್ನೋದನ್ನ ಅವರೇ ಹೇಳಬೇಕಷ್ಟೇ. 
 

Latest Videos

click me!