ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಅನೇಕರಿಗೆ ಭಾವನಾ ಮತ್ತು ಖುಷಿ ಕಾಂಬಿನೇಷನ್ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಖುಷಿ ತುಂಬಾ ಮುದ್ದು ಮುದ್ದಾಗಿದ್ದು ಭಾವನಾಳ ನಿಜವಾದ ಮಗಳು ಅನಿಸುತ್ತಾಳೆ ಎನ್ನುತ್ತಿದ್ದ ವೀಕ್ಷಕರು ಇದೀಗ ದಿಶಾ ಪುತ್ರಿ ಫೋಟೋ ನೋಡಿದ್ದಾರೆ.
ಹೌದು! ದಿಶಾ ಮದನ್‌ಗೆ ಇಬ್ಬರು ಮಕ್ಕಳು, ಪುತ್ರ ವಿಹಾನ್ ಹಾಗೂ ಪುತ್ರಿ ಅವೀರಾ. ಸೋಷಿಯಲ್ ಮೀಡಿಯಾದಲ್ಲಿ ವಿಹಾನ್ ಮತ್ತು ಅವೀರಾ ಸ್ಟಾರ್ ಕಿಡ್‌ಗಳು.
ಪ್ರತಿ ವರ್ಷವೂ ಮಕ್ಕಳ ಜೊತೆ ದಿಶಾ ಮದನ್ ಫೋಟೋಶೂಟ್ ಮಾಡಿಸುತ್ತಾರೆ. ಮಕ್ಕಳ ಬೆಳವಣಿಗೆಯನ್ನು ಸಂಭ್ರಮಿಸಲು ಇದೊಂದು ಕ್ಷಣ ಎನ್ನುತ್ತಾರೆ.
ಮಾರ್ಚ್ 1ರಂದು ಜನಿಸಿದ ಅವೀರಾಗೆ ಈಗ 2 ವರ್ಷಗಳು. ಮಮ್ಮಿ ಎಂತೆ ಅವೀರಾ ಕೂಡ ಸೂಪರ್ ಮಾಡಲ್ ರೀತಿ ಡ್ರೆಸ್ ಆಗುತ್ತಾಳೆ. ಮಗನಿಗೆ ಈಗ 5 ವರ್ಷ.
ಖುಷಿ ಬದಲು ನೀವು ಅವೀರಾಗೆ ನಟಿಸಲು ಅವಕಾಶ ನೀಡಬೇಕಿತ್ತು, ಅವೀರಾ ಕೂಡ ಮುದ್ದಾಗಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.