ಮತ್ತೆ ಕಿರುತೆರೆಯಲ್ಲಿ ವಿಜಯ್ ಸೂರ್ಯ ಕಮಾಲ್, ಸದ್ದು ಮಾಡ್ತಿದೆ Sannidi-Siddhu ಫೋಟೋಸ್

Published : Aug 19, 2024, 04:05 PM IST

ಕನ್ನಡ ಕಿರುತೆರೆಯ ಗುಳಿ ಕೆನ್ನೆ ಚೆಲುವ ವಿಜಯ್ ಸೂರ್ಯ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಈ ಸಂದರ್ಭದಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ -ಸಿದ್ದಾರ್ಥ್ ಫೋಟೊ ವೈರಲ್ ಆಗ್ತಿದೆ.   

PREV
17
ಮತ್ತೆ ಕಿರುತೆರೆಯಲ್ಲಿ ವಿಜಯ್ ಸೂರ್ಯ ಕಮಾಲ್, ಸದ್ದು ಮಾಡ್ತಿದೆ Sannidi-Siddhu ಫೋಟೋಸ್

ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಾ, ಸಾಕಷ್ಟು ಜನ ಅಭಿಮಾನಿಗಳನ್ನ ಪಡೆದಿರುವ ವಿಜಯ್ ಸೂರ್ಯ (Vijay Surya) ತಮ್ಮ ನಟನೆ, ಗುಳಿ ಕೆನ್ನೆಯಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. 

27

ಉತ್ತರಾಯಣ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟ ವಿಜಯ್ ಸೂರ್ಯ , ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದರು, ಅದರಲ್ಲೂ ಹೆಂಗಳೆಯರ ಫೇವರಿಟ್ ನಟ ಇವರು. ನಂತ್ರ ಸ್ಯಾಂಡಲ್ ವುಡ್ ನಲ್ಲೂ(Sandalwood) ಕಮಾಲ್ ಮಾಡಿದ್ದರು ನಟ. 

37

ವಿಜಯ್ ಸೂರ್ಯ ಇಷ್ಟಕಾಮ್ಯ, ಕ್ರೇಜಿ ಲೋಕ, ಲಕ್ನೋ ಟು ಮುಂಬಯಿ, ಗಾಳಿಪಟ-2 (Galipata 2) ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ವಿಜಯ್ ಸೂರ್ಯಗೆ ಯಶಸ್ಸು ತಂದಿಕೊಟ್ಟಿದ್ದು, ಅಗ್ನಿ ಸಾಕ್ಷಿ ಧಾರಾವಾಹಿ. ಈ ಧಾರಾವಾಹಿಯ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. 

47

ಇದೀಗ ವಿಜಯ್ ಸೂರ್ಯ ಹೊಸ ಧಾರಾವಾಹಿ ದೃಷ್ಟಿ ಬೊಟ್ಟು ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ಹೊತ್ತಿಗೆ ಅಗ್ನಿ ಸಾಕ್ಷಿ ಧಾರಾವಾಹಿಯ ಸಿದ್ದಾರ್ಥ್ - ಸನ್ನಿಧಿ (Siddarth -Sannidhi) ಜೋಡಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 

57

ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ಅವತ್ತಿನಿಂದ ಇವತ್ತಿನವರೆಗೆ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಜೋಡಿ. ಇಬ್ಬರು ಗುಳಿಕೆನ್ನೆಯ ಜೋಡಿಯಾಗಿದ್ದು, ಈ ಜೋಡಿ ವೀಕ್ಷಕರ ಮೇಲೆ ಭಾರಿ ಮೋಡಿ ಮಾಡಿತ್ತು. ಇವರಿಬ್ಬರನ್ನು ಮತ್ತೆ ಜೊತೆಯಾಗಿ ಕಿರುತೆರೆಯಲ್ಲಿ ನೋಡೊದಕ್ಕೆ ಜನ ಕಾಯ್ತಿದ್ದಾರೆ. 
 

67

ವಿಜಯ್ ಸೂರ್ಯ ಇದೀಗ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಹೊಸ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿವರೆಗೆ ಲವರ್ ಬಾಯ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಸೂರ್ಯ, ಇದೀಗ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಸೀರಿಯಲ್ ಪ್ರಸಾರವಾಗಲಿದೆ. 

77

ಇನ್ನು ಸನ್ನಿಧಿ ಖ್ಯಾತಿಯ ವೈಷ್ಣವಿ ಗೌಡ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದು, ಸನ್ನಿಧಿ -ಸಿದ್ದಾರ್ಥ್ ಜೋಡಿಯಂತೆ, ಸೀತಾ -ರಾಮ ಜೋಡಿ ಸಹ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸುವ ಮೂಲಕ, ಕಿರುತೆರೆಯ ಫೇವರಿಟ್ ಜೋಡಿಯಾಗಿ ಮಿಂಚುತ್ತಿದ್ದಾರೆ. 

Read more Photos on
click me!

Recommended Stories