ದಿನಾ ಬಟ್ಟೆ ಹಾಕಿ ಬೋರಾಯ್ತು ಎಂದು ಹೀಗಾ ಮಾಡೋದು? ಗಾಯಕಿ ನಡೆಗೆ ಫ್ಯಾನ್ಸ್ ದಿಲ್‌ ಖುಷ್!

First Published | Aug 19, 2024, 6:08 PM IST

ಪ್ರತಿ ದಿನ ಬಟ್ಟೆ ಹಾಕಿ ಹಾಕಿ ಬೋರಾಗಿದೆ ಎಂದ ಖ್ಯಾತ ಗಾಯಕಿ ತೆಗೆದುಕೊಂಡ ನಿರ್ಧಾರಕ್ಕೆ ಹಲವರು ಅಚ್ಚರಿಗೊಂಡಿದ್ದಾರೆ. ಇದೀಗ ಬಟ್ಟೆಯನ್ನೇ ತ್ಯಜಿಸಿದ್ದಾಳೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.

ಖ್ಯಾತ ಗಾಯಕಿ ಹಾಗೂ ಸಾಂಗ್ ರೈಟರ್ ಕೆಶಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಕಾರಣ ಇಷ್ಟೇ ಈಕೆ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದ್ದಲ್ಲದೆ ಕುತೂಹಲು ಹೆಚ್ಚಿಸಿದೆ.

ಎಲ್ಲರೂ ಪ್ರತಿ ದಿನ ಹೊಸ ಹೊಸ ಬಟ್ಟೆ ಹಾಕಲು ಬಯಸುತ್ತಾರೆ. ಆದರೆ  ಅಮೆರಿಕನ್ ಸಿಂಗರ್ ಕೆಶಾಗೆ ಪ್ರತಿ ದಿನ ಬಟ್ಟೆ ಹಾಕುವುದೇ ಬೋರ್ ಅಂತಿದ್ದಾಳೆ. ಇದಕ್ಕಾಗಿ ಬಟ್ಟೆಯನ್ನೇ ತ್ಯಜಿಸಿದ್ದಾಳೆ.

Tap to resize

ಸೋಶಿಯಲ್ ಮೀಡಿಯಾದಲ್ಲಿ ಎರಡು ಫೋಟೋಗಳನ್ನು ಕೆಶಾ ಹಂಚಿಕೊಂಡಿದ್ದಾಳೆ. ಎರಡೂ ಫೋಟೋದಲ್ಲೂ ಬಟ್ಟೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.

ಬೆಡ್ ಮೇಲೆ ಕುಳಿತು ನಸು ನಕ್ಕ ವಿಡಿಯೋದಲ್ಲಿ ಬೆಡ್ ಶೀಟ್ ಹೊದ್ದು ಕೊಂಡಿದ್ದರೆ, ಮತ್ತೊಂದು ಫೋಟೋದಲ್ಲಿ ಆಹಾರ ಸೇವಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಟ್ಟೆ ತ್ಯಜಿಸಿದ ಕೆಶಾ ತನ್ನ ಟ್ಯಾಟುಗಳನ್ನು ಪ್ರದರ್ಶಿಸಿದ್ದಾರೆ.  37 ವರ್ಷದ ಗಾಯಕಿಯ ನಡೆ ಹಲವರಿಗೆ ಅಚ್ಚರಿಯಾದರೆ ಬಹುತೇಕರ ಕುತೂಹಲ ಕೆರಳಿಸಿದೆ.

ಕೆಶಾ ನಿರ್ಧಾರ ಘೋಷಿಸುತ್ತಿದ್ದಂತೆ ಈಕೆಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಇಷ್ಟೇ ಅಲ್ಲ ಈ ಫೋಟೋಗಳಿಗೆ ಬರ್ಜರಿ ಕಮೆಂಟ್ ವ್ಯಕ್ತವಾಗಿದೆ. 

ನಿಮ್ಮ ನಿರ್ಧಾರ ಇವತ್ತಿಗೆ ಮಾತ್ರ ಸೀಮಿತವಾಗದಿರಲಿ, ನಿರ್ಧಾರ ಗಟ್ಟಿಯಾಗಿರಲಿ ಎಂದು ಕಮೆಂಟ್ ಮಾಡಿದ್ದಾರೆ. ಸ್ವಾತಂತ್ರ್ಯ ಬೇಕು ಆದರೆ ಇದು ಅತಿಯಾಯ್ತು ಎಂದು ಮತ್ತೆ ಕೆಲವರು ಪ್ರತಿಕ್ರಿಯಿಸಿದ್ದಾರೆ.

ಜೀವನದಲ್ಲಿ ತ್ಯಾಗ ಅಂದರೆ ಇದು, ಆದರೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ನೋದು ಬೇಸರ ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ. ಇದೀಗ ಈಕೆಯ ಪೋಸ್ಟ್ ಪರ ವಿರೋಧಕ್ಕೆ ಕಾರಣವಾಗಿದೆ.

Latest Videos

click me!