ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಿಲ್ಪಾ ಅಯ್ಯರ್; ನಟನೆಗೆ ಗುಡ್‌ ಬೈ ಅಮೆರಿಕಾಗೆ ಹಾಯ್ ಹಾಯ್!

Published : Mar 13, 2023, 01:12 PM IST

ಉದ್ಯಮಿ ಸಚಿನ್‌ ಜೊತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ನಟಿ ಶಿಲ್ಪಾ ಅಯ್ಯರ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....

PREV
17
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಿಲ್ಪಾ ಅಯ್ಯರ್; ನಟನೆಗೆ ಗುಡ್‌ ಬೈ ಅಮೆರಿಕಾಗೆ ಹಾಯ್ ಹಾಯ್!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಶಿಲ್ಪಾ ಅಯ್ಯರ್ ಅಭಿನಯಿಸಿದ್ದರು. ತಮ್ಮ ವಿಭಿನ್ನ ಔಟ್‌ಫಿಟ್‌ಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. 

27

ನಟಿ ಶಿಲ್ಪಾ ಅಯ್ಯರ್ ಮತ್ತು ಉದ್ಯಮಿ ಸಚಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್‌ ಎನ್ನಬಹುದು. ಸಿನಿ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದರು. 

37

'ನನಗೆ ಮದುವೆಯಾಗಿ ತುಂಬಾ ಖುಷಿಯಾಗುತ್ತಿದೆ.  ಸಚಿನ್‌ ಅವರನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿರುವುದು ನನ್ನ ಜೀವನದ ಬೆಸ್ಟ್‌ ನಿರ್ಧಾರ. ಪ್ರತಿ ಹೆಣ್ಣಿಗೂ ಸಚಿನ್ ರೀತಿ ಗಂಡು ಸಿಗಬೇಕು' ಎಂದು ಶಿಲ್ಪಾ ಖಾಸಗಿ ಮಾಧ್ಯಮದಲ್ಲಿ ಮಾತನಾಡಿದ್ದಾರೆ.

47

 'ಇದು ಸೆಲ್ಫ್‌ ಅರೇಂಜ್ಡ್‌ ಮ್ಯಾರೇಜ್ ಎನ್ನಬಹುದು. ಮ್ಯಾಟ್ರಿಮೋನಿ ಸೈಟ್‌ನಲ್ಲಿ ನನಗೋಸ್ಕರ ಪಾಪ 6 ತಿಂಗಳು ಕಾದಿದ್ದಾರೆ ಅಂತ ಹೇಳಿದರು. ಮೀಟ್ ಮಾಡಿದ ನಂತರ ನನ್ನ ತಂದೆ ಜೊತೆ ಮಾತನಾಡಿದ್ದರು'

57

'ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾರೆ ಮದುವೆ ಮಾಡಿ ಕೊಡಿ ಎಂದು ತಂದೆ ಅವರನ್ನು ಕೇಳಿದ್ದರು. ಮದುವೆ ಆದ್ಮೇಲೆ ಸಚಿನ್ ಯುಎಸ್‌ಗೆ ಪ್ರಯಾಣ ಮಾಡಲಿದ್ದಾರೆ'

67

'ಸಚಿನ್ ಯುಎಸ್‌ ತಲುಪಿದ ಮೇಲೆ ನಾನು ಸ್ವಲ್ಪ ತಡವಾಗಿ ಯುಎಸ್‌ ಕಡೆ ಮುಖ ಮಾಡುವೆ. ನಮ್ಮ ದೇಶ ಯಾವತ್ತಿದ್ದರೂ ನಮ್ಮ ದೇಶನೇ ವರ್ಷಕ್ಕೊಂದು ಸಲ ಭಾರತಕ್ಕೆ ಬರುತ್ತೀವಿ'

77

'ಇಂಡಿಯಾ ಬಿಟ್ಟು ಯುಎಸ್‌ಗೆ ಪ್ರಯಾಣ ಮಾಡುತ್ತಿರುವುದಕ್ಕೆ ಮಿಕ್ಸ್‌ ಎಮೋಷನ್‌ಗಳಿದೆ. ಅಲ್ಲಿಗೆ ಹೋದ ಮೇಲೆ ಫ್ಯಾಮಿಲಿನ ಮಿಸ್ ಮಾಡಿಕೊಳ್ಳುತ್ತೀನಿ ಆಮೇಲೆ ಅಜೆಸ್ಟ್‌ ಆಗುವೆ' ಎಂದು ಶಿಲ್ಪಾ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories