ಬಿಗ್‌ ಬಾಸ್‌ನಲ್ಲಿ ಕ್ಯಾಮೆರಾಗೂ ಕೇರ್‌ ಮಾಡದೇ ಲವ್ ಮಾಡಿದ ಕರಣ್- ತೇಜಸ್ವಿ ಬ್ರೇಕಪ್?; ಸ್ಪಷ್ಟನೆ ಕೊಟ್ಟ ನಾಗಿಣಿ

Published : Mar 11, 2023, 03:22 PM IST

ಕರಣ್ ಕುಂದ್ರಾ ಪೋಸ್ಟ್‌ನಿಂದ ಹುಟ್ಟಿಕೊಂಡಿತ್ತು ಬ್ರೇಕಪ್ ಗಾಳಿ? ತೇಜಸ್ವಿ ಪ್ರಕಾಶ್‌ ಕ್ಲಾರಿಟಿ ಕೊಟ್ಟ ಮೇಲೆ ಫ್ಯಾನ್ಸ್‌ ಕೂಲ್ ಕೂಲ್.... 

PREV
18
ಬಿಗ್‌ ಬಾಸ್‌ನಲ್ಲಿ ಕ್ಯಾಮೆರಾಗೂ ಕೇರ್‌ ಮಾಡದೇ ಲವ್ ಮಾಡಿದ ಕರಣ್- ತೇಜಸ್ವಿ ಬ್ರೇಕಪ್?; ಸ್ಪಷ್ಟನೆ ಕೊಟ್ಟ ನಾಗಿಣಿ

ಹಿಂದಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌  ಸೀಸನ್ 15ರಲ್ಲಿ ಕರಣ್‌ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಪ್ರೀತಿಯಲ್ಲಿ ಬಿದ್ದರು. ಕ್ಯಾಮೆರಾಗಳಿಗೂ ಕೇರ್‌ ಮಾಡದೆ ತಮ್ಮ ಪ್ರೀತಿ ವ್ಯಕ್ತ ಪಡಿಸುತ್ತಿದ್ದರು. 

28

ಕೆಲವು ದಿನಗಳ ಹಿಂದೆ ಕರಣ್ ಕುಂದ್ರಾ ಶೇರ್ ಮಾಡಿಕೊಂಡಿದ್ದ ಶಾಯರಿ ನೋಡಿ ನೆಟ್ಟಿಗರು ಬ್ರೇಕಪ್ ವದಂತಿ ಹಬ್ಬಿಸಿದರು. ಅಲ್ಲದೆ ಇಬ್ಬರು ಒಟ್ಟಿಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

38

'ನಾನು ಪ್ರೀತಿಯಲ್ಲಿರುವ...ಸದಾ ಪ್ರೀತಿಸುವೆ. ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುವ ಕಾರಣ ಪ್ರೈವೇಟ್ ಆಗಿಡಬೇಕು ಎಂದು ತೀರ್ಮಾನ ಮಾಡಿರುವೆ.' ಎಂದು ತೇಜಸ್ವಿ ಸ್ಪಷ್ಟನೆ ಕೊಟ್ಟಿದ್ದಾರೆ.

48

'ಪ್ರೀತಿ ಬಗ್ಗೆ ಅತಿ ಹೆಚ್ಚಾಗಿ ಮಾತನಾಡಿದರೆ ಜನರು ಕಣ್ಣು ಹಾಕುತ್ತಾರೆ. ಇದರಿಂದ ಸಂಬಂಧ ಗಟ್ಟಿ ಆಗುವುದಿಲ್ಲ ಬದಲಿಗೆ ಕಳೆದುಕೊಳ್ಳುತ್ತದೆ.' ಎಂದು ತೇಜಸ್ವಿ ಮಾತನಾಡಿದ್ದಾರೆ.

58

'ಮದುವೆ ಅನ್ನೋದು ನನ್ನ ಜೀವನದಲ್ಲಿ ತುಂಬಾ ಮುಖ್ಯವಾಗುತ್ತದೆ. ಆ ಕ್ಷಣಗಳು ಬರುವವರೆಗೂ ಅದರ ಬಗ್ಗೆ ಮಾತನಾಡುವುದಕ್ಕೆ ಇಷ್ಟವಿಲ್ಲ' 
 

68

'ನಮ್ಮ ಪ್ರೀತಿ ಮತ್ತು ಪರ್ಸನಲ್ ವಿಚಾರಗಳನ್ನು ಸೀಕ್ರೆಟ್ ಆಗಿಟ್ಟಿರುವುದಕ್ಕೆ ಇಷ್ಟ ಪಡುತ್ತೀವಿ. ನಾವು ಸ್ಟ್ರಾಂಗ್ ಆಗಿದ್ದೀವಿ. ಒಬ್ಬರ ಕಂಪನಿ ಮತ್ತೊಬ್ಬರು  ಎಂಜಾಯ್ ಮಾಡುತ್ತಿದ್ದೀವಿ' ಎಂದಿದ್ದರೆ ತೇಜಸ್ವಿ.  

78

ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಸುಮಾರು 3 ತಿಂಗಳು ಪ್ಯಾಪರಾಜಿಗಳ ಕಣ್ಣು ಕರಣ್ ಮತ್ತು ತೇಜಸ್ವಿ ಮೇಲಿತ್ತು. ಪ್ರೈವೇಟ್‌ ಆಗಿ ಗೋವಾಗಿ ಪ್ರಯಾಣ ಮಾಡಿದ್ದರೂ ಅಲ್ಲಿಗೂ ಹೋಗಿ ಫೋಟೋ ಕ್ಲಿಕ್ ಮಾಡುತ್ತಿದ್ದರು. 

88

 ಬಿಗ್ ಬಾಸ್ ಮನೆಯಿಂದ ಹೊರ ಬಂದರೂ ಮಾಧ್ಯಮಗಳ ಕ್ಯಾಮೆರಾಗಳಿಗೆ ಕೇರ್ ಮಾಡದೆ ಕಂಡ ಕಂಡಲ್ಲಿ ಕಿಸ್ ಮಾಡುವುದು ದಬ್ಬಿಕೊಳ್ಳುತ್ತಿದ್ದರು. ಹೀಗಾಗಿ ಅವರ ಬ್ರೇಕಪ್‌ ಬಗ್ಗೆ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. 
 

Read more Photos on
click me!

Recommended Stories