ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ.1' ನಲ್ಲಿ ಈ ವಾರ ಭಾವನೆಗಳ ಮಹಾಪೂರವೇ ಹರಿದಿದೆ. ನಟಿ ಗೀತಾಭಾರತಿ ಭಟ್ ಅವರ ಮಾತುಗಳು ವೇದಿಕೆಯಲ್ಲಿ ಇದ್ದವರನ್ನಷ್ಟೇ ಅಲ್ಲ, ವೀಕ್ಷಕರ ಮನಗಳನ್ನೂ ಮುಟ್ಟಿವೆ.
ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಗೀತಾಭಾರತಿ ಭಟ್, "ನಾನು ಏನಾದ್ರೂ ಹೇಳಿದ್ರೆ ಹೆಚ್ಚಿಗೆ ಮಾತಾಡಬೇಡ ಅಂತ ಹೇಳ್ತೀರಾ... ನಮಗೆ ಒಂದು ನ್ಯಾಯ, ನಿಮಗೊಂದು ನ್ಯಾಯ. ನಾನು ಎಷ್ಟು ಬಾರಿ ಅತ್ತುಕೊಂಡು ಮಲಗಿದ್ದೀನಿ ಗೊತ್ತಾ? ದಯವಿಟ್ಟು ನಾನು ಅತ್ತು ಅತ್ತು ಮಲಗೋಕೆ ಬಿಡಬೇಡಿ" ಎಂದು ಭಾವುಕರಾಗಿ ಮಾತನಾಡಿರುವುದು ಕುತೂಹಲ ಮೂಡಿಸಿದೆ.
25
ಬಾಡಿ ಶೇಮಿಂಗ್
ಈ ಮಾತುಗಳ ಹಿಂದೆ ಅಡಗಿರುವ ನೋವು ಏನು? ಗೀತಾಭಾರತಿ ಭಟ್ ಅವರಿಗೆ ಇಷ್ಟೊಂದು ಬೇಸರವಾಗಲು ಕಾರಣವೇನು? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಅದರ ಸಂಪೂರ್ಣ ಉತ್ತರ ಈ ವಾರದ ಎಪಿಸೋಡ್‌ನಲ್ಲಿ ಸಿಗಲಿದೆ.
ಗೀತಾಭಾರತಿ ಭಟ್ ಅವರು ಸಾರ್ವಜನಿಕರಿಂದ ಆಗಾಗ ಬಾಡಿ ಶೇಮಿಂಗ್‌ಗೆ ಒಳಗಾಗಿರುವ ವಿಚಾರವನ್ನು ಹಲವು ಬಾರಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ದೇಹದಾಕೃತಿಯ ಬಗ್ಗೆ ಬಂದ ಟೀಕೆಗಳು ಅವರನ್ನು ಮಾನಸಿಕವಾಗಿ ನೋಯಿಸಿದ್ದವು ಎಂಬುದನ್ನೂ ಅವರು ಹಿಂದೆ ಹೇಳಿಕೊಂಡಿದ್ದರು.
35
, ವೈವಾಹಿಕ ಜೀವನದ ಹೊಸ ಅಧ್ಯಾಯ
ಇತ್ತೀಚೆಗೆ ಗೀತಾಭಾರತಿ ಭಟ್ ಅವರು ರಾಜಾರಾಮ್ ಭಟ್ ಅವರನ್ನು ವಿವಾಹವಾಗಿದ್ದು, ವೈವಾಹಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಇದೀಗ 'ಜೋಡಿ ನಂ.1' ವೇದಿಕೆಯಲ್ಲಿ ಅವರು ಹಂಚಿಕೊಂಡ ಭಾವನಾತ್ಮಕ ಅನುಭವಗಳು ಎಲ್ಲರ ಗಮನ ಸೆಳೆಯುತ್ತಿವೆ.
45
ರಿಯಾಲಿಟಿ ಶೋ 'ಜೋಡಿ ನಂ.1'
ಜೀ ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳ ರಿಯಾಲಿಟಿ ಶೋ 'ಜೋಡಿ ನಂ.1' ಅನ್ನು ನಟಿ ಶ್ವೇತಾ ಚಂಗಪ್ಪ ಮತ್ತು ಹಾಸ್ಯನಟ ಕುರಿ ಪ್ರತಾಪ್ ನಿರೂಪಿಸುತ್ತಿದ್ದಾರೆ. "ಗಂಡ-ಹೆಂಡತಿ ಅಂದ್ರೆ ಹೀಗಿರಬೇಕು ಅಂತಲ್ಲ, ಹೀಗೂ ಇರಬಹುದು" ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಪ್ರೇಕ್ಷಕರ ಮನ ಗೆದ್ದಿದೆ.
55
ತೀರ್ಪುಗಾರರು
ಕಾರ್ಯಕ್ರಮಕ್ಕೆ ನಟಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ನಟಿ ಛಾಯಾ ಸಿಂಗ್ ಹಾಗೂ ನಟ ನೆನಪಿರಲಿ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗೀತಾಭಾರತಿ ಭಟ್ ಅವರ ಭಾವನಾತ್ಮಕ ಮಾತುಗಳ ಹಿಂದಿನ ನಿಜವಾದ ಕಥೆ ಏನು? ಅವರು ಯಾರ ಬಗ್ಗೆ ಮಾತನಾಡಿದರು? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಅಭಿಮಾನಿಗಳು 'ಜೋಡಿ ನಂ.1' ಕಾರ್ಯಕ್ರಮದ ಈ ವಾರದ ಸಂಚಿಕೆಯನ್ನು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.