ಮದನ್, ಜೈದೇವ್ ಬಳಿಕ ಜೀ ಕನ್ನಡದಲ್ಲಿ ಮತ್ತೋರ್ವ ರಗಡ್ ಹ್ಯಾಂಡ್‌ಸಮ್ ವಿಲನ್; ಕಿರುತೆರೆಯ ಹೊಸ ಕ್ರಶ್

Published : Nov 10, 2026, 12:38 PM IST

ಒಂದು ಧಾರಾವಾಹಿ ಯಶಸ್ವಿಯಾಗಲು ನಾಯಕನಷ್ಟೇ ಖಳನಾಯಕನ ಪಾತ್ರವೂ ಮುಖ್ಯ. ಜೀ ಕನ್ನಡದ ಸೀರಿಯಲ್‌ನಲ್ಲಿ ಯುವರಾಜ್ ಅರಸ್ ಪಾತ್ರದ ಮೂಲಕ ವಚನ್ ಹೊಸ್ಮಠ್ ಕಿರುತೆರೆಯ ಹೊಸ ಸ್ಟೈಲಿಶ್ ವಿಲನ್ ಆಗಿ ಭರವಸೆ ಮೂಡಿಸಿದ್ದಾರೆ.

PREV
15
ಇವರು ವಿಲನ್ ಕಣ್ರಪ್ಪಾ!

ಒಂದು ಸೀರಿಯಲ್ ಅಥವಾ ಸಿನಿಮಾ ಹಿಟ್ ಆಗ್ಬೇಕಾದ್ರೆ ಹೀರೋ ಎಷ್ಟು ಮುಖ್ಯವೋ? ವಿಲನ್ ಸಹ ಅಷ್ಟೇ ಮುಖ್ಯ. ಈ ಎರಡು ಪಾತ್ರಗಳಲ್ಲಿ ಗಟ್ಟಿತನವಿದ್ರೆ ಮಾತ್ರ ಒಂದು ಕಥೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತದೆ. ಶ್ರಾವಣಿ ಸುಬ್ರಮಣ್ಯದ ಮ್ಯಾಡಿ, ಅಮೃತಧಾರೆಯ ಜೈದೇವ್, ಅಣ್ಣಯ್ಯನ ಪರಶು ಸಾಲಿಗೆ ಮತ್ತೋರ್ವ ಯಂಗ್ ಆಂಡ್ ಎನರ್ಜೆಟಿಕ್ ವಿಲನ್ ಬಂದಿದ್ದಾರೆ. ದಾವಣಗೆರೆ ಪ್ರತಿಭೆ, ಮಾಡೆಲ್, ನಟ ವಚನ್ ಹೊಸ್ಮಠ ಕಿರುತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ.

25
ಯುವರಾಜ್ ಅರಸ್ ಅಲ್ಲ ವಚನ್ ಹೊಸ್ಮಠ

ಜೀ ಕನ್ನಡದ ಜಗದ್ಧಾತ್ರಿ ಸೀರಿಯಲ್ ಬಹುತಾರಾಗಣವನ್ನು ಹೊಂದಿರುವ ಧಾರಾವಾಹಿ ಆಗಿದೆ. ಮೋಕ್ಷಿತಾ ಪೈ, ವಿಜಯ್ ಸೂರ್ಯ ಈ ಸೀರಿಯಲ್‌ನಲ್ಲಿ ಜೋಡಿಯಾಗಿದ್ದು, ಇವರಿಬ್ಬರಿಗೆ ಟಕ್ಕರ್ ಕೊಡ್ತಿರೋದು ನಟ ಯುವರಾಜ್ ಅರಸ್. ಈ ಮೂವರು ಸೀರಿಯಲ್‌ನ ಜೀವಾಳ ಆಗಿದ್ದಾರೆ. ಯುವರಾಜ್ ಅರಸ್ ಪಾತ್ರದ ಮೂಲಕ ವಚನ್ ಹೊಸ್ಮಠ ಕಿರುತೆರೆ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

35
ಪ್ರತಿಭಾನ್ವಿತ ಕಲಾವಿದ

ಮಿಸ್ಟರ್ ದಾವಣಗೆರೆಯಾಗಿರುವ ವಚನ್, ಈ ಮೊದಲು ಲಕ್ಷ್ಮೀ ಟಿಫನ್ ರೂಮ್‌ ಧಾರಾವಾಹಿಯ ಭಾಗವಾಗಿದ್ದರು. ರಂಗಭೂಮಿಯಿಂದ ಬಂದಿರುವ ವಚನ್, ಮಾಯಾಜಾಲ, ರನ್ ಅಂಜಲಿ ರನ್ ಎಂಬ ಶಾರ್ಟ್ ಮೂವಿಗಳಲ್ಲಿಯೂ ನಟಿಸಿದ್ದಾರೆ. ಆದ್ರೆ ಜಗದ್ಧಾತ್ರಿಯ ಯುವರಾಜ್ ಅರಸ್ ಪಾತ್ರ ವಚನ್ ಹೊಸ್ಮಠ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.

45
ಹ್ಯಾಂಡ್‌ಸಮ್ ಸೂಪರ್ ಮಾಡೆಲ್

ಈ ಹಿಂದೆ ವಿಲನ್ ಅಂದ್ರೆ ದೈತ್ಯ ದೇಹ, ಉದ್ದಕೂದಲು, ವಿಚಿತ್ರ ಬಟ್ಟೆ ಎಂಬ ಕಲ್ಪನೆಯಿತ್ತು. ಈ ಕಲ್ಪನೆಯನ್ನು ಹಿಂದಿ ಸೀರಿಯಲ್‌ಗಳು ದೂರ ಮಾಡಿವೆ. ಅದೇ ರೀತಿ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ, ಅಮೃತಧಾರೆ, ಅಣ್ಣಯ್ಯ ಸೀರಿಯಲ್‌ಗಳು ವಿಲನ್ ಪಾತ್ರವನ್ನು ಹ್ಯಾಂಡ್‌ಸಮ್ ಸೂಪರ್ ಮಾಡೆಲ್ ಗಳು ನಟಿಸಬಹುದು ಎಂಬುದನ್ನು ನಿಜ ಮಾಡಿವೆ.

55
ಭರವಸೆಯ ನಟ

ಈ ಮೇಲಿನ ಮೂರು ಸೀರಿಯಲ್‌ಗಳಲ್ಲಿ ಹೀರೋಗಳಿಗಿಂತ ವಿಲನ್‌ಗಳೇ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಮ್ಯಾಡಿ ಪಾತ್ರದಲ್ಲಿ ಅಥರ್ವ ನಟಿಸಿದ್ದರು. ಅಮೃತಧಾರೆಯ ಜೈದೇವ್‌ ಆಗಿ ರಾಣವ್ ಗೌಡ ನಟಿಸುತ್ತಿದ್ದಾರೆ. ಅಣ್ಣಯ್ಯ ಸೀರಿಯಲ್‌ನಲ್ಲಿ ಪರಶು ಆಗಿ ನಟ ಚಿರಂಜೀವಿ ಗಮನ ಸೆಳೆಯುತ್ತಿದ್ದಾರೆ. ಈ ರಗಡ್ ಆಂಡ್ ಸ್ಮಾರ್ಟ್ ವಿಲನ್‌ಗಳ ಸಾಲಿಗೆ ವಚನ್ ಹೊಸ್ಮಠ್ ಸೇರ್ಪಡೆಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories