ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಪಾತ್ರದಲ್ಲಿ ಮಿಂಚುತ್ತಿರುವ ಮಲೈಕಾ ವಸುಪಾಲ್.
ಮೂಲತಃ ದಾವಣಗೆರೆಯ ಈ ಚೆಲುವೆಗೆ ಬಾಲ್ಯದಿಂದಲ್ಲೂ ಆಕ್ಟಿಂಗ್ ಅಂದ್ರೆ ಸಖತ್ ಇಷ್ಟ. ಪೋಷಕರ ಒತ್ತಾಯಕ್ಕೆ ಪದವಿ ಮುಗಿಸಿದ್ದಾರೆ.
ಇತ್ತೀಚಿಗೆ ಮಲೈಕಾ ಗೋಲ್ಡನ್ ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿದ್ದಾರೆ. ಸಖತ್ ಸಿಂಪಲ್ ಮೇಕಪ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ.
ಶ್ರುತಿ ಅಶ್ವತ್ ಮೇಕಪ್ ಮಾಡಿದ್ದರು, ಸರಫ್ ಅವರ ಆಭರಣ ಧರಿಸಿದ್ದಾರೆ. ಶಿಮ್ಮರ್ ಡಿಸೈನರ್ ಬ್ಲೌಸ್ ಧರಿಸಿದ್ದಾರೆ. ಉಮೇಶ್ ಫೋಟೋ ಕ್ಲಿಕ್ ಮಾಡಿದ್ದಾರೆ.
ಧಾರಾವಾಹಿಯಲ್ಲಿ ಲೀಲಾ ಪಾತ್ರ ಸಖತ್ ಬಬ್ಲಿ ಹುಡುಗಿ. ಮದುವೆ ಆದ್ಮೇಲೆ ಸೀರೆ ಕೈ ತುಂಬಾ ಬಳೆ ಹಾಕೊಂಡು ಕಾಣಿಸಿಕೊಂಡಿದ್ದಾರೆ.
ಆದರೆ ಈ ಫೋಟೋಶೂಟ್‌ನಲ್ಲಿ ಲೀಲಾ ಮೇಕಪ್ ಮಾಡಿಕೊಂಡು ಸೀರೆ ಧರಿಸಿದ್ದರೂ ಹಣೆಬೊಟ್ಟು ಇಟ್ಟಿಲ್ಲ ಅಂತ ನೆಟ್ಟಿಗರು ಗರಂ ಆಗಿದ್ದಾರೆ.
ಲೀಲಾಳನ್ನು ಮನೆ ಮಗಳಂತೆ ಪ್ರೀತಿಕೊಟ್ಟು ಭಾವಿಸುವ ಜನರಿಗೆ ಈ ಲುಕ್ ಕೊಂಚ ಮಿಶ್ರ ಅಭಿಪ್ರಾಯ ಕೊಟ್ಟಿದೆ. ಕುಂಕುಮ್ಮ ಇಡಮ್ಮ ಎಂದಿದ್ದಾರೆ.
Vaishnavi Chandrashekar