ಒಂದೇ ಮಂಚದಲ್ಲಿ ಭೂಮಿ-ಗೌತಮ್‌! ಕಥೆಗೆ ಸಿಗುತ್ತೆ ಇನ್ನು ಬೇರೆಯದ್ದೇ ಟ್ವಿಸ್ಟ್!

Published : Nov 14, 2023, 02:33 PM IST

ಅಮೃತಧಾರೆ ಸೀರಿಯಲ್ ಶುರುವಾದಾಗಿನಿಂದ ತುಂಬಾನೆ ಕುತೂಹಲ ಹುಟ್ಟಿಸಿಕೊಂಡು ಅದ್ಭುತವಾಗಿ ಸಾಗುತ್ತಿದೆ. ಇದೀಗ ಭೂಮಿ ಗೌತಮ್ ಮಧ್ಯೆ ಇದ್ದ ಅಂತರವೂ ಸರಿಯಾಗೋ ತರ ಕಾಣಿಸ್ತಿದೆ. ಗಂಡೆ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ, ಒಟ್ಟಿಗೆ ಮಲಗೋಲ್ಲ ಅಂದ್ರೆ ಸಂಬಂಧ ಹೇಗೆ ಸುಧಾರಿಸುತ್ತೆ? ಅಮೃತಧಾರೆಯಲ್ಲಿ ಗೌತಮ್ ಭೂಮಿ ಬಾಂಧವ್ಯವಿನ್ನು ಗಟ್ಟಿಯಾಗೋ ಸೂಚನೆಗಲು ಸಿಕ್ಕಿವೆ.   

PREV
19
ಒಂದೇ ಮಂಚದಲ್ಲಿ ಭೂಮಿ-ಗೌತಮ್‌! ಕಥೆಗೆ ಸಿಗುತ್ತೆ ಇನ್ನು ಬೇರೆಯದ್ದೇ ಟ್ವಿಸ್ಟ್!

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸೀರಿಯಲ್ ಅಮೃತಧಾರೆ, ತನ್ನ ವಿಭಿನ್ನ ಕಥಾಹಂದರದಿಂದಾಗಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ಅದರಲ್ಲೂ ಭೂಮಿಕಾ - ಗೌತಮ್ ಜೋಡಿಯಂತೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 
 

29

ಭೂಮಿಕಾ ಮತ್ತು ಗೌತಮ್ ರದ್ದು ಪ್ರಬುದ್ಧವಾದ ಜೋಡಿ. ಇಬ್ಬರೂ ಸಹ ಹರೆಯದ ಪ್ರೀತಿಯ ವಯಸ್ಸನ್ನು ದಾಟಿರೋದರಿಂದ ಇಬ್ಬರ ನಡವಳಿಕೆಯಲ್ಲಿನ ಗೌರವ, ಸಣ್ಣ ಕೋಪ, ಪ್ರಬುದ್ಧತೆ, ಸಂಬಂಧವನ್ನು ನಡೆಸಿಕೊಂಡು ಬರುವ ರೀತಿ ಜನರಿಗೆ ಇಷ್ಟವಾಗಿದೆ. 
 

39

ಭೂಮಿ ತನ್ನ ತಮ್ಮನಿಗಾಗಿ ಮತ್ತು ಗೌತಮ್ ತನ್ನ ತಂಗಿಗಾಗಿ ಈ ಮದುವೆಗೆ ಒಪ್ಪಿಕೊಂಡಿದ್ದು, ಎದುರು ಸಿಕ್ಕಾಗಲೆಲ್ಲಾ ಶತ್ರುಗಳಂತೆ ಕಾಣುತ್ತಿದ್ದ ಜೋಡಿ, ತಮ್ಮವರಿಗಾಗಿ ಹಸೆಮಣೆ ಏರಿತ್ತು. ಆದರೆ ಇಬ್ಬರ ನಡುವೆ ಪ್ರೀತಿಯೇ ಇಲ್ಲದ ಕಾರಣ ಇಬ್ಬರೂ ಇಲ್ಲಿವರೆಗೆ ದೂರವೇ ಉಳಿದಿದ್ದರು. 
 

49

ಭೂಮಿಕಾ ಗೌತಮ್ ದಿವಾನ್ ಅವರ ಅರಮನೆಯಂತಹ ಮನೆಯಾಲಲಿದ್ದರೂ ಸಹ ಇದುವರೆಗೂ ಇಬ್ಬರು ಜೊತೆಯಾಗಿ ಮಲಗಿಯೂ ಇಲ್ಲ. ಕಾರಣ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಸರಿಯಾಗಿ ಗೊತ್ತಿರದೆ, ಇಬ್ಬರ ನಡುವೆ ಪ್ರೀತಿ ಬೆಳೆಯದೇ ಜೊತೆಯಾಗಿ ಮಲಗೋದು ಸರಿಯಲ್ಲ ಎಂದು ಭೂಮಿ ನೆಲದ ಮೇಲೇನೆ ಮಲಗುತ್ತಿದ್ದರು. 
 

59

ಇದೀಗ ಎಲ್ಲೆಡೆ ದೀಪಾವಳಿ ಸಂಭ್ರಮ, ಟಿವಿ ಸೀರಿಯಲ್ ಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಭೂಮಿಕಾ ಮದುವೆಯಾಗಿ ಮೊದಲ ಬಾರಿಗೆ ದೀಪಾವಳಿ (Deepavali) ಹಬ್ಬಕ್ಕೆ ತನ್ನ ಗಂಡ ಗೌತಮ್ ಜೊತೆ ತನ್ನ ತವರು ಮನೆಗೆ ಬಂದಿದ್ದಾಳೆ. 
 

69

ಭೂಮಿಕಾಳದ್ದು (Bhumika) ಪುಟ್ಟ ಮನೆಯಾಗಿರೋದರಿಂದ ರೂಮಲ್ಲಿರೋ ಒಂದು ಪುಟ್ಟ ಮಂಚದಲ್ಲಿ ಇಬ್ಬರು ಮಲಗೋದ್ಯಾಕೆ ಅನ್ನೋ ಚಿಂತೆ ಈಗ ಶುರುವಾಗಿ. ಇದೀಗ ಬಿಡುಗಡೆಯಾದ ಪ್ರೊಮೋದಲ್ಲಿ (promo) ಇಬ್ಬರ ನಡುವಿನ ಮುದ್ದಾದ ಜಗಳವನ್ನು ತೋರಿಸಿದ್ದಾರೆ. 
 

79

ಗೌತಮ್ ಭೂಮಿಕಾಗೆ ನೀವೆಲ್ಲಿ ಮಲಗ್ತೀರಾ ಎಂದಾಗ, ಭೂಮಿ ವಿಧಿ ಇಲ್ಲ ಇಲ್ಲೆ ಮಲಕೋಬೇಕಾಗುತ್ತೆ ಎನ್ನುತ್ತಾರೆ. ಒಂದೇ ಬೆಡ್ ಅಲ್ಲಿ ಹೇಗೆ ಮಲಗೋದು ಎಂದು ಗೌತಮ್ ಕೇಳಿದಾಗ, ಭೂಮಿ ತಾನು ನೆಲದಲ್ಲಿ ಮಲಗೋದಾಗಿ ಹೇಳ್ತಾರೆ. 
 

89

ಭೂಮಿಯನ್ನು ಕೆಳಗೆ ಮಲಗಲು ಬಿಡದ ಗೌತಮ್, ಎರಡು ದಿಂಬು ಇದ್ರೆ, ಮಧ್ಯದಲ್ಲಿಟ್ಟು ಇಬ್ರು ಆ ಕಡೆ ಈಕಡೆ ಮಲಗಬೋದು ಅಂತಾರೆ, ಅದಕ್ಕೆ ಭೂಮಿ ಇರೋದೆ, ಸಣ್ಣ ಮಂಚ ಅಲ್ಲಿ ದಿಂಬಿಟ್ರೆ ನಾವು ಮಲಗೋದ್ಯಾಗೆ ಎನ್ನುವಾಗ, ಗೌತಮ್ ಏನು ನಾನು ಡುಮ್ಮ ಅಂತ ತಮಾಷೆ ಮಾಡ್ತೀರಾ ಎನ್ನುತ್ತಾರೆ. 
 

99

ನಾನು ಆ ತರ ಏನು ಹೇಳಿಲ್ಲಪ್ಪ ಎನ್ನುತ್ತಾ ನಗೆ ಬೀರುತ್ತ ಭೂಮಿ ಕೈ ಮುಗಿಯುತ್ತಾಳೆ. ಅಂತೂ ಇಂತೂ ಭೂಮಿ ಮನೆಯಲ್ಲಿ ಒಂದೇ ಮಂಚವೇರೋದಿನ್ನು ಭೂಮಿ-ಗೌತಮ್‌ಗೆ ಆಯ್ತು ಅನಿವಾರ್ಯ, ಇನ್ನು ಇಬ್ಬರ ಸಂಬಂಧ ಸುಧಾರಿಸುತ್ತೆ, ಪ್ರೀತಿ ಬೆಳೆಯುತ್ತೆ ಎಂದು ಕಾಯ್ತಿದ್ದಾರೆ ಪ್ರೇಕ್ಷಕರು. 
 

Read more Photos on
click me!

Recommended Stories