ಸಣ್ಣ ಅಗೋ ಯೋಚನೆ ಬಿಟ್ಟೇ ಬಿಟ್ರಾ? ಗೀತಾ ಫೋಟೋಗೆ ನೆಟ್ಟಿಗರ ಪ್ರಶ್ನೆ!

First Published | Jan 19, 2024, 4:00 PM IST

ಪದೇ ಪದೇ ಗೀತಾ ವರ್ಕೌಟ್‌ ಬಗ್ಗೆ ಪ್ರಶ್ನೆ ಮಾಡುತ್ತಿರುವ ನೆಟ್ಟಿಗರು. ಯಾಕೆ ಬ್ರೇಕ್ ತೆಗೆದುಕೊಂಡಿದ್ದಾರೆ ಗೀತಾ? 

ಬ್ರಹ್ಮಗಂಟು ಸೀರಿಯಲ್ ನೋಡಿ ಅದೆಷ್ಟೋ ಮಂದಿ ಸಿಕ್ರೆ ಗೀತಾ ತರ ಸೊಸೆ ಸಿಗಬೇಕು, ಗೀತಾ ರೀತಿ ಹುಡುಗಿ  ಸಿಗಬೇಕು ಅನ್ನೋ ಕನಸು ಕಂಡಿರುವುದು ನಿಜ. 

ಧಾರಾವಾಹಿ ಮುಗಿದ ನಂತರ ಗೀತಾ ಭಾರತಿ ಭಟ್ ಸಿಕ್ಕಾಪಟ್ಟೆ ವರ್ಕೌಟ್ ಮತ್ತು ಡಯಟ್‌ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟರು.

Tap to resize

ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಚಾನೆಲ್‌ಗಳ ಮೂಲಕ ತಮ್ಮ ಡಯಟ್‌ ಹೇಗಿರಲಿದೆ, ವರ್ಕೌಟ್ ಯಾವ ರೀತಿ ಇದೆ ಹಾಗೂ ಎಲ್ಲಿ ಬಟ್ಟೆ ಖರೀದಿಸುತ್ತಾರೆ ಎಂದು ಪೋಸ್ಟ್ ಮಾಡುತ್ತಿದ್ದರು.

ಆದರೆ ಇದ್ದಕ್ಕಿದ್ದಂತೆ ಗೀತಾ ವರ್ಕೌಟ್ ಮತ್ತು ಡಯಟ್ ಬಗ್ಗೆ ಯಾವ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಪ್ರತಿಯೊಂದು ಫೋಟೋಗೂ ಪ್ರಶ್ನೆ ಮಾಡುತ್ತಾರೆ.

ಡಯಟ್ ಮಾಡುವುದು ನಿಲ್ಲಿಸಿದ್ದೀರಾ? ಜಿಮ್‌ಗೆ ಹೋಗುತ್ತಿಲ್ವಾ? ನಿಮ್ಮ ವೇಟ್‌ ಲಾಸ್‌ ಜರ್ನಿ ನಿಲ್ಲಿಸಿದ್ದೀರಾ? ಸಣ್ಣ ಆಗಬೇಕು ಅನ್ನೋದು ಮರೆತೇ ಬಿದ್ದಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.

ಫಿಟ್ನೆಸ್‌ ಜರ್ನಿ ನಡುವಲ್ಲಿ ಗೀತಾ 'ರವಿಕೆ ಪ್ರಸಂಗ' ಸಿನಿಮಾ ಸಹಿ ಮಾಡಿದರು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ವರ್ಕೌಟ್‌ ಕಡೆ ಗಮನ ಕೊಡಲು ಕಷ್ಟ ಆಗುತ್ತಿದೆ ಎಂದು ಈ ಹಿಂದೆ ಹೇಳಿದ್ದರು.  

ಈ ಹಿಂದೆ ನೀಡಿರುವ ಸಂದರ್ಶನಗಳ ಪ್ರಕಾರ ಗೀತಾ ಭಾರತಿ ಭಟ್ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇನ್ನೂ ಕಡಿಮೆ ಆಗಬೇಕು ಎಂದು ತೀರ್ಮಾನ ಮಾಡಿದ್ದರು. 

ಚೆನ್ನಾಗಿ ಪೌಷ್ಠಿಕ ಆಹಾರ ತಿಂದು ತೂಕ ಕಡಿಮೆ ಮಾಡಿಕೊಳ್ಳಬೇಕು. ಏನೂ ತಿನ್ನದೆ ಸಣ್ಣ ಆಗೋಕೆ ಆಗಲ್ಲ. ಸರಿಯಾಗಿ ನಿದ್ರೆ, ಚೆನ್ನಾಗಿ ನೀರು ಕುಡಿಯಬೇಕು ಹಾಗೂ ವ್ಯಯಾಮ ಮಾಡಬೇಕು ಎಂದಿದ್ದರು. 

Latest Videos

click me!