ಮಾಡೆಲಿಂಗ್‌ಗಾಗಿ ಮಗುವನ್ನೇ ತೆಗೆಸಿದ ಮಹಿಮಾ; ಅಪ್ಪ ಹುಟ್ತಾರಂತ ನಿರೀಕ್ಷಿಸಿದ್ದ ಗೌತಮ್‌ ದಿವಾನ್‌ಗೆ ಶಾಕ್!

First Published | Jan 18, 2024, 6:34 PM IST

ಬೆಂಗಳೂರು (ಜ.18): ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ತನ್ನ ಸೌಂದರ್ಯ ಹಾಗೂ ಮಾಡೆಲಿಂಗ್‌ಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನೇ ತೆಗೆಸಿದ್ದಾಳೆ. ತಂಗಿ ಹೊಟ್ಟೇಲಿ ಅಪ್ಪನೇ ಹುಟ್ಟಿ ಬರ್ತಾರೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಗೌತಮ್ ಇದನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಕುತೂಹಲವಾಗಿದೆ. 

ತಂಗಿ ಗರ್ಭಿಣಿ ಎಂದಾಕ್ಷಣ ನಿದ್ದೆಯನ್ನೂ ಮಾಡದೇ ರಾತ್ರೋ ರಾತ್ರಿ ತಂಗಿ ಮನೆಗೆ ಹೋಗಿ ಅರೋಗ್ಯ ವಿಚಾರಿಸಿದ್ದ ಗೌತಮ್‌ ತಾನು ಮಾವನಾಗುತ್ತೇನೆ ಎಂಬ ಖುಷಿಗಿಂತ ತಂಗಿ ಹೊಟ್ಟೇಲಿ ಅಪ್ಪನೇ ಹುಟ್ಟಿ ಬರ್ತಾರೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದನು. ಆದರೆ, ತಂಗಿ ಮಗುವನ್ನೇ ತೆಗೆಸಿದ ಕುಕೃತ್ಯವನ್ನು ಅಣ್ಣ ಸಹಿಸುತ್ತಾನಾ? ಅಥವಾ ತಂಗಿಗೆ ಹೇಗೆ ಪಾಠ ಕಲಿಸುತ್ತಾನೆ ಎನ್ನುವುದು ಕುತೂಹಲ ಮೂಡಿಸಿದೆ.

ಇನ್ನು ತಂಗಿ ಮಹಿಮಾಗೆ ಮಗುವೇ ಹುಟ್ಟಿರಲಿಲ್ಲ, ಆಕೆ ಗರ್ಭಿಣಿ ಎಂದು ತಿಳಿದಾಕ್ಷಣ ಗೌತಮ್ ದಿವಾನ್ ಗೆ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಆಗುತ್ತದೆ. ತನ್ನ ತಂಗಿ ಮಹಿಮಗೆ ಇನ್ನೊಂದು ಪುಟ್ಟ ಮಗು ಬರುತ್ತಿದೆ. ಅದರಲ್ಲಿಯೂ ತಂಗಿ ಹೊಟ್ಟೆಯಲ್ಲಿ ಅಪ್ಪನೇ ಹುಟ್ಟಿ ಬರ್ತಾರೆ ಎಂದು ಗೌತಮ್ ಬಹಳ ಖುಷಿಯಲ್ಲಿ ದಿನ ಕಳೆಯುತ್ತಿದ್ದಾನೆ. 

Tap to resize

ಆದರೆ ಅವರ ಖುಷಿ ಇನ್ನು ಸ್ವಲ್ಪ ದಿನಗಳ ಕಾಲ ಎಂದು ಅನ್ನಿಸುತ್ತಿದೆ. ಮಹಿಮಾ ಹೊಟ್ಟೆಯಲ್ಲಿದ್ದ ಜಗತ್ತು ಕಾಣದ ಪುಟ್ಟ ಮಗುವನ್ನು ಈ ಲೋಕದಿಂದಲೇ ದೂರ ಮಾಡಿದ್ದಾಳೆ. ತನ್ನ ಅಕ್ಕ ಹಾಗೂ ಗೆಳೆಯನ ಮಾತನ್ನು ಕೇಳಿದ ಮಹಿಮಾ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾಳೆ.

ತಾನು ಚೆನ್ನೈನಲ್ಲಿ ನಡೆಯುತ್ತಿರುವ ಮಾಡೆಲಿಂಗ್ ಕಾನ್ಫೆರೆನ್ಸ್‌ಗೆ ಹೋಗಬೇಕು ಎಂದು ಮನೆಯಲ್ಲಿ ಹೇಳಿದ್ದಳು. ಆದರೆ, ಗಂಡ, ಅತ್ತೆ-ಮಾವ ಯಾರೂ ಇದಕ್ಕೆ ಒಪ್ಪದಿದ್ದಾಗ ತೀವ್ರ ಪೇಚಿಗೆ ಸಿಲುಕಿದ್ದಳು. 

ನಂತರ ತಾನು ಮಾಡೆಲಿಂಗ್‌ಗೆ ಹೋಗಬೇಕೆಂದರೆ ಚೆನ್ನೈನಲ್ಲಿ ನಡೆಯುತ್ತಿರುವ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸಲೇಬೇಕು ಎಂದು ತನ್ನ ಅಣ್ಣ ಗೌತಮ್ ದಿವಾನಿಗೆ ಕರೆ ಮಾಡಿ, ಚೆನ್ನೈಗೆ ಹೋಗಿ ಬರುವುದಾಗಿ ಹೇಳುತ್ತಾಳೆ. ಇದಕ್ಕೆ ಮೊದಲು ಬೇಡವೆಂದರೂ, ತಂಗಿ ಮಾತಿಗೆ ವಿರೋಧವಾಗಿ ನಡೆದುಕೊಳ್ಳಲಾಗದೇ ಒಪ್ಪಿಕೊಂಡಿರುತ್ತಾನೆ.
 

ಇನ್ನು ಗರ್ಭಿಣಿ ಆದವರು ಹೈ ಹೀಲ್ಡ್‌ ಚಪ್ಪಲಿ ಧರಿಸುವುದು, ಹೆಚ್ಚು ಓಡಾಡುವುದು, ಪ್ರಯಾಣ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರಿಂದ ಮಹಿಮಾ ಹೊಟ್ಟೆಯಲ್ಲುದ್ದ ಮಗುವನ್ನೇ ತೆಗೆಸುತ್ತಾಳೆ.

ಜೊತೆಗೆ ನನಗೆ ನನ್ನ ವೈಯಕ್ತಿಕ ಜೀವನವೇ ಮುಖ್ಯವಾಗಿದ್ದು, ಮಗುವಿಗಾಗಿ ಸೌಂದರ್ಯ ಕಳೆದುಕೊಳ್ಳಲು ಇಷ್ಟವಿಲ್ಲ. ಮಾಡೆಲಿಂಗ್‌ಗಾಗಿ ತಾನು ಏನು ಬೇಕಾದರೂ ಮಾಡುವುದಾಗಿ ನಿರ್ಧಾರ ಮಾಡಿದ್ದಾಳೆ. ಈಗ ಮಗುವನ್ನು ತೆಗೆಸಿದ ಮಹಿಮಾ ಸೀದಾ ಅಣ್ಣನ ಮನೆಗೆ ಬಂದಿದ್ದಾಳೆ.

ಮಹಿಮಾ ಗರ್ಭಿಣಿ ಆಗಿದ್ದರೂ ಹೀಲ್ಡ್ ಸ್ಲಿಪ್ಪರ್ ಧರಿಸುವುದು, ಹೆಚ್ಚಾಗಿ ಓಡಾಡುವುದನ್ನು ಮಾಡುತ್ತಿದ್ದುದನ್ನು ನೋಡಿದ ಅತ್ತೆ ಹೆಜ್ಜೆ ಹೆಜ್ಜೆಗೂ ಕಾಳಜಿವಹಿಸುತ್ತಿದ್ದರು. ಆದರೆ, ಅತ್ತೆಯ ಕಾಳಜಿಯೇ ಮಹಿಮಾಗೆ ಹಿಂಸೆ ಎನಿಸಿದ್ದು, ಅಣ್ಣ ಗೌತಮ್ ದಿವಾನ್‌ಗೆ ಕರೆ ಮಾಡಿ ನಾನು ತವರು ಮನೆಗೆ ಬರುತ್ತೇನೆ ಎಂದು ಹೇಳಿದ್ದಾಳೆ. 
 

ಇನ್ನು ಹೊಟ್ಟೆಯಲ್ಲಿನ ಮಗುವನ್ನು ಕಾಳಜಿ ಮಾಡಲು ನಮ್ಮ ಮನೆಯಲ್ಲಿ ಅನುಕೂಲ ಆಗಲಿದೆ ಎಂದು ತಂಗಿಯ ಸಂತೋಷವೇ ತನಗೆ ಮುಖ್ಯವೆಂದು ಬರಲು ಸಮ್ಮತಿ ಸೂಚಿಸುತ್ತಾನೆ. ಅಣ್ಣ ಒಪ್ಪಿದ್ದೇ ತಡ ಮಹಿಮಾ ಮನೆಗೆ ಬಂದಿದ್ದಾಳೆ. ಆದರೆ, ಈಗ ಮಹಿಮಾ ಹೊಟ್ಟೆಯಲ್ಲಿ ಮಗುವೇ ಇಲ್ಲ. 
 

ಇದನ್ನು ಮನೆಯವರಿಗೆ ಹೇಗೆ ಮನವರಿಕೆ ಮಾಡುತ್ತಾಳೆ, ಸುಳ್ಳನ್ನು ಹೇಗೆ ಮುಚ್ಚಿಡುತ್ತಾಳೆ ಎಂಬುದನ್ನು ಕಾದುನೋಡಬೇಕಿದೆ. ಜೊತೆಗೆ, ಮಗುವನ್ನು ತೆಗೆಸಿದ ಮಹಿಮಾಳನ್ನು ಅಣ್ಣ ಹಾಗೂ ಗಂಡ ಸಹಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆಯೂ ಧಾರಾವಾಹಿ ವೀಕ್ಷಕರಲ್ಲಿ ಮೂಡಿದೆ.

Latest Videos

click me!