Amruthadhaare Serial: 18 ವರ್ಷಗಳ ಹಿಂದೆ ರಾಧಿಕಾ ಪಂಡಿತ್‌ಗೆ ಹೇಳಿದ್ದನ್ನು‌ ಮತ್ತೆ ರಿಪೀಟ್‌ ಮಾಡಿದ ಗೌತಮ್!

Published : Jan 26, 2026, 12:36 PM IST

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಸುಷ್ಮಾ ಎನ್ನುವ ಹುಡುಗಿ ಗೌತಮ್‌ನನ್ನು ಲವ್‌ ಮಾಡುತ್ತಿದ್ದಾಳೆ. ಗೌತಮ್-ಭೂಮಿಕಾ ಗಂಡ-ಹೆಂಡತಿ, ಇವರಿಗೆ ಆಕಾಶ್‌ ಎಂಬ ಮಗನಿದ್ದಾನೆ, ಕುಟುಂಬವಿದೆ ಎನ್ನೋದು ಈಗ ಸುಷ್ಮಾಗೆ ಗೊತ್ತಿದೆ. ಇವಳಿಗೆ ಗೌತಮ್‌ ಬುದ್ಧಿ ಹೇಳಿದ್ದಾನೆ. 

PREV
15
ಸುಷ್ಮಾಗೆ ಬುದ್ಧಿ ಹೇಳಿದ್ರು

ಗೌತಮ್‌, ಸುಷ್ಮಾ ಬಳಿ ಮಾತನಾಡಿದ್ದಾನೆ. “ನಿನಗೆ ನನ್ನ ಮೇಲೆ ಬೇರೆಯದೇ ಆದ ಭಾವನೆ ಇದೆ ಎಂದು ಅನುಮಾನ ಇತ್ತು. ಹೀಗಾಗಿ ನಾನು ನಿನ್ನನ್ನು ಅವಾಯ್ಡ್‌ ಮಾಡುತ್ತಲಿದ್ದೆ. ನನ್ನ ಪರಿಸ್ಥಿತಿ ಬೇರೆ ಇತ್ತು. ಹೀಗಾಗಿ ಯಾವುದನ್ನೂ ಕೂಡ ಬಾಯಿ ಬಿಟ್ಟು ಹೇಳೋ ಥರ ಇರಲಿಲ್ಲ. ನೀನು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ವಾಸ್ತವ ಬೇರೆ ಇತ್ತು, ಅದು ನಿನಗೆ ಅರ್ಥ ಆಗಲಿಲ್ಲ” ಎಂದು ಗೌತಮ್‌ ಹೇಳಿದ್ದಾನೆ.

25
ಫೀಲಿಂಗ್ಸ್‌ ಜೀವನ ಆಗಬಾರದು

“ನಿನ್ನ ಮನಸ್ಸಿನಲ್ಲಿ ತುಂಬಿಕೊಂಡಿರೋದು ಕುರುಡು ಪ್ರೀತಿ. ಒಬ್ಬರನ್ನು ಪ್ರೀತಿಸೋದಕ್ಕೂ, ಇಷ್ಟಪಡೋದಿಕ್ಕೆ ವ್ಯತ್ಯಾಸ ಇದೆ. ನನ್ನ ಬಣ್ಣ, ಪರ್ಸನಾಲಿಟಿ ಎಲ್ಲವನ್ನು ನೀನು ಇಷ್ಟಪಡಬಹುದು, ಆದರೆ ಇದನ್ನೇ ನೀನು ಪ್ರೀತಿ ಅಂದುಕೊಂಡಿದ್ದೀಯಾ. ಜೀವನದಲ್ಲಿ ಫೀಲಿಂಗ್ಸ್‌ ಇರಬೇಕು, ಫೀಲಿಂಗ್ಸ್‌ ಜೀವನ ಆಗಬಾರದು. ನಾವು ಭಾವನೆಗಳನ್ನು ಕಂಟ್ರೋಲ್‌ ಮಾಡೋ ಥರ ಇರಬೇಕು. ಅಡುಗೆಯಲ್ಲಿ ಎಲ್ಲವೂ ಇರಬೇಕು, ಆದರೆ ಯಾವುದೂ ಅತಿ ಆಗಬಾರದು” ಎಂದು ಹೇಳಿದ್ದಾನೆ.

35
ನನ್ನ ಮೇಲೆ ಆಕರ್ಷಣೆ ಇದೆ ಅಷ್ಟೇ

“ಜೀವನದಲ್ಲಿ ಪ್ರೀತಿ ಮಾಡೋದು ತಪ್ಪು. ಆದರೆ ಪ್ರೀತಿಯನ್ನು ಅರ್ಥ ಮಾಡಿಕೊಂಡಿರೋದು ತಪ್ಪು. ನಿನಗೆ ನನ್ನ ಮೇಲೆ ಆಕರ್ಷಣೆ ಇದೆ ಅಷ್ಟೇ, ನಿನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡು, ಈ ವಯಸ್ಸು, ಅವಕಾಶವನ್ನು ವ್ಯರ್ಥ ಮಾಡಬೇಡ” ಎಂದು ಹೇಳಿದ್ದಾನೆ.

45
ನಿನ್ನ ತಪ್ಪು ತಿದ್ದಿಕೋ

“ನಾವು ಸಮಯವನ್ನು ಖರೀದಿ ಮಾಡುವಷ್ಟು ದೊಡ್ಡವರಲ್ಲ, ಶ್ರೀಮಂತರಲ್ಲ. ಮೊದಲು ನೀನು ನಿನ್ನನ್ನು ಪ್ರೀತಿಸು, ಜೀವನವನ್ನು ಪ್ರೀತಿಸು. ನೀನು ಚಿಕ್ಕ ಹುಡುಗಿ. ನಿನ್ನ ಭವಿಷ್ಯದ ಬಗ್ಗೆ ಅಪ್ಪ-ಅಮ್ಮ ಏನೇನೋ ಕನಸು ಕಟ್ಟುಕೊಂಡಿರುತ್ತಾರೆ. ಈ ವಯಸ್ಸಿನಲ್ಲಿ ಈ ಥರ ಆಗೋದು ಸಹಜ, ನಿನ್ನ ತಪ್ಪು ತಿದ್ದಿಕೋ, ಇದು ಯಾರು ಮಾಡದಿರೋ ತಪ್ಪಲ್ಲ” ಎಂದು ಹೇಳಿದ್ದಾನೆ.

55
2008ರಲ್ಲಿ ಮೊಗ್ಗಿನ ಮನಸು ರಿಲೀಸ್

2008ರಲ್ಲಿ ಮೊಗ್ಗಿನ ಮನಸು ಸಿನಿಮಾ ತೆರೆ ಕಂಡಿತ್ತು. ಈ ಚಿತ್ರದಲ್ಲಿ ರಾಧಿಕಾ ಪಂಡಿತ್‌ ಅವರು ನಾಯಕಿಯಾಗಿದ್ದು, ಚಂಚಲಾ ಎನ್ನುವ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಪಾತ್ರ ಮಾಡಿದ್ದರೆ, ರಾಜೇಶ್‌ ನಟರಂಗ ಅವರು ಪ್ರೊಫೆಸರ್‌ ಆಗಿ ನಟಿಸಿದ್ದರು. ಆಗ ಚಂಚನಾಗೆ ರಾಜೇಶ್‌ ಮೇಲೆ ಲವ್‌ ಆಗುವ ಸೀನ್‌ ಇರುವುದು. ಈಗ ಸುಷ್ಮಾಗೆ ಬುದ್ಧಿ ಹೇಳಿದಂತೆ, ಅಂದು ಚಂಚಲಾಗೆ ಬುದ್ಧಿ ಹೇಳಿದ್ದರು. ಈ ದೃಶ್ಯವನ್ನು ನೋಡಿ ಅನೇಕರು ಮೊಗ್ಗಿನ ಮನಸು ಎಂದು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories