ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಜೋಡಿ ಇಲ್ಲಿವೆ ನೋಡಿ.. ನಿಮಗಿಷ್ಟವಾದ ಕ್ಯೂಟ್ ಪೇರ್ ಯಾವುದು?

Published : Mar 02, 2025, 10:20 AM ISTUpdated : Mar 02, 2025, 10:32 AM IST

ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ 2ನೇ ಸೀಸನ್ ಆರಂಭವಾಗಿದೆ. ವಿವಿಧ ಕ್ಷೇತ್ರಗಳ 10 ಜೋಡಿಗಳು ಭಾಗವಹಿಸಿದ್ದು, ಅವರಿಗೆ ಜೋಡಿ ಮೆಂಟರ್‌ಗಳು ಮಾರ್ಗದರ್ಶನ ನೀಡಲಿದ್ದಾರೆ. ಈ ಸೀಸನ್‌ನಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾರು?

PREV
111
ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಜೋಡಿ ಇಲ್ಲಿವೆ ನೋಡಿ.. ನಿಮಗಿಷ್ಟವಾದ ಕ್ಯೂಟ್ ಪೇರ್ ಯಾವುದು?

ಜೀ ಕನ್ನಡ ವಾಹಿನಿಯಲ್ಲಿ ಇದೀಗ ಭರ್ಜರಿ ಬ್ಯಾಚುಲರ್ಸ್ 2ನೇ ಸೀಸನ್ ಆರಂಭವಾಗಿದ್ದು, ಒಟ್ಟು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿದ ತಲಾ 10 ಜೋಡಿಗಳನ್ನು ಮಾಡಲಾಗಿದೆ. ಒಂಟಿಯಾಗಿದ್ದ ಬ್ಯಾಚುಲರ್‌ಗಳಿಗೆ ಜೋಡಿ ಮೆಂಟರ್‌ಗಳು ಸಿಕ್ಕಿದ್ದಾರೆ. ಇನ್ಮುಂದೆ ಬ್ಯಾಚುಲರ್‌ಗಳ ಹೊಸ ಚಾಪ್ಟರ್ ಶುರುವಾಗಲಿದೆ.  ಈ ಜೋಡಿಗಳಲ್ಲಿ ಯಾರು ನಿಮ್ಮ ಕ್ಯೂಟ್ ಜೋಡಿ ಎಂಬುದನ್ನು ನೀವೇ ನಿರ್ಧರಿಸಬೇಕು.

211

ಬ್ಯಾಚುಲರ್ಸ್‌ ಸ್ಟೇಜಲ್ಲಿ ಸಿಡಿಯೋಕೆ ರೆಡಿಯಾಯ್ತು ಬುಲೆಟ್; ರಕ್ಷಕ್ ಕಲೀತಾರ ಇಂಪ್ರೆಸ್ ಮಾಡೋ ಕಂಟೆಂಟ್. ರಕ್ಷಕ್ ಬುಲೆಟ್‌ಗೆ ರಮೋಲ ಕೊಟ್ರು ಥರಥರದ ಟಾರ್ಗೆಟ್. ಕಲ್ಲಿನ ಥರ ಇರೋ ರಕ್ಷಕ್ ಬುಲೆಟ್‌ಗೆ ಪ್ರೀತಿಯ ಉಳಿ ಪೆಟ್ಟು ಕೊಟ್ಟು ಶಿಲೆ ಮಾಡ್ತಾರ ರಮೋಲ? ರಕ್ಷಕ್‌ನ ತಿದ್ದೋಕೆ ಶುರು ಮಾಡಿದ ರಮೋಲ!

311

ಇನ್‌ಸ್ಟಂಟ್ ಬಾಡಿ ಬಿಲ್ಡರ್ ಪ್ರವೀಣ್ ಜೈನ್ ಯಾವ ಮೆಂಟರ್ ಮನಸು ಗೆಲ್ಲಬಹುದು Guess ಮಾಡಿ. ಸುಕೃತ ಬಂದ ಕೂಡ್ಲೇ ಬದಲಾಯ್ತು ಪ್ರವೀಣ್ ಹೇರ್‌ಸ್ಟೈಲ್. ಪ್ರವೀಣ್‌ಗೆ ರೋಬೋ ಲುಕ್ ಕೊಟ್ಟ ಸುಕೃತ. ಕಡ್ಡಿ ಪೈಲ್ವಾನ್ ಪ್ರವೀಣ್ ಹೃದಯವನ್ನ ದಪ್ಪ ಮಾಡೋಕೆ ಇನ್‌ಸ್ಟಿಟ್ಯೂಷನ್ ಥರ ಸಿಕ್ರು ಸುಕೃತಾ ನಾಗ್.

411

ಧನ್ಯಶ್ರೀ ಹೇಳಿದ್ದೆಲ್ಲ ಕೇಳಲೇಬೇಕೀಗ ಹುಲಿ ಕಾರ್ತಿಕ್. ಹುಲಿ ಬೇಟೆಯಾಡಿ ಪಳಗಿಸ್ತಿರೋ ಧನ್ಯಶ್ರೀ. ಕಾಡಲ್ಲಿದ್ರೂ ನಾಡಲ್ಲಿದ್ರೂ ನಾನ್ ಹುಲಿ ಅನ್ನೋ ಕಾರ್ತಿಕ್‌ನ ಮೆಂಟರಿಂಗ್ ಅನ್ನೋ ಖೆಡ್ಡಾದಲ್ಲಿ ಪಳಗಿಸೋಕೆ ಧನ್ಯಶ್ರೀ ರೆಡಿ.

511

ಮುಗ್ಧತೆಯೇ ಮೈತುಂಬಿದ್ದ ಡ್ರೋನ್ ಪ್ರತಾಪ್‌ಗೆ ಹೊಸ ಲುಕ್ ಕೊಟ್ಟ ಗಗನ. ಗಗನ ಕೈಗೆ ಸಿಕ್ಕಿ ಫುಲ್ ಕ್ಯೂಟಾದ ಡ್ರೋಣ್ ಪ್ರತಾಪ್. ಗಗನ ನೋಡಿ ನಾಚಿ ನೀರಾಗೋ ಡ್ರೋಣ್ ಪ್ರತಾಪ್ ಪ್ರಕಾರ 143 ಅಂದ್ರೆ ನಂಬರ್ ಅಲ್ವಂತೆ... ಹಾಗಿದ್ರೆ ಏನು ಅಂತ ನೋಡಿ!

611

ನಿಂತಲ್ಲೇ ನಗಿಸುವ ಸೂರ್ಯ ಹುಡುಗಿಯರನ್ನ ಇಂಪ್ರೆಸ್ ಮಾಡೋ ವಿದ್ಯೆಯ ಕಲೀತಾರ? ಅಭಿಜ್ಞಾ ಭಟ್ ಗ್ರೂಮಿಂಗ್ ಸ್ಟೈಲ್‌ಗೆ ಹೆದರಿ ಅದುರಿದ ಸೂರ್ಯ. ಅಭಿಜ್ಞಾ ಕಕ್ಷೆಯಲ್ಲಿ ಸುತ್ತುತ್ತಿರುವ ಸೂರ್ಯ.

711

ಹಾಡು ಕಟ್ಟಿ ಮೋಡಿ ಮಾಡೋ ದರ್ಶನ್ ನಾರಾಯಣ್ ಈ ಸ್ಟೇಜ್ ಮೇಲೆ ಹೊಸ ಲೈಫ್ ಕಟ್ಕೋತಾರ? ದರ್ಶನ್‌ಗೆ ಹೊಸ ಸ್ಟೈಲ್‌ನ ರಾಗ ಕಲ್ಸೋಕೆ ಅಮೃತಾ ರೆಡಿ. ಸಿಂಗರ್ ದರ್ಶನ್‌ಗೆ ಸಿಂಗಾರ ಮಾಡಿದ ಅಮೃತ. ಸಂಗೀತವೇ ನನ್ನ ಪ್ರೇಯಸಿ ಅನ್ನೋ ದರ್ಶನ್‌ಗೆ ಸಿಕ್ಕಿರೋ‌ ಅಮೃತ ಹಾಕ್ತಿದ್ದಾರೆ ಕಂಡೀಷನ್ ಮೇಲೆ ಕಂಡೀಷನ್!

811

ಹೆಸರು ಉಲ್ಲಾಸ್, ಬ್ಯಾಚುಲರ್ಸ್‌  ಸ್ಟೇಜ್ ಮೇಲೆ ಎಲ್ಲರಿಗೂ ಉಲ್ಲಾಸ ಹಂಚಿ ಭರ್ಜರಿ ಬ್ಯಾಚುಲರ್ ಆಗ್ತಾರ? ಉಲ್ಲಾಸ್‌ಗೆ ಸಿಕ್ತು ಪವಿ ಪೂವಪ್ಪ ಜೋಡಿಯ ಉಲ್ಲಾಸ. ಪವಿ ಪೂವಪ್ಪ ಜೊತೆ ಹಠ ಮಾಡೋ ಮಗುವಾದ ಉಲ್ಲಾಸ್. ಉಲ್ಲಾಸ್‌ನ ಮೆಂಟರ್ ಆಗಿ ಆಟದ ಉತ್ಸಾಹ ಹೆಚ್ಚಿಸ್ತಾರಾ ಪವಿ ಪೂವಪ್ಪ?

911

ಅಮೃತಾ ಕೈಗೆ ಸಿಕ್ಕಾಕೊಂಡಿರೋ ಸುನಿಲ್‌ನ ಕಾಪಾಡೋಕೆ ಬರ್ತಾನ ದೇವ್ರು? ಸುನಿಲ್ ಸುಂದರವಾಗಲು ಸಿಕ್ತು ಅಮೃತ ಹಸ್ತ. ಅಮೃತ ರಾಜ್ ಮೆಂಟರಿಂಗ್‌ನಲ್ಲಿ ಕ್ಲಾಸಿಕ್-ವೆಸ್ಟರ್ನ್ ಸ್ಟೈಲ್‌ ಪಡೆದ ಸೈಲೆಂಟ್ ಸುನಿಲ್. ಸಖತ್ತಾಗಿ ಹಾಡಿ ಪ್ರೇಕ್ಷಕರ ಮನಗೆಲ್ಲೋ ಸುನಿಲ್‌ನ ಹುಡುಗೀರ ಮನಗೆಲ್ಲೋ ಥರ ರೆಡಿ ಮಾಡ್ತಾರ ಅಮೃತ ರಾಜ್.

1011

ನೇಪಾಳದ ಪ್ರೇಮ್ ಥಾಪ ಹೃದಯದಲ್ಲಿ ಇಲ್ಲಾದ್ರೂ ಬೆಳಗುತ್ತ ಒಲವಿನ ದೀಪ. ಜವಾರಿ ಗೆಟಪ್‌ನಲ್ಲಿ ಪ್ರೇಮ್ ಥಾಪ-ವಿಜಯಲಕ್ಷ್ಮಿ ಮಿಂಚಿಂಗ್. ದರ್ಶನ್‌ಗೆ ಮೆಂಟರಿಂಗ್‌ ಮಾಡೋದೇ ಅಮೃತಾಗೆ ಕಷ್ಟ; ಪ್ರೇಮ್ ಥಾಪ ಥರ ಕನ್ನಡದ ಹುಡುಗರೇ ವಿಜಯಲಕ್ಷ್ಮಿಗೆ ಇಷ್ಟ. ಕೊರಿಯನ್ BTS ಹುಡುಗ ಪ್ರೇಮ್ ಥಾಪನನ್ನು ಕನ್ನಡದ ಕುವರ ಮಾಡೋಕೆ ರೆಡಿಯಾದ್ರು ವಿಜಯಲಕ್ಷ್ಮಿ. ವಿಜಯಲಕ್ಷ್ಮಿ ಸಾರಥ್ಯದಲ್ಲಿ ಕನ್ನಡದ ಹುಡುಗನಾದ ಪ್ರೇಮ್ ಥಾಪ.

1111

ಮದುವೆ ಯಾವಾಗ ಅಂತ ಕೇಳೋರ್ಗೆ ಉತ್ತರ ಕೊಡೋಕೆ ಭರ್ಜರಿಯಾಗಿ ಬಂದಾಯ್ತು ಭುವನೇಶ್. ಭುವನೇಶ್‌ಗೆ ಜೊತೆಯಾಗಿ ಅನನ್ಯ ಮಾಡಿದ್ರು ಕಮಾಲ್! ಅನನ್ಯ ಸಾರಥ್ಯದಲ್ಲಿ ಮಿರಮಿರ ಮಿಂಚಿದ ಭುವನೇಶ್. ಗಟ್ ಫೀಲಿಂಗ್ ಅಂದ್ರೆ ಗಟ್ಟಿ‌ ಫೀಲಿಂಗ್ ಅನ್ನೋ ಭುವನೇಶ್ ಅನನ್ಯ ಮೆಂಟರಿಂಗ್‌ನಲ್ಲಿ ಬದಲಾಗ್ತಾರ?ಹೆಂಗೈತೆ ಭುವನೇಶ್-ಅನನ್ಯ ಜೋಡಿ!?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories