ಕನ್ನಡ ಕಿರುತೆರೆಯ ಎವರ್ ಗ್ರೀನ್ ಜೋಡಿ ಅಂದ್ರೆ ಇವರೇ ಅಲ್ವಾ? ಏನಂತೀರಿ ನೀವು

Published : Mar 01, 2025, 02:07 PM ISTUpdated : Mar 01, 2025, 03:15 PM IST

ಕನ್ನಡ ಕಿರುತೆರೆಯ ಎವರ್ ಗ್ರೀನ್ ಜೋಡಿಗಳು ಅಂದ್ರೆ ನಿಮಗೆ ಯಾರ ಹೆಸರು ನೆನಪು ಬರುತ್ತೆ? ಹೆಚ್ಚಿನ ಜನ ಹೇಳ್ತಿದ್ದಾರೆ ಸಿದ್ದಾರ್ಥ್ ಸನ್ನಿಧಿಯಂತೆ.. ನಿಮಗೂ ಹಾಗೆ ಅನಿಸುತ್ತಾ?   

PREV
16
ಕನ್ನಡ ಕಿರುತೆರೆಯ ಎವರ್ ಗ್ರೀನ್ ಜೋಡಿ ಅಂದ್ರೆ ಇವರೇ ಅಲ್ವಾ? ಏನಂತೀರಿ ನೀವು

ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಧಾರಾವಾಹಿಗಳು ಬಂದು ಹೋಗಿವೆ. ಕೆಲವು ಸೂಪರ್ ಹಿಟ್ ಆಗಿದ್ರೆ, ಇನ್ನೂ ಕೆಲವು ಬಂದ ದಾರಿಯಲ್ಲಿ ಮತ್ತೆ ಹಾಗೇ ಮುಗಿದು ಹೋಗಿವೆ. ಕೆಲವು ಧಾರಾವಾಹಿಗಳು ಏಳೆಂಟು ವರ್ಷಗಳ ಕಾಲ ಪ್ರಸಾರವಾಗಿ ಎವರ್ ಗ್ರೀನ್ ಆಗಿ ಉಳಿದಿವೆ. ಅವುಗಳಲ್ಲಿ ಒಂದು ಅಗ್ನಿ ಸಾಕ್ಷಿ ಧಾರಾವಾಹಿ. 
 

26

ಅಗ್ನಿಸಾಕ್ಷಿ ಧಾರಾವಾಹಿ (Agnisakshi serial) ನಿಮಗೆ ನೆನಪಿದ್ಯಾ? ಖಂಡಿತಾ ನೆನಪಿರುತ್ತೆ. ಬರೋಬ್ಬರಿ 6 ವರ್ಷಗಳ ಕಾಲ ಕಲರ್ಸ್ ಕನ್ನಡದಲ್ಲಿ 1588 ಎಪಿಸೋಡ್ ಗಳ ಜೊತೆ ಪ್ರಸಾರವಾದ ಅತ್ಯಂತ ಜನಪ್ರಿಯ ಧಾರಾವಾಹಿ ಇದು. 2013 ರಲ್ಲಿ ಆರಂಭವಾದ ಈ ಸೀರಿಯಲ್ ಕೊನೆಗೊಂಡಿದ್ದು, 2020ರಲ್ಲಿ. ಈ ಸೀರಿಯಲ್ ಜನಪ್ರಿಯತೆ ಮುಖ್ಯ ಕಾರಣ ಸಿದ್ಧಾರ್ಥ್ ಹಾಗೂ ಸನ್ನಿಧಿಯ ಜೋಡಿ. 
 

36

ಇಷ್ಟವಿಲ್ಲದೇ ಮದುವೆಯಾಗುವ ಸಿದ್ಧಾರ್ಥ್ -ಸನ್ನಿಧಿಯ ನಡುವೆ, ಪ್ರೀತಿ ಬೆಳೆದು, ಸಂಸಾರದ ಸಮಸ್ಯೆಗಳನ್ನೆಲ್ಲಾ ಇಬ್ಬರು ಜೊತೆಯಾಗಿ ಹೇಗೆ ಸರಿದೂಗಿಸಿಕೊಂಡು ಬರುತ್ತಾರೆ ಅನ್ನೋದು ಕಥೆಯಾಗಿತ್ತು.  ಇವರಿಬ್ಬರನ್ನು ನೋಡೋದಕ್ಕಾಗಿಯೇ ವೀಕ್ಷಕರು 8 ಗಂಟೆಗೆ ಟಿವಿ ಮುಂದೆ ಬಂದು ಕೂರೋದು ಇತ್ತು. ಅಷ್ಟೊಂದು ಜನಪ್ರಿಯತೆ ಪಡೆದಿತ್ತು ಈ ಜೋಡಿ. 
 

46

ಗುಳಿ ಕೆನ್ನೆ ಚೆಲುವರಾದ ಸಿದ್ಧಾರ್ಥ್ ಸನ್ನಿಧಿಯ ರೊಮ್ಯಾಂಟಿಕ್ ಕ್ಷಣಗಳನ್ನು ನೋಡಿ ವೀಕ್ಷಕರ ಎದೆಯನ್ನು ಕಚಗುಳಿ ಇಟ್ಟಂತಾಗುತ್ತಿತ್ತು. ಹಾಗಾಗಿಯೇ ಇವತ್ತಿಗೂ ಜನರಲ್ಲಿ ಎವರ್ ಗ್ರೀನ್ ಜೋಡಿ ಯಾರು ಎಂದು ಕೇಳಿದ್ರೆ ಖಂಡಿತವಾಗಿ ಕೇಳಿ ಬರೋದು ಸಿದ್ದಾರ್ಥ್ ಮತ್ತು ಸನ್ನಿಧಿಯ ಹೆಸರು. ಅಷ್ಟೊಂದು ಮೋಡಿ ಮಾಡಿತ್ತು ಈ ಜೋಡಿ. 
 

56

ಸಿದ್ಧಾರ್ಥ್ ಪಾತ್ರದಲ್ಲಿ ವಿಜಯ್ ಸೂರ್ಯ (Vijay Suriya) ನಟಿಸುತ್ತಿದ್ದರೆ, ಸನ್ನಿಧಿಯಾಗಿ ವೈಷ್ಣವಿ ಗೌಡ ನಟಿಸುತ್ತಿದ್ದರು. ಈ ಜೋಡಿಗೆ ಎಷ್ಟೊಂದು ಫ್ಯಾನ್ ಫಾಲೋವಿಂಗ್ ಇತ್ತು ಅಂದ್ರೆ, ಜನರು ಇವರಿಬ್ಬರನ್ನು ನಿಜ ಜೀವನದಲ್ಲೂ ಜೋಡಿಯಾಗಿ ನೋಡೋಕೆ ಇಷ್ಟ ಪಟ್ಟಿದ್ದರು. ಅಷ್ಟೇ ಯಾಕೆ ವಿಜಯ್ ಸೂರ್ಯ ಬೇರೆ ಮದುವೆಯಾದಾಗ ಬೇಸರಪಟ್ಟಿದ್ದೂ ಇದೆ. 
 

66

ಅಗ್ನಿಸಾಕ್ಷಿ ಸೀರಿಯಲ್ ಕೊನೆಗೊಂಡು ವರ್ಷ 5 ಕಳೆದರೂ ಕೂಡ ಇವತ್ತಿಗೂ ಜನ ಈ ಜೋಡಿಯನ್ನು ನೆನಪಿಟ್ಟುಕೊಂಡಿದೆ, ವೈಷ್ಣವಿ ಗೌಡ ಹುಟ್ಟುಹಬ್ಬದಂದು ಫ್ಯಾನ್ಸ್ ಪೇಜ್, ಈ ಜೋಡಿಯ ಫೋಟೊ ಜೊತೆ ವಿಶ್ ಮಾಡಿತ್ತು. ಸದ್ಯ ವೈಷ್ಣವಿ ಮತ್ತು ವಿಜಯ್ ಇಬ್ಬರೂ ತಮ್ಮ ಕರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಸೀತಾ ರಾಮ ಸೀರಿಯಲ್ ನಲ್ಲಿ ನಟಿಸುತ್ತಿದ್ದರೆ, ವಿಜಯ್ ಸೂರ್ಯ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತಭಾಯ್ ಆಗಿ ನಟಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories