ಅಬ್ಬಬ್ಬಾ ಎಷ್ಟು ರೊಮ್ಯಾಂಟಿಕ್‌, ಚೈತ್ರಾ ವಾಸುದೇವನ್ ಮೆಹಂದಿ ಶಾಸ್ತ್ರದ ಸುಂದರ ಫೋಟೋಗಳು

Published : Mar 01, 2025, 06:15 PM ISTUpdated : Mar 01, 2025, 06:16 PM IST

Chaitra Vasudevan Mehndi: ನಿರೂಪಕಿ ಚೈತ್ರಾ ವಾಸುದೇವನ್ ಅವರ ಮೆಹಂದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಜಗದೀಪ್ ಜೊತೆ ಅವರ ವಿವಾಹವು ಈ ತಿಂಗಳು ನಡೆಯಲಿದೆ.

PREV
19
ಅಬ್ಬಬ್ಬಾ ಎಷ್ಟು ರೊಮ್ಯಾಂಟಿಕ್‌, ಚೈತ್ರಾ ವಾಸುದೇವನ್ ಮೆಹಂದಿ ಶಾಸ್ತ್ರದ ಸುಂದರ ಫೋಟೋಗಳು

ನಿರೂಪಕಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಮದುವೆ ಸಂಭ್ರಮದಲ್ಲಿದ್ದಾರೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಚೈತ್ರಾ ವಾಸುದೇವನ್ ತಮ್ಮ ಮೆಹಂದಿ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

29

ಇವೆಂಟ್ ಕಂಪನಿ ಜೊತೆ  ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ವಿದೇಶದಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡು ಬಂದಿದ್ದರು. ಈ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. 

39

ಮದುವೆ ಮೆಹಂದಿ ಅಂದ್ರೆ ಹುಡುಗಿಯರು ಮೊಣಕೈಯವರೆಗೂ ಚಿತ್ತಾರ ಬಿಡಿಸಿಕೊಳ್ಳುತ್ತಾರೆ. ಆದರೆ ಚೈತ್ರಾ ವಾಸುದೇವನ್ ಸಿಂಪಲ್‌ ಆಗಿ ಮೆಹಂದಿ ಹಾಕಿಸಿಕೊಂಡಿದ್ದಾರೆ. ಲೈಟ್ ಪಿಂಕ್ ಬಣ್ಣದ ಲೆಹೆಂಗಾ ಮತ್ತು ಸ್ಲೀವ್‌ಲೆಸ್ ಟಾಪ್ ಧರಿಸಿ ಚೈತ್ರಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 

49

ಇನ್ನು ಚೈತ್ರಾ ಕೈ ಹಿಡಿಯುತ್ತಿರುವ ಜಗದೀಪ್, ಮೆಹಂದಿ ಬಣ್ಣದ ಶೇರ್ವಾಣಿ, ವೈಟ್ ಪೈಜಾಮಾ ಧರಿಸಿ ಸಿಂಪಲ್ ಆಗಿ ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಎರಡು ಕುಟುಂಬದ ಆಪ್ತರು ಮಾತ್ರ ಈ ಮೆಹಂದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. 

59

ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿರುವ ಚೈತ್ರಾ ಅವರಿಗೆ ಕಾರ್ಯಕ್ರಮದಲ್ಲಿ ಜಗದೀಪ್ ಅವರ ಪರಿಚಯವಾಗಿತ್ತು. ಕಾರ್ಯಕ್ರಮದ ಆಯೋಜನೆಗಾಗಿ ಚೈತ್ರಾ ವಾಸುದೇವನ್ ಅವರನ್ನು ಜಗದೀಪ್ ಸಂಪರ್ಕಿಸಿದ್ದರು. ಹೀಗೆ ಇಬ್ಬರ ನಡುವಿನ ಸ್ನೇಹ ಬೆಳೆದಿತ್ತು. 

69

ಚೈತ್ರಾ ಅವರ ವ್ಯಕ್ತಿತ್ವಕ್ಕೆ ಮನಸೋತ ಜಗದೀಪ್, ತಮ್ಮನ್ನು ಮದುವೆ ಆಗ್ತೀರಾ ಎಂದು ಪ್ರಪೋಸ್ ಮಾಡಿದ್ದರು. ಇಷ್ಟು ಮಾತ್ರವಲ್ಲದೇ ಮದುವೆ ಬಗ್ಗೆ ನೇರವಾಗಿಯೇ ಚೈತ್ರಾ ವಾಸುದೇವನ್ ಪೋಷಕರ ಬಳಿಯಲ್ಲಿಯೂ ಜಗದೀಪ್ ಮಾತನಾಡಿದ್ದರು. 

79

ಇದಾದ ಬಳಿಕ ಚೈತ್ರಾ ವಾಸುದೇವನ್ ಮದುವೆಗೆ ಒಪ್ಪಿದ್ದರು. ಈ ತಿಂಗಳು ಜಗದೀಪ್ ಮತ್ತು ಚೈತ್ರಾ ವಾಸುದೇವನ್ ಮದುವೆ ನಡೆಯಲಿದೆ. ಇದೀಗ ಮೆಹಂದಿ ಶಾಸ್ತ್ರ ನಡೆಯಲಿದೆ. ಮಹೆಂದಿ ಶಾಸ್ತ್ರ ತುಂಬಾ ಖಾಸಗಿಯಾಗಿ ನಡೆದಿದೆ. 

89

ಮೊದಲ ಗಂಡನಿಂದ ವಿಚ್ಛೇದನ ಪಡೆದುಕೊಂಡಿರುವ ಚೈತ್ರಾ ವಾಸುದೇವನ್,  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಸತ್ಯ ನಾಯ್ಡು ಅವರಿಂದ ಡಿವೋರ್ಸ್ ಪಡೆದಿರುವ ಚೈತ್ರಾ ಇದೀಗ ಎರಡನೇ ಮದುವೆಯಾಗುತ್ತಿದ್ದಾರೆ.

99

ಇತ್ತೀಚೆಗೆ ಚೈತ್ರಾ ವಾಸುದೇವನ್‌ ಅವರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಸೀರೆ ಖರೀದಿ ಮಾಡಿದ್ದಾರೆ. ಕಂಚಿಯಿಂದಲೇ ಈ ಸೀರೆ ಖರೀದಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories