ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ, ಅಣೆಕಟ್ಟೆ ಮಾತು ಆಡಬೇಕೆ: ಅನುಶ್ರೀ

First Published | Aug 23, 2023, 3:24 PM IST

ಪ್ರಕೃತಿ ಸವಿಯುತ್ತಿರುವ ನಿರೂಪಕಿ ಅನುಶ್ರೀ. ವೈರಲ್ ಆಯ್ತು ಬರೆದಿರುವ ಸಾಲುಗಳು...

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ, ಜೀ ಕನ್ನಡದ ಶೈನಿಂಗ್ ಸ್ಟಾರ್ ಅನುಶ್ರೀ ಇನ್‌ಸ್ಟಾಗ್ರಾಂನಲ್ಲಿ ಪ್ರವಾಸದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

'ಮನಸೆಂಬ ಭೂಪಟದಿ, ಗಡಿ ರೇಖೆ ಇಲ್ಲ. ಮನಸೆಂಬ ಮನೆಯಲ್ಲಿ, ಗೋಡೆ ಇಲ್ಲ' ಎಂದು ಅನುಶ್ರೀ  ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Tap to resize

 'ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ ಅಣೆಕಟ್ಟೆ ಮಾತು ಆಡಬೇಕೆ...ಖುಷಿಯಾಗಿರೋಣ!! ಏನಂತೀರ' ಎಂದು ಆನುಶ್ರೀ ಹೇಳಿದ್ದಾರೆ. 

ಯಾಕೋ ಮಂದಹಾಸ ನಗುವಿಗೆ ವಯಸ್ಸಾದಂತೆ ಕಾಣ್ತಾ ಇದೆ,  ನಿಜ ಅಕ್ಕ ತುಂಬಾ ಚೆನ್ನಾಗಿ ಕಾಣ್ತಿದ್ದೀರಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

 ಅನುಶ್ರೀ ಮದುವೆ ಯಾವಾಗ ಅನ್ನೋದು ಎಲ್ಲರಿಗಿರುವ ಕ್ಯೂರಿಯಾಸಿಟಿ ಹೀಗಾಗಿ ಯಾವ ರೀತಿ ಸಾಲು ಬರೆದುಕೊಂಡರೂ ಮದುವೆ ಬಾಯ್‌ಫ್ರೆಂಡ್‌ಗೆ ರಿಲೇಟ್ ಮಾಡುತ್ತಾರೆ ಫ್ಯಾನ್ಸ್.

ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುಶ್ರೀ ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. 

Latest Videos

click me!