ಗೃಹಪ್ರವೇಶ ಸೀರಿಯಲ್ ಜಂಭದ ಹುಡುಗಿ ರಾಗಿಣಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ!

First Published | Aug 22, 2023, 6:01 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೃಹಪ್ರವೇಶ ಸೀರಿಯಲ್ ನಲ್ಲಿ ರಾಗಿಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಟಿ ಸಿಮ್ರನ್ ಮಾಹಿ. ಈ ನಟಿಯ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೃಹಪ್ರವೇಶ (Gruhapravesha) ಸೀರಿಯಲ್ ಸದ್ಯ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಬಾಲ್ಯದಲ್ಲಿಯೇ ತಾಯಿ ಮತ್ತು ಮಗುವನ್ನು ಬಿಟ್ಟು ಹೋದ, ತಂದೆಯನ್ನು ಹುಡುಕುವ ಮಗಳು ಪಲ್ಲವಿಯ ಕಥೆ ಇದಾಗಿದೆ. 
 

ಈ ಸೀರಿಯಲ್ ನಲ್ಲಿ ಪಲ್ಲವಿಯ ತಂದೆಯ ಎರಡನೇ ಪತ್ನಿಯ ಮಗಳು ರಾಗಿಣಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸಿಮ್ರನ್ ಮಾಹಿ. ರಾಗಿಣಿ (Ragini) ಪಾತ್ರ ಈಗಾಗಲೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಾಡರ್ನ್ ಜೊತೆಗೆ ತಾನು ಹೇಳಿದ್ದು ತನಗೆ ಸಿಗಲೇಬೇಕು ಎನ್ನುವ ದರ್ಪದ ಹುಡುಗಿ ರಾಗಿಣಿ ಪಾತ್ರಕ್ಕೆ ಸಿಮ್ರನ್ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದ್ದಾರೆ. 
 

Tap to resize

ಸಿಮ್ರಾನ್ ಮಹಿ (Simran Mahi) ನಟಿಯಾಗೋದಕ್ಕೂ ಮೊದಲು ಮಾಡೆಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಈಗಷ್ಟೇ ಇಪ್ಪತ್ತರ ಹರೆಯದಲ್ಲಿರುವ ಸಿಮ್ರನ್ ಹಲವಾರು ಫೊಟೋಶೂಟ್, ಮಾಡೆಲಿಂಗ್ ಮೂಲಕ ಗುರುತಿಸಿದ್ದಾರೆ. ಇವರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಗೃಹಪ್ರವೇಶದ ಮೂಲಕ. 
 

ಈಗಾಗಲೇ ಸಿಮ್ರನ್ ಅವರ ಮ್ಯೂಸಿಕ್ ವಿಡಿಯೋ (Music Video) ಒಂದು ರಿಲೀಸ್ ಆಗಿದ್ದು, ಜನ ಮೆಚ್ಚಿಕೊಂಡಿದ್ದಾರೆ. "ಸಜನಾ ರೇ" ಎಂಬ ಮ್ಯೂಸಿಕ್ ವೀಡಿಯೊದಲ್ಲಿ  ಸಿಮ್ರನ್ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಲವ್ ಸಾಂಗ್ ನ್ನು ಜನರು ಸಹ ಇಷ್ಟಪಟ್ಟಿದ್ದಾರೆ. 
 

ಇನ್ನು ಸಿಮ್ರಾನ್ ಮಹಿ ಹುಟ್ಟಿದ್ದು, ಬೆಳೆದದ್ದೂ ಎಲ್ಲಾ ಬೆಂಗಳೂರಿನಲ್ಲಿ. ಮಾಡೆಲಿಂಗ್ ನಲ್ಲಿಯೇ ಕಳೆದ ಮೂರು ವರ್ಷಗಳಿಂದ ಗುರುತಿಸಿಕೊಂಡಿರುವ ಸಿಮ್ರಾನ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ನ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

ಕಂಟೆಂಟ್ ಕ್ರಿಯೇಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸಿಮ್ರನ್ ಮಹಿ. ನಂತರ, ಅವರು ಸಂಗೀತ ವೀಡಿಯೊಗಳಲ್ಲಿ ನಟಿಸಲು ಪ್ರಾರಂಭಿಸಿದರು. 2023 ರಲ್ಲಿ "ಗೃಹ ಪ್ರವೇಶ" ದಲ್ಲಿ ರಾಗಿಣಿ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಮ್ರಾನ್ ಖ್ಯಾತಿ ಪಡೆದರು.
 

ಸೋಶಿಯಲ್ ಮೀಡೀಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿರುವ ಸಿಮ್ರನ್, ಹೆಚ್ಚಾಗಿ ರೀಲ್ಸ್ ಮಾಡುತ್ತಾ, ಫೋಟೋ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಮೊದಲ ಸೀರಿಯಲ್ ಮೂಲಕವೇ ಗಮನ ಸೆಳೆದ ನಟಿಗೆ ಇನ್ಸ್ಟಾಗ್ರಾಂ ನಲ್ಲಿ ಈಗಾಗಲೆ 51 ಸಾವಿರ ಫಾಲೋವರ್ಸ್ ಇದ್ದಾರೆ.
 

Latest Videos

click me!