ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ, ಚಿತ್ರರಂಗದ ನೆಚ್ಚಿನ ನಟಿ ಶ್ವೇತಾ ಚಂಗಪ್ಪ ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಚೋಟಾ ಚಾಂಪಿಯನ್ ಶೋ ನಿರೂಪಣೆ ಮಾಡುತ್ತಿದ್ದಾರೆ.
ಶ್ವೇತಾ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಸೆಟ್‌ಗೆ ಪುತ್ರ ಎಂಟ್ರಿ ಕೊಟ್ಟಿದ್ದಾನೆ. ಜಿಯಾನ್ ತುಂಟಾಟ ಮತ್ತು ಮೇಕಪ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
'ನನ್ನ ಜೀವನದ ಚೋಟಾ ಚಾಂಪಿಯನ್ ಜಿಯಾನ್ ಅಯ್ಯಪ್ಪ ನನ್ನ ಶೂಟಿಂಗ್ ಸೆಟ್‌ಗೆ ಆಗಮಿಸಿ ನನ್ನ ಮೇಕಪ್ ಟಚ್‌ಅಪ್ ಮಾಡಿದ್ದಾರೆ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
'ಕೆಲಸ ಮಾಡುವ ಮಹಿಳೆಯರಿಗೆ ಇದಕ್ಕಿಂತ ಜೀವನದಲ್ಲಿ ಏನು ಬೇಕು? ಇಷ್ಟು ಚಿಕ್ಕ ವಯಸ್ಸಿಗೆ ನನ್ನ ಮತ್ತು ನನ್ನ ಕೆಲಸ ಅರ್ಥ ಮಾಡಿಕೊಳ್ಳುವ ವ್ಯಕ್ತಿ ಕೊಟ್ಟಿದ್ದಾನೆ ದೇವರು' ಎಂದಿದ್ದಾರೆ.
ಚೋಟಾ ಚಾಂಪಿಯನ್ ಸೆಟ್‌ನಲ್ಲಿ ಶ್ವೇತಾ ಹಸಿರು ಬಣ್ಣದ ಸೀರೆ ಧರಿಸಿ ಸಿಂಪಲ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಬ್ರೇಕ್ ನಡುವೆ ವಿಶ್ರಾಂತಿ ಪಡೆಯುತ್ತಿದ್ದರು.
ಸೋಫಾ ಮೇಲೆ ತಾಯಿ ಕುಳಿತಿರುವುದನ್ನು ಕಂಡು ಚಿಯಾನ್ ಮೇಕಪ್ ಮಾಡಲು ಮುಂದಾಗುತ್ತಾನೆ. ಆನಂತರ ತನ್ನ ತುಂಟಾಟ ಆರಂಭಿಸುತ್ತಾನೆ.
ಮಜಾ ಟಾಕೀಸ್' ಸುಂದರ ಚೆಲುವೆ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಸೆಪ್ಟೆಂಬರ್ 9, 2019ರಂದು ಮುದ್ದು ಕೃಷ್ಣನಿಗೆ ಜನ್ಮ ನೀಡಿದ್ದರು.