ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಸಂತೂರ್ ಮಮ್ಮಿ Shwetha Changappa: 1 ಮಿಲಿಯನ್ ಹೃದಯದ ಪ್ರೀತಿ ಸಿಕ್ಕಿದೆಯಂತೆ!

Published : Oct 22, 2023, 04:03 PM ISTUpdated : Oct 22, 2023, 04:05 PM IST

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಸದ್ಯ ಸಿನಿಮಾ, ಟಿವಿ ಶೋ ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಸೀಸನ್ 2 ರಿಯಾಲಿಟಿ ಶೋ ನ ಕಾರ್ಯಕ್ರಮದ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

PREV
16
ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಸಂತೂರ್ ಮಮ್ಮಿ Shwetha Changappa: 1 ಮಿಲಿಯನ್ ಹೃದಯದ ಪ್ರೀತಿ ಸಿಕ್ಕಿದೆಯಂತೆ!

ನಿರೂಪಕಿ ಶ್ವೇತಾ ಚಂಗಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅವರ ದಿನನಿತ್ಯದ ಚಟುವಟಿಕೆಗಳ ಬಗ್ಗೆ ತಮ್ಮ ಫ್ಯಾನ್ಸ್ ಬಳಿ ಹಂಚಿಕೊಳ್ಳುತ್ತಾರೆ. ತರೇಹವಾರಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

26

ಸಾಮಾಜಿಕ ಜಾಲತಾಣ ಖಾತೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 1 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಈ ಖುಷಿಯಲ್ಲಿ ಅವರು ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

36

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟು, 1 ಮಿಲಿಯನ್ ಅನುಯಾಯಿಗಳು, 1 ಮಿಲಿಯನ್ ಹೃದಯಗಳು, 1 ಮಿಲಿಯನ್ ಪ್ರೀತಿ ನನಗೆ ಸಿಕ್ಕಿದೆ. ಲವ್ ಯು ಗಾಯ್ಸ್ ಎಂದು ಶ್ವೇತಾ ಚಂಗಪ್ಪ ಬರೆದುಕೊಂಡಿದ್ದಾರೆ.

46

ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚಂಗಪ್ಪ ಜನಪ್ರಿಯ ಆಗಿದ್ದರು. ಮಜಾ ಟಾಕೀಸ್ ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ. 

56

ಶಿವಣ್ಣ ಅವರ 125ನೇ ಸಿನಿಮಾ ವೇದ ಚಿತ್ರದಲ್ಲಿ ಪಾರಿ ಪಾತ್ರದಲ್ಲಿ ಶ್ವೇತಾ ಅಭಿನಯಿಸಿದ್ದಾರೆ. ತಮ್ಮ ಅದ್ಭುತವಾದ ನಟನೆ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.ಟಿವಿ ಪರದೆ ಮೇಲೆ ಮಾತ್ರವಲ್ಲ ಬೆಳ್ಳಿ ಪರದೆ ಮೇಲೆಯೂ ನಟಿ ಶ್ವೇತಾ ಚೆಂಗಪ್ಪ ಮಿಂಚುತ್ತಿದ್ದಾರೆ. 

66

ಶ್ವೇತಾ ಚಂಗಪ್ಪಾ ಟಿವಿ ಹಾಗೂ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ. 2 ದಶಕಗಳಿಂದಲೂ ನಟಿ ಶ್ವೇತಾ ತನ್ನ ಅಭಿನಯದಿಂದ ಜನರ ಮನಸ್ಸು ಕದ್ದಿದ್ದಾರೆ. ಅನೇಕ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Read more Photos on
click me!

Recommended Stories