Bikini ಬಿಟ್ಟು ಸೀರೆಯುಟ್ಟ Sonu Gowda: ನಿಮ್ಮ ಬ್ಲೌಸ್‌ ಮೇಲೆ ಗೊಂಬೆ ಏನ್ ಮಾಡ್ತಿದೆ ಎಂದ ನೆಟ್ಟಿಗರು!

Published : Oct 22, 2023, 03:07 PM IST

ಬಿಗ್​ಬಾಸ್ ಬ್ಯೂಟಿ ನಟಿ ಸೋನು ಗೌಡ ಇತ್ತೀಚೆಗೆ ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸರಳವಾಗಿ ಪಕ್ಕಾ ಹಳ್ಳಿ ಸ್ಟೈಲ್​ನಲ್ಲಿ ಸೀರೆಯುಟ್ಟು ರೆಡಿಯಾದ ಸೋನು ಗೌಡ ಅವರನ್ನು ನೋಡಿದ್ರೆ ಇವಳು ನಮ್ಮ ಸೋನು ಗೌಡಾನಾ ಅಂತ ಸಂದೇಹ ಪಡಬಹುದು.  

PREV
17
Bikini ಬಿಟ್ಟು ಸೀರೆಯುಟ್ಟ Sonu Gowda: ನಿಮ್ಮ ಬ್ಲೌಸ್‌ ಮೇಲೆ ಗೊಂಬೆ ಏನ್ ಮಾಡ್ತಿದೆ ಎಂದ ನೆಟ್ಟಿಗರು!

ಸಿಂಪಲ್ ಆಗಿರುವ ಚಿಕ್ಕದಾದ ಝುಮುಕಿ ಧರಿಸಿದ ಸೋನು ಗೌಡ ಆಕರ್ಷಕವಾದ ಕೆಂಪು ಬಣ್ಣದ ಬಿಂದಿ ಇಟ್ಟಿದ್ದಾರೆ. ಅದರ ಜೊತೆ ಹಣೆಗೆ ಕುಂಕುಮವನ್ನೂ ಇಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

27

ಕತ್ತಿನಲ್ಲಿ ಕಪ್ಪು ದಾರದ ಒಂದು ಸಣ್ಣ ಸರ ಜಾಗೂ ಗೋಲ್ಡ್ ಚೈನ್ ಧರಿಸಿ, ಹೆಚ್ಚು ಮೇಕಪ್ ಕೂಡಾ ಮಾಡಿಕೊಳ್ಳದೇ ತುಂಬಾ ಸರಳವಾಗಿ ರೆಡಿಯಾಗಿ ಅಪರೂಪಕ್ಕೆ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ.

37

ಹಳದಿ ಬಣ್ಣದ ಫ್ಲೋರಲ್ ಸೀರೆ, ಪಿಂಕ್ ಕಲರ್ ಫುಲ್ ಸ್ಲೀವ್ ಬ್ಲೌಸ್ ಧರಿಸಿ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಸೋನು. ಅವರ ಈ ಲುಕ್ ನೆಟ್ಟಿಗರಿಗೂ ಇಷ್ಟವಾಗಿದೆ. ಆದರೆ ಇದು ನಿಜಾನಾ ಅಂತ ಅಚ್ಚರಿಪಟ್ಟಿದ್ದಾರೆ ಜನ.

47

ವಿಶೇಷವಾಗಿ ಸೋನು ಗೌಡ ಧರಿಸಿದ್ದ ಪಿಂಕ್ ಬಣ್ಣದ ಬ್ಲೌಸ್​ನಲ್ಲಿ ಆಕರ್ಷಕವಾದ ಒಂದು ಗೊಂಬೆ ಡಿಸೈನ್ ಕೂಡಾ ಇತ್ತು. ಅವರ ಔಟ್​ಫಿಟ್​ನಲ್ಲಿ ಈ ಗೊಂಬೆ ಹೈಲೈಟ್ ಆಗಿದೆ. 

57

ಸೋನು ಗೌಡ ನೋಡಿದ ನೆಟ್ಟಿಗರು ಈ ತರ ಮೈ ತುಂಬಾ ಬಟ್ಟೆ ಹಾಕೊಂಡು ಹೂ ಮುಡ್ಕೊಂಡು ಫೋಟೋ ಹಾಕಿದ್ರೆ ನಿನ್ನ ಮುಂದೆ ಯಾರು ? ಸುಮ್ನೆ ಕಿತ್ತೊಗಿರೊ ಬಟ್ಟೆ ಹಾಕೊಂಡು ಲೈಕ್ ಗೋಸ್ಕರ ಹಾಕ್ತಿರಲ್ಲ ಅದಕ್ಕಿಂತ ಇದು ಸೂಪರ್ ಎಂದಿದ್ದಾರೆ.

67

ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದು, ಅವರು ಏನೇ ಮಾಡಿದರೂ ಸುದ್ದಿಯಾಗುತ್ತದೆ. 

77

ಬಿಗ್​ಬಾಸ್ ಖ್ಯಾತಿ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಅವರು ಫೋಟೋ, ವಿಡಿಯೋ, ರೀಲ್ಸ್ ಏನು ಕಂಡರೂ ಈಗ ನೆಟ್ಟಿಗರು ಟ್ರೋಲ್ ಮಾಡುತ್ತಾರೆ.

Read more Photos on
click me!

Recommended Stories