Bhagylakshmi ಕಂಡ್ರೆ ಕಿಡಿಕಾರೋ ಕನ್ನಿಕಾ ಇಲ್ಲಿ ನೋಡಿ ಭಾಗ್ಯ ಜೊತೆ ಸೊಂಟ ಬಳಕಿಸೋ ವಿಡಿಯೋ

Published : May 08, 2026, 07:55 PM IST

'ಭಾಗ್ಯಲಕ್ಷ್ಮಿ' ಸೀರಿಯಲ್‌ನ ಅತ್ತಿಗೆ-ನಾದಿನಿ ಭಾಗ್ಯ (ಸುಷ್ಮಾ) ಮತ್ತು ಕನ್ನಿಕಾ (ಸುಕೃತಾ) ತೆರೆಮೇಲೆ ವೈರಿಗಳಾಗಿದ್ದರೂ, ತೆರೆಹಿಂದೆ ವೈರಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಲೇಖನವು ಅವರ ವೃತ್ತಿಜೀವನದ ಆರಂಭ ಮತ್ತು ಸುಕೃತಾ ತಮ್ಮ ಜೀವನದ ಖಿನ್ನತೆಯ ಬಗ್ಗೆ ಮಾತನಾಡಿದ ಕ್ಷಣಗಳನ್ನು ವಿವರಿಸುತ್ತದೆ.

PREV
17
ಭಾಗ್ಯಳ ಗೋಳಾಟ

ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯಳ ಇನ್ನೊಂದು ಗೋಳಾಟ ಶುರುವಾಗಿದೆ. ಆದಿಯ ಮನೆಯಲ್ಲಿಯೂ ಆಕೆಗೆ ಹಿಂಸೆ ತಪ್ಪಿದ್ದಲ್ಲ. ಕನ್ನಿಕಾ ಮತ್ತು ಚಿಕ್ಕಮ್ಮ ಎಲ್ಲಾ ಸೇರಿ ಭಾಗ್ಯಳಿಗೆ ಕಿರಿಕ್ ಮಾಡುತ್ತಿದ್ದಾರೆ. ಅದರಲ್ಲಿಯೂ ಕನ್ನಿಕಾ ಅಂತೂ ಒಂದು ಕ್ಷಣವೂ ಬಿಡದೇ ಭಾಗ್ಯಳಿಗೆ ತೊಂದರೆ ಕೊಡೋದನ್ನೇ ಕಾಯಕ ಮಾಡಿಕೊಂಡಿದ್ದಾಳೆ.

27
ಅತ್ತಿಗೆ-ನಾದಿನಿ

ಇದು ಸೀರಿಯಲ್ ಸ್ಟೋರಿ ಆದ್ರೆ ಇತ್ತ ಶೂಟಿಂಗ್​ ನಡುವಿನ ಅವಧಿಯಲ್ಲಿ ಭಾಗ್ಯ ಉರ್ಫ್​ ಸುಷ್ಮಾ ಕೆ.ರಾವ್​ ಹಾಗೂ ಕನ್ನಿಕಾ ಉರ್ಫ್​ ಸುಕೃತಾ ನಾಗ್​ ಅವರು ಭಾರಿ ವೈರಲ್​ ಆಗ್ತಿರೋ ved lavla ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಅತ್ತಿಗೆ-ನಾದಿನಿ ಎಂದು ಇದಕ್ಕೆ ಸುಕೃತಾ ಅವರು ಕ್ಯಾಪ್ಷನ್​ ಕೊಟ್ಟಿದ್ದಾರೆ.

37
ಬಹುಮುಖ ಕಲಾವಿದೆ

ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

47
ತಂಗಿಯ ಪಾತ್ರದ ಮೂಲಕ ಎಂಟ್ರಿ

ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

57
ಬೆಂಗಳೂರು ಹುಡುಗಿ

ಸುಕೃತಾ ನಾಗ್​ ಕುರಿತು ಹೇಳುವುದಾದರೆ, ಇವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಅವರ ತಂದೆ ಮಂಡ್ಯದವರು. ಸುಕೃತಾ ಅವರಿಗೆ ಐದು ವರ್ಷ ಇರುವಾಗಲೇ ನ್ಯುಮೋನಿಯಾದಿಂದ ತಂದೆ ಮೃತಪಟ್ಟಿರುವ ಬಗ್ಗೆ ನಟಿ ಹೇಳಿದ್ದರು. ಅಪ್ಪನ ಜೊತೆ ಕಳೆದ ಅಷ್ಟು ಸುಂದರ ಕ್ಷಣಗಳು ನನಗೆ ನೆನಪಿದೆ. ಅಪ್ಪ ನನ್ನ ಜೀವನದ ಮೊದಲನೇ ಹೀರೋ ಮತ್ತು ಮೊದಲ ಲವ್‌ ಕೂಡ ಹೌದು ಎಂದಿದ್ದರು.

67
ಅಗ್ನಿಸಾಕ್ಷಿಯಲ್ಲಿ ಅಂಜಲಿ

ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್​ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್‌ ಅಂಜಲಿ ಪಾತ್ರದ ಮೂಲಕ ಸೀರಿಯಲ್​ ಪ್ರೇಕ್ಷಕರ ಮನಸ್ಸನ್ನು ಗೆದ್ದವರು. ಹಿಂದೊಮ್ಮೆ ನಟಿ, ಇನ್ನೊಂದು ಸಂದರ್ಶನದಲ್ಲಿ ತಮ್ಮ ಜೀವನದ ಲವ್​, ಬ್ರೇಕಪ್​, ಡಿಪ್ರೆಷನ್​ ಬಗ್ಗೆ ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್‌ ಮತ್ತು ಬ್ರೇಕಪ್‌ ತುಂಬಾ ಕಾಮನ್‌ ಸಂಗತಿ ಆಗಿದೆ. ನಾನು ಲವ್‌ ಮಾಡಿದ್ದೀನಿ.. ನನಗೂ ಬ್ರೇಕಪ್‌ ಆಗಿದೆ. ಹಾರ್ಟ್‌ ಬ್ರೇಕ್‌ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್​ ಆಗಿ ಹೇಳಿಕೊಂಡಿದ್ದರು.

77
ಲವ್- ಬ್ರೇಕಪ್​

ಲವ್​ ಬ್ರೇಕಪ್​ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್‌ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್‌ ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದರು ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories