ಭೂಮಿಕಾಗೆ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದನ್ನು ತಿಳಿದುಕೊಂಡ ಶಕುಂತಲಾ, ಆ ರಹಸ್ಯವನ್ನು ಎಲ್ಲರ ಮುಂದೆ ಬಯಲು ಮಾಡಿ ಸಂಭ್ರಮಿಸುತ್ತಾಳೆ. ಶಕುಂತಲಾಳ ಈ ಕ್ರೌರ್ಯಕ್ಕೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೌತಮ್ ಪ್ರೀತಿಯಿಂದ ಭೂಮಿಕಾ ಈ ಮಾರಣಾಂತಿಕ ಕಾಯಿಲೆಯನ್ನು ಗೆಲ್ಲುತ್ತಾಳಾ ಎಂಬ ಕುತೂಹಲ ಮೂಡಿದೆ.
ಭೂಮಿಕಾ ಮತ್ತು ಗೌತಮ್ ಇಷ್ಟು ದಿನ ಏನು ಆಗಬಾರದು ಅಂತ ಪ್ಲಾನ್ ಮಾಡಿಕೊಂಡಿದ್ರೂ ಇಂದು ಅದೇ ಅಗಿದೆ. ಆರಂಭದಲ್ಲಿ ತನ್ನ ಕ್ಯಾನ್ಸರ್ ಕಾಯಿಲೆ ವಿಷಯವನ್ನು ಗೌತಮ್ ಮುಂದೆಯೂ ಹೇಳಿಕೊಂಡಿರಲಿಲ್ಲ. ಇದೀಗ ಆ ರಹಸ್ಯವನ್ನು ಶಕುಂತಲಾ ಡಂಗುರ ಹೊಡೆಯುತ್ತಿದ್ದಾಳೆ. ಭೂಮಿಕಾಗೆ ಕ್ಯಾನ್ಸರ್ ನಾಲ್ಕನೇ ಸ್ಟೇಜ್‌ನಲ್ಲಿರುವ ವಿಷಯ ತಿಳಿದು ಶಕುಂತಲಾ ಖುಷಿಯಾಗಿದ್ದಾಳೆ.
25
ತಾಯಿಗೆ ವಿಷಯ ತಿಳಿಸಿದ ಗೌತಮ್
ಹೌದು, ಭೂಮಿಕಾ ಮತ್ತು ಮಲ್ಲಿಯ ಮಾತುಗಳನ್ನು ಶಕುಂತಲಾ ಕೇಳಿಸಿಕೊಂಡಿದ್ದಳು. ಕೂಡಲೇ ಈ ವಿಷಯವನ್ನು ಮಗ ಜೈದೇವ್ ಜೊತೆ ಹಂಚಿಕೊಂಡು ಸಿಹಿ ತಿಂದು ಶಕುಂತಲಾ ಸಂಭ್ರಮಿಸಿದ್ದಳು. ಇದೀಗ ನೇರವಾಗಿಯೇ ಗೌತಮ್ ಜೊತೆ ಭೂಮಿಕಾಳ ಆರೋಗ್ಯದ ಬಗ್ಗೆ ಶಕುಂತಲಾ ಮಾತನಾಡಿದ್ದಾಳೆ. ಭೂಮಿಕಾಗೆ ಚಿಕಿತ್ಸೆ ನಡೆಯುತ್ತಿರೋದನ್ನು ತಾಯಿಗೆ ಗೌತಮ್ ಹೇಳಿದ್ದಾನೆ.
35
ದುಷ್ಟೆ ಶಕುಂತಲಾ
ಇಷ್ಟಕ್ಕೆ ಸುಮ್ಮನಾಗದ ದುಷ್ಟೆ ಶಕುಂತಲಾ, ಕ್ಯಾನ್ಸರ್ ವಿಷಯವನ್ನು ಭೂಮಿಕಾ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾಳೆ. ಮಗಳಿಗೆ ಕ್ಯಾನ್ಸರ್ ಎಂದು ಗೊತ್ತಾಗುತ್ತಿದ್ದಂತೆ ತಾಯಿ ಕುಸಿದಿದ್ದಾಳೆ. ಗೌತಮ್ ಆಫಿಸ್‌ನ ಎಲ್ಲಾ ಕೆಲಸ ಬಿಟ್ಟು, ಭೂಮಿಕಾ ಜೊತೆಯಲ್ಲಿರೋದರ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿಸಿತ್ತು. ಗೌತಮ್ ಹೀಗೆ ಬದಲಾಗಿದ್ದೇಕೆ ಎಂಬುದರ ಸತ್ಯ ಬಯಲಾಗಿದೆ.
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಈ ಕ್ಯಾರೆಕ್ಟರ್ ಹಣೆಬರಹ ಮೊದಲೇ ಗೊತ್ತಿತ್ತು ಇದು ಗುಳ್ಳೆನರಿ. ಹುಳಿ ಹಿಂಡಿದ್ದು ಆಯಿತು ಶಕುಂತಲಾದು, ನೆಮ್ಮದಿಯಾಗಿ ಇರೋಕ್ಕೆ ಬಿಡೋಲ್ಲ ಇಂಥ ಜನ. ಭೂಮಿಕಾ ಗೆದ್ದು ಬಂದು ಶಕುಂತಲಾ ಜೈದೇವ್ ಗೆ ಬುದ್ಧಿ ಕಲಿಸಬೇಕು. ಬೀದಿಗೆ ಬಿದ್ದು ಭಿಕ್ಷೆ ಬೇಡಾತ ಇತ್ತು ಗೌತಮ್ ಯಾಕೆ ಕರುಕೊಂಡು ಬರಬೇಕಾಗಿತ್ತು ಇವಾಗ್ ಹೇಗಿದೆ ಹಾವಿಗೆ ಹಾಲ ಹಾಕಿದರೆ ವಿಷ ಕಕ್ಕೋದು ಬಿಡುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
55
ಅಮೃತಧಾರೆ ಸಿನಿಮಾ
ಇದೇ ವಿಷಯವನ್ನು ಶಕುಂತಲಾ ಮತ್ತು ಜೈದೇವ್ ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ತಾರಾ? ಗೌತಮ್ ಪ್ರೀತಿಯಿಂದ ಭೂಮಿಕಾ ತನಗಾದ ಮಾರಣಾಂತಿಕ ಕಾಯಿಲೆಯನ್ನು ಗೆಲ್ಲುತ್ತಾಳಾ ಅಥವಾ ಅಮೃತಧಾರೆ ಸಿನಿಮಾ ರೀತಿಯಲ್ಲಿ ಸೀರಿಯಲ್ ಕೊನೆಯಾಗುತ್ತಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.