ಎರಡು ವರ್ಷ ಪೂರೈಸಿರುವ ಜನಪ್ರಿಯ 'ಬ್ರಹ್ಮಗಂಟು' ಸೀರಿಯಲ್ ಅಂತ್ಯ ಕಾಣುತ್ತಿದೆ. ದೀಪಾಳ ಸತ್ಯ ಚಿರುಗೆ ತಿಳಿದಿದ್ದು, ಖಳನಾಯಕಿ ಸೌಂದರ್ಯಳ ಬಂಡವಾಳ ಬಯಲಾಗುವುದಷ್ಟೇ ಬಾಕಿ ಉಳಿದಿದ್ದು, ಕಥೆಯು ಸುಖಾಂತ್ಯದತ್ತ ಸಾಗುತ್ತಿದೆ.
ಜೂನ್ 17, 2024ರಲ್ಲಿ ಮೊದಲ ಕಂತು ಪ್ರಸಾರ ಮಾಡಿದ್ದ ಬ್ರಹ್ಮಗಂಟು ಸೀರಿಯಲ್ (Brahmagantu Serial) ಇದಾಗಲೇ ಎರಡು ವರ್ಷ ಪೂರೈಸಿದೆ. ಟಾಪ್ ಸೀರಿಯಲ್‌ಗಳಲ್ಲಿ ಒಂದೆನಿಸಿದ್ದ ಬ್ರಹ್ಮಗಂಟು ಮುಗಿಯಲು ಇನ್ನೇನು ಕೆಲವೇ ಎಪಿಸೋಡ್‌ಗಳಿವೆ. ಈಚೆಗಷ್ಟೇ ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ಮಾಣದಲ್ಲಿ ಈ ಸೀರಿಯಲ್ ಮೂಡಿಬಂದಿದ್ದರಿಂದ, ಈ ಸೀರಿಯಲ್ ಶೂಟಿಂಗ್ ಅಂತ್ಯಗೊಂಡಿರುವ ಬಗ್ಗೆ ಅವರ ಪತ್ನಿ ಶ್ರೀವಿದ್ಯಾ ಪೋಸ್ಟ್ ಹಾಕುವ ಮೂಲಕ ಸೀರಿಯಲ್ ಮುಗಿಯಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ.
26
ಇದಾಗಲೇ ಅಂದಾಜು
ಇನ್ನು ಸೀರಿಯಲ್ ಹೇಗೆ ಮುಗಿಯತ್ತೆ ಎನ್ನುವ ಬಗ್ಗೆ ಸೀರಿಯಲ್ ವೀಕ್ಷಕರಿಗೆ ಇದಾಗಲೇ ಒಂದು ಅಂದಾಜು ಸಿಕ್ಕಿದೆ. ದೀಪಾನೇ ದಿಶಾ ಎನ್ನುವ ಸತ್ಯ ಚಿರುಗೆ ಗೊತ್ತಾಗಿ, ಆ ಸತ್ಯವನ್ನು ಅವಳ ಬಾಯಿಯಿಂದಲೇ ಹೇಳಿಸುವ ಪಣ ತೊಟ್ಟಿದ್ದಾನೆ.
36
ನರಸಿಂಹಂಗೆ ಗೊತ್ತಾಯ್ತು ಸತ್ಯ
ದಿಶಾ ಜೊತೆ ಚಿರು ಕ್ಲೋಸ್ ಆಗಿರೋದನ್ನು ನೋಡಿ ದೀಪಾ ಅಣ್ಣ ನರಸಿಂಹ ಚಿರು ವಿರುದ್ಧ ಗರಂ ಆಗಿದ್ದಾನೆ. ಆಗ ಚಿರು, ಇರುವ ಸತ್ಯವನ್ನೆಲ್ಲಾ ನರಸಿಂಹನಿಂದ ಹೇಳಿದ್ದು, ಇಬ್ಬರೂ ಒಬ್ಬರೇ ಎಂದಾಗ ನರಸಿಂಹ ಭಾವುಕ ಆಗಿದ್ದಾನೆ.
ಅತ್ತ ಅರ್ಚನಾಗೂ ಹೊಸ ಜೀವನ ಸಿಕ್ಕಿದೆ. ಮಗುವಿನ ಅಮ್ಮನಾಗುವ ಕೆಲಸಕ್ಕೆ ಹೋಗಿರುವ ಅರ್ಚನಾ ನಿಜವಾಗಿಯೂ ಆ ಮಗುವಿಗೆ ಅಮ್ಮ ಆಗಿದ್ದಾಳೆ. ಈ ಮೂಲಕ ಅವಳ ಲೈಫ್ ಸೆಟ್ಲ್ ಆಗಿದೆ.
56
ನರಸಿಂಹ-ಸಂಜನಾ ಲವ್‌ಸ್ಟೋರಿ
ನರಸಿಂಹನಿಗೂ ಪತ್ನಿ ಸಂಜನಾ ಮೇಲೆ ಪ್ರೀತಿ ಉಕ್ಕಿ ಅವರ ಲೈಫ್ ಸೆಟಲ್ ಆಗಲೂ ಹೆಚ್ಚು ಹೊತ್ತು ಬೇಕಿಲ್ಲ. ಇನ್ನೇನಿದ್ದರೂ ಸೌಂದರ್ಯ ಬಂಡವಾಳ ಬಯಲು ಆಗುವುದಷ್ಟೇ ಬಾಕಿ ಇರುವುದು. ದೀಪಾಗೆ ಸಂಪೂರ್ಣ ಸತ್ಯ ಗೊತ್ತಿದೆ. ಚಿರು ಅಪ್ಪನಿಗೂ ಸೌಂದರ್ಯಳ ಬಂಡವಾಳ ಗೊತ್ತಿದೆ. ಅತ್ತಿಗೆಯನ್ನೇ ದೇವರು ಎಂದು ನಂಬಿರೋ ಚಿರು, ಆಕೆಗೆ ತಾಯಿಯ ಸ್ಥಾನ ಕೊಟ್ಟು ಪೂಜಿಸುತ್ತಿದ್ದಾನೆ.
66
ಸೌಂದರ್ಯ ಬಂಡವಾಳ ಬಯಲು
ಆದರೆ ಆತನ ಪ್ರೈವೇಟ್ ಡಿಟೆಕ್ಟರ್ ಕೂಡ ಸೌಂದರ್ಯಳ ಬಂಡವಾಳ ಒಂದೊಂದಾಗಿ ಬಯಲು ಮಾಡಿದ್ದಾನೆ. ದೀಪಾ ಎಲ್ಲಾ ದಾಖಲೆ ಕಲೆ ಹಾಕಲು ಹೊರಟಿದ್ದು, ಅದನ್ನು ಚಿರುಗೆ ತೋರಿಸಿದರೆ ಅಲ್ಲಿ ಅವಳ ಸ್ಟೋರಿನೂ ಕಥಮ್. ಅವಳನ್ನು ಜೈಲಿಗೆ ಅಟ್ಟುತ್ತಾನಾ, ಕ್ಷಮಿಸುತ್ತಾನಾ ನೋಡೋದೊಂದೇ ಬಾಕಿ. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.