Amruthadhaare: ಜೈದೇವ್ ಮುಂದೆ ಟುಸ್ ಪಟಾಕಿ ಆಯ್ತು ಭೂಮಿಕಾ ಪ್ಲಾನ್; ಮಲ್ಲಿ ಕನ್ಫ್ಯೂಸ್!

Published : Aug 19, 2026, 08:26 AM IST

ದಿಯಾಳ ರಹಸ್ಯವನ್ನು ತಿಳಿಯಲು ಭೂಮಿಕಾ ಕಳುಹಿಸಿದ ಲಕ್ಷ್ಮೀಕಾಂತ್, ಯಾವುದೇ ಮಾಹಿತಿ ಇಲ್ಲದೆ ಬರಿಗೈಯಲ್ಲಿ ಹಿಂತಿರುಗುತ್ತಾನೆ. ಈ ನಡುವೆ, ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ.

PREV
15
ಭುಮಿಕಾ ಪ್ಲಾನ್ ಟುಸ್ ಪಟಾಕಿ

ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಟುಸ್ ಪಟಾಕಿಯಾಗಿದೆ. ಯಾವುದೇ ಮಾಹಿತಿ ತಿಳಿದುಕೊಳ್ಳಲಾಗದೇ ಜೈದೇವ್ ಮನೆಯಿಂದ ಲಕ್ಷ್ಮೀಕಾಂತ್ ಹೊರಗೆ ಬಂದಿದ್ದಾನೆ. ಮೊದಲ ಹಂತದಲ್ಲಿಯೇ ಭೂಮಿಕಾ ಮಾಡಿದ ಪ್ಲಾನ್ ಫೇಲ್ ಆಗಿದೆ.

25
ದಿಯಾ ರಹಸ್ಯ

ದಿಯಾಳ ಗೆಳೆಯ ಗೋಕುಲ್ ಜೈಲುಪಾಲಾಗಿದ್ದು, ಈತ ಭೂಮಿಕಾಳ ಸೋದರನ ಸ್ನೇಹಿತನಾಗಿದ್ದ. ಹಾಗಾಗಿ ಗೆಳೆಯನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಜೀವಾ, ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದನು. ಇದಕ್ಕೆ ಐಪಿಎಸ್ ಆಗಿರೋ ಮಲ್ಲಿ ಸಹಾಯ ಸಹ ಕೇಳಿದ್ದನು. ಆದ್ರೆ ಭೂಮಿಕಾ ಬಳಿ ಬಂದ ಮಲ್ಲಿ ಮುಂದೇನು ಮಾಡಬೇಕು ಅಂತ ಭೂಮಿಕಾಳನ್ನು ಕೇಳಿದ್ದಳು.

35
ಬರೀಗೈಯಲ್ಲಿ ಬಂದ ಶಕುನಿ ಮಾಮಾ

ಈ ವಿಷಯ ತಿಳಿಯುತ್ತಿದ್ದಂತೆ ಲಕ್ಷ್ಮೀಕಾಂತ್ ಮೂಲಕ ಭೂಮಿಕಾ ಗೂಢಚಾರಿಕೆ ಅರಂಭಿಸಿದ್ದಳು. ಭೂಮಿಕಾ ಮಾತಿನಂತೆ ಜೈದೇವ್ ಮನೆಗೆ ಹೋಗಿದ್ದ ಲಕ್ಷ್ಮೀಕಾಂತ್‌ಗೆ ಯಾವ ವಿಷಯ ಗೊತ್ತಾಗಲಿಲ್ಲ. ಆದ್ರೆ ದಿಯಾ ಹೆಸರು ಹೇಳುತ್ತಿದ್ದಂತೆ ಜೈದೇವ್ ಮುಖದಲ್ಲಾದ ಬದಲಾವಣೆಯ ಮಾಹಿತಿಯನ್ನು ಭೂಮಿಕಾ ಮುಂದೆ ಲಕ್ಷ್ಮೀಕಾಂತ್ ಹೇಳಿದ್ದನು.

45
ಜೈದೇವ್ ಅಲರ್ಟ್

ಗೂಢಚಾರಿಕೆ ಪ್ಲಾನ್ ಫೇಲ್ ಆಗಿದ್ದರಿಂದ ಮುಂದೇನು ಮಾಡೋದು ಅಂತ ಮಲ್ಲಿ ಸಹ ಕನ್ಫ್ಯೂಸ್ ಆಗಿದ್ದಾಳೆ. ಲಕ್ಷ್ಮೀಕಾಂತ್ ಜೊತೆ ಮಲ್ಲಿ ಮತ್ತು ಭೂಮಿಕಾ ಮಾತನಾಡಿದೆಲ್ಲವನ್ನು ಶಕುಂತಲಾ ಕೇಳಿಸಿಕೊಂಡಿದ್ದಾಳೆ. ಇದರಿಂದ ಮುಂದೆ ಜೈದೇವ್ ಮತ್ತೆ ಬಚಾಚ್ ಆಗೋದು ಪಕ್ಕಾ ಆಗಿದೆ. ಭೂಮಿಕಾ-ಮಲ್ಲಿ ಮಾಡುತ್ತಿರುವ ಪ್ಲಾನ್ ಮಗನಿಗೆ ಶಕುಂತಲಾ ತಿಳಿಸಲಿದ್ದಾಳೆ. ಇದರಿಂದ ಜೈದೇವ್ ಅಲರ್ಟ್ ಆಗೋದು ಸಹ ನಿಶ್ಚಿತವಾಗಿದೆ.

55
ಶಕುಂತಲಾಗೆ ಗೊತ್ತಾಯ್ತು ಭೂಮಿಕಾ-ಮಲ್ಲಿ ಪ್ಲಾನ್

ಇತ್ತ ಮನೆಗೆ ಬಂದ ಮಾವ ಲಕ್ಷ್ಮೀಕಾಂತ್ ಮೇಲೆ ಜೈದೇವ್‌ಗೆ ಸಣ್ಣದಾದ ಅನುಮಾನ ಮೂಡಿತ್ತು. ಇದೀಗ ಈ ವಿಷಯ ತಾಯಿಯಿಂದ ಗೊತ್ತಾದ್ರೆ ಲಕ್ಷ್ಮೀಕಾಂತ್ ಜೀವಕ್ಕೆ ಜೈದೇವ್ ಅಪಾಯವನ್ನುಂಟು ಮಾಡ್ತಾನಾ ಅಥವಾ ಮಲ್ಲಿ-ಭೂಮಿಕಾ ತಂತ್ರಕ್ಕೆ ಶಕುಂತಲಾ-ಜೈದೇವ್ ಪ್ರತಿತಂತ್ರ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories