ಭೂಮಿಕಾ-ದೀಪಿಕಾ ಮುಂದೆ ಮಹಾಸತ್ಯದ ಅನಾವರಣ; ಜೈದೇವ್, ಶಕುಂತಲಾ ನಾಟಕ್ ಬಂದ್, ಖೇಲ್ ಖತಂ

Published : Oct 07, 2026, 02:25 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೀಪಿಕಾ ಅವಳಿ ಸಹೋದರಿಯರು ಎಂಬ ಮಹಾಸತ್ಯ ಬಯಲಾಗಿದೆ. ಅಪಘಾತಕ್ಕೀಡಾಗಿದ್ದ ಭೂಮಿಕಾಳನ್ನು ಮಲ್ಲಿ ರಕ್ಷಿಸಿದ್ದು, ಜೈದೇವ್ ಮತ್ತು ಶಕುಂತಲಾ ಅವರ ಸಂಚು ಅಂತ್ಯಗೊಳ್ಳುವ ಹಂತ ತಲುಪಿದೆ. ಸತ್ಯ ತಿಳಿದ ಈ ಸಹೋದರಿಯರು ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

PREV
15
ಡಬಲ್ ರೋಲ್ ಕಥೆಯ ಅಸಲಿ ಸತ್ಯ

ಅಮೃತಧಾರೆ ಸೀರಿಯಲ್‌ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುವ ಮೂಲಕ ಪ್ರಸಾರವಾಗುತ್ತಿದೆ. ಇನ್ನೇನು ಸೀರಿಯಲ್ ಕಥೆ ಮುಗೀತು ಅನ್ನೋವಷ್ಟರಲ್ಲಿ ನಿರ್ದೇಶಕರು ಹೊಸ ಪಾತ್ರ ಅಥವಾ ಸ್ಟೋರಿಯೊಂದಿಗೆ ಧಾರಾವಾಹಿಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದೀಗ ಡಬಲ್‌ ರೋಲ್‌ ಕತೆಯೂ ಅಂತ್ಯಕ್ಕೆ ಬಂದು ತಲುಪಿದೆ.

25
ಅಪಘಾತದ ಮಾಹಿತಿ ಸಂಗ್ರಹಿಸಿದ ಮಲ್ಲಿ

ಭೂಮಿಕಾಳನ್ನು ಕಾರ್ ಅಪಘಾತಗೊಳಿಸಿ, ಅವಳಂತಿರೋ ದೀಪಿಕಾಳನ್ನು ಜೈದೇವ್ ಮತ್ತು ಶಕುಂತಲಾ ಕರೆದುಕೊಂಡು ಬಂದಿದ್ದರು. ಇದೀಗ ಭೂಮಿಕಾಳನ್ನು ಮಲ್ಲಿ ಪತ್ತೆ ಮಾಡಿದ್ದಾಳೆ. ರಸ್ತೆಯಲ್ಲಿ ಬಿದ್ದಿದ್ದ ಭೂಮಿಕಾಳನ್ನು ಆಸ್ಪತ್ರೆಗೆ ದಾಖಲಿಸಿ, ಕಾರ್ ಅಪಘಾತದ ಸಂಪೂರ್ಣ ಮಾಹಿತಿಯನ್ನು ಮಲ್ಲಿ ಪಡೆದುಕೊಂಡಿದ್ದಾಳೆ.

35
ಸತ್ಯದ ಅನಾವರಣ

ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಭೂಮಿಕಾಳ ಮುಂದೆ ಮನೆಯಲ್ಲಿ ನಿಮ್ಮಂತೆಯೇ ಕಾಣುವ ತದ್ರೂಪಿ ಇರೋ ವಿಷಯವನ್ನು ಹೇಳಿದ್ದಾಳೆ. ಹಾಗೆಯೇ ದಿವಾನ್ ಮನೆಗೆ ಜೈದೇವ್ ಬಂದಿರೋ ವಿಷಯವನ್ನು ಭೂಮಿಕಾಗೆ ಮಲ್ಲಿ ತಿಳಿಸಿದ್ದಾಳೆ. ಮತ್ತೊಂದೆಡೆ ಮಂದಾಕಿನಿಯೂ, ಮನೆಗೆ ಬಂದಿರೋ ದೀಪಿಕಾ ಮುಂದೆ ಅವಳಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

45
ವೀಕ್ಷಕರಲ್ಲಿ ಹೆಚ್ಚಾದ ಕುತೂಹಲ

ತನಗೆ ಹುಟ್ಟಿದ್ದು ಅವಳಿ-ಜವಳಿ ಮಕ್ಕಳು. ನಿನಗೆ ಅಕ್ಕಳಿದ್ದಾಳೆ ಎಂದು ಸತ್ಯವನ್ನು ದೀಪಿಕಾ ಮಂದಾಕಿನಿ ಹೇಳಿದ್ದಾಳೆ. ಏಕಕಾಲದಲ್ಲಿ ಎರಡು ಮಹಾಸತ್ಯದ ಅನಾವರಣಗೊಂಡಿದೆ. ಸತ್ಯ ತಿಳಿದಿರುವ ದೀಪಿಕಾ ಮತ್ತು ಭೂಮಿಕಾ ಮುಂದೇನು ಮಾಡ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

55
ಜೈದೇವ್ ನಾಟಕ್ ಬಂದ್

ಇನ್ನು ಭೂಮಿಕಾ ಬಂದಿರೋದರಿಂದ ಜೈದೇವ್ ನಾಟಕವೆಲ್ಲಾ ಕೊನೆಯಾಗಲಿದೆ. ಈಗಾಗಲೇ ತನ್ನನ್ನು ಕೊ*ಲ್ಲಲು ಜೈದೇವ್ ಮುಂದಾಗಿರೋದು ಭೂಮಿಕಾಗೆ ಗೊತ್ತಾಗಿದೆ. ಮತ್ತೊಂದೆಡೆ ದೀಪಿಕಾಗೆ, ಭೂಮಿಕಾ ತನ್ನ ಸೋದರಿ ಹಾಗೂ ಸದಾಶಿವ-ಮಂದಾಕಿನಿ ತನ್ನ ಪೋಷಕರು ಎಂಬ ಸತ್ಯ ತಿಳಿಯಲಿದೆ. ತನ್ನನ್ನು ಇಲ್ಲಿಗೆ ಜೈದೇವ್ ಮತ್ತು ಶಕುಂತಲಾ ಕರೆದುಕೊಂಡು ಬಂದಿರೋ ಸತ್ಯವನ್ನು ಎಲ್ಲರ ಮುಂದೆ ಹೇಳ್ತಾನಾ ಅಂತ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories