ನೀಚರಿಗಿಲ್ಲ ಉಳಿಗಾಲ; ಲಕ್ಷ್ಮೀಕಾಂತ್‌ಗೆ ಸಿಕ್ತು ಮಹಾಬಲ; ಮಲ್ಲಿ ಮೇಲೆ ಕೆಡಿ ಕಣ್ಣು

Published : Jul 18, 2026, 07:49 PM IST

ಜೈದೇವ್‌ನ ಯಾವುದೇ ಹೆಜ್ಜೆಯನ್ನು ನಿರ್ಲಕ್ಷಿಸದಂತೆ ಆನಂದ್‌ಗೆ ಲಕ್ಷ್ಮೀಕಾಂತ್ ಎಚ್ಚರಿಸಿದರೆ, ಇತ್ತ ಶಕುಂತಲಾ ಮಲ್ಲಿ ವಿಚಾರದಲ್ಲಿ ಜಾಗರೂಕರಾಗಿರಲು ಮಗನಿಗೆ ಸಲಹೆ ನೀಡಿದ್ದಾಳೆ. ಪತ್ನಿ ಭೂಮಿಕಾಳ ಆರೋಗ್ಯದಲ್ಲಿನ ಬದಲಾವಣೆ ಗಮನಿಸಿದ ಗೌತಮ್‌ಗೆ ಆಕೆಗೆ ಕ್ಯಾನ್ಸರ್ ಇರುವ ಆಘಾತಕಾರಿ ಸತ್ಯ ತಿಳಿದಿದೆ.

PREV
15
ಆನಂದ್‌ಗೆ ಲಕ್ಷ್ಮೀಕಾಂತ್‌ ಸಲಹೆ

ನಮ್ಮ ಕಣ್ಣಿಗೆ ಕಾಣೋದು ಏನೋ ನಡೆಯುತ್ತಿದೆ ಎಂಬ ಅನುಮಾನವಿದೆ. ಶಕುಂತಲಾ ಹೇಳಿದ ಒಂದೇ ಮಾತಿಗೆ ಸಹಿ ಹಾಕಿದ್ದಾನೆ ಎಂಬ ವಿಷಯ ಕೇಳಿ ನನಗೆ ಅನುಮಾನವಿದೆ. ಜೈದೇವ್ ಯಾವುದೇ ಲಾಭವಿಲ್ಲದೇ ಕೆಲಸ ಮಾಡಲ್ಲ. ಜೈದೇವ್ ಬದಲಾಗೋಕೆ ಸಾಧ್ಯವೇ ಇಲ್ಲ. ಬದಲಾಗುವ ಸನ್ನಿವೇಶವನ್ನು ಮೀರಿಯೇ ಹೋಗಿದ್ದಾನೆ. ಯಾವುದೇ ಕ್ಷಣಕ್ಕೂ ನಾವು ಎಚ್ಚರ ತಪ್ಪಬಾರದು ಎಂದು ಆನಂದ್‌ಗೆ ಲಕ್ಷ್ಮೀಕಾಂತ್‌ ಸಲಹೆ ನೀಡಿದ್ದಾನೆ.

25
ಜೈದೇವ್ ಮೇಲೆ ಆನಂದ್ ಕಣ್ಣು

ಜೈದೇವ್ ಮೇಲೆ ದ್ವೇಷ ಸಾಧಿಸಬೇಕು ಅನ್ನೋ ಉದ್ದೇಶ ನನಗಿಲ್ಲ. ಆದರೆ ಆತನ ಪ್ರತಿ ಹೆಜ್ಜೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಆನಂದ್‌ಗೆ ಲಕ್ಷ್ಮೀಕಾಂತ್ ಹೇಳಿ ಎಚ್ಚರಿಸಿದ್ದಾನೆ. ಲಕ್ಷ್ಮೀಕಾಂತ್‌ ಮಾತು ಕೇಳಿ ತಲೆಯಾಡಿಸಿದ ಆನಂದ್, ನಾವೆಲ್ಲರೂ ಚೆನ್ನಾಗಿದ್ದೇವೆ ಎಂದ ಕ್ಷಣವೇ ನಾವು ಯಾವ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಆನಂದ್ ಸಹ ಹೇಳಿದ್ದಾನೆ.

35
ಮಲ್ಲಿ ವಿಷಯದಲ್ಲಿ ಎಚ್ಚರವಾಗಿರುವಂತೆ ಶಕುಂತಲಾ ಸಲಹೆ

ಇನ್ಮುಂದೆ ಮಲ್ಲಿ ವಿಚಾರದಲ್ಲಿ ಒಂದು ಹೆಜ್ಜೆ ಇಡಬೇಕಾದ್ರೆ ಸಾವಿರ ಸಲ ಯೋಚನೆ ಮಾಡಬೇಕು. ಒಂದು ತಪ್ಪು ಹೆಜ್ಜೆ ಹಲವು ಕಷ್ಟಗಳನ್ನು ಎದುರಿಸಬೇಕು. ನೀನು ಮಾಡುವ ಒಂದು ತಪ್ಪಿಗಾಗಿ ಮಲ್ಲಿ ಕಾಯ್ತಿದ್ದಾಳೆ. ಇಷ್ಟು ವರ್ಷ ನಾನು ಕೋಪದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಈಗ ಪಶ್ಚತ್ತಾಪ ಅನುಭವಿಸುತ್ತಿದ್ದೇನೆ. ಮಲ್ಲಿ ಆರ್ಡಿನರಿ ಹೆಣ್ಣು ಅಲ್ಲ, ಆಕೆ ಈಗ ಪೊಲೀಸ್ ಆಫಿಸರ್ ಎಂದು ಕೆಡಿ ಮಗನಿಗೆ ಶಕುಂತಲಾ ಎಚ್ಚರಿಸಿದ್ದಾಳೆ. ಮಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಜೈದೇವ್‌ನನ್ನು ಶಕುಂತಲಾ ತಡೆದಿದ್ದಾಳೆ.

45
ನಿರ್ದೇಶಕರ ಎಡವಟ್ಟು

ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಜೊತೆಯಾಗಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಆವರಣದಲ್ಲಿದ್ದ ಕೊರವಂಜಿ ಇಬ್ಬರ ಕೈಗಳನ್ನು ನೋಡಿ ಭವಿಷ್ಯ ನುಡಿದಿದ್ದಾಳೆ. ಕೊರವಂಜಿ ಭೂಮಿಕಾಳ ಬಲಗೈ ನೋಡಿ ಭವಿಷ್ಯ ಹೇಳಿದ್ದಾಳೆ. ಆದ್ರೆ ಮಹಿಳೆಯರ ಭವಿಷ್ಯ ನೋಡಲು ಎಡಗೈ ನೋಡುತ್ತಾರೆ. ನಿರ್ದೇಶಕರು ಇಲ್ಲಿ ಎಡವಿದ್ದಾರೆ ಎಂದು ಸೀರಿಯಲ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

55
ಭೂಮಿಕಾಗೆ ರಕ್ತದ ವಾಂತಿ

ಇತ್ತ ಗೌತಮ್ ಜೊತೆ ಊಟಕ್ಕೆ ಕುಳಿತಾಗಲೇ ಭೂಮಿಕಾಗೆ ರಕ್ತದ ವಾಂತಿಯಾಗಿದೆ. ತನಗೆ ಬ್ಲಡ್ ವಾಮಿಟ್ ಆಗಿರೋದು ಗಂಡನಿಗೆ ಗೌತಮ್‌ಗೆ ಗೊತ್ತಾಗದಂತೆ ಭೂಮಿಕಾ ನಟಿಸಿದ್ದಾಳೆ. ಆದ್ರೆ ನೆಚ್ಚಿನ ಮಡದಿ ಭೂಮಿಕಾ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿರೋದು ಗೌತಮ್ ಗಮನಕ್ಕೆ ಬಂದಿದೆ. ಮನೆಯಲ್ಲಿ ಸಿಕ್ಕ ಮೆಡಿಕಲ್ ರಿಪೋರ್ಟ್ ಹಿಡಿದು ಆಸ್ಪತ್ರೆಗೆ ಹೋದ ಗೌತಮ್‌ಗೆ, ಪತ್ನಿಗೆ ಕ್ಯಾನ್ಸರ್ ಇರೋ ಶಾಕಿಂಗ್ ವಿಷಯ ಗೊತ್ತಾಗಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories