ಅಮೃತಧಾರೆ ಧಾರಾವಾಹಿಯಲ್ಲಿ ಕಥೆ ಮಹತ್ವದ ತಿರುವು ಪಡೆದಿದೆ. ಮಧುರಾಳನ್ನು ರಕ್ಷಿಸಲು ಹೋದ ಭೂಮಿಕಾ ಮತ್ತು ಜೀವಾ, ಜೈದೇವ್‌ನ ಕುತಂತ್ರಕ್ಕೆ ಸಿಲುಕುತ್ತಾರೆ. ಅಂತಿಮವಾಗಿ, ತನ್ನ ಮಗಳನ್ನು ಕಾಪಾಡುವ ಭರದಲ್ಲಿ ಭೂಮಿಕಾಳ ಕೈಯಿಂದಲೇ ಜೈದೇವ್‌ನ ಹ*ತ್ಯೆಯಾಗುತ್ತದೆ.
ಅಮೃತಧಾರೆಯ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದ್ದು, ವಿಲನ್ ಕೆಡಿ ಜೈದೇವ್ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಹೌದು, ಮಧುರಾಳ ರಕ್ಷಣೆಗೆ ಹೋಗಿದ್ದ ಸಂದರ್ಭದಲ್ಲಿ ಭೂಮಿಕಾಳಿಂದ ಜೈದೇವ್ ಕೊ*ಲೆಯಾಗಿದೆ. ಯಾವಾಗ್ಲೂ ಭೂಮಿಕಾ ಸೀರೆಯ ಸೆರಗು ಹಿಡಿದುಕೊಂಡು ಓಡಾಡುತ್ತಿದ್ದ ಐಪಿಎಸ್ ಮಲ್ಲಿಯೇ ಮಿಸ್ ಆಗಿದ್ದಾಳೆ.
25
ಜೈದೇವ್ ಹೆಣೆದ ಚಕ್ರವ್ಯೂಹ
ಮಧುರಾ ಎಂಬ ಪೊಲೀಸ್ ಮೂಲಕ ಜೈದೇವ್ ರಹಸ್ಯಗಳನ್ನು ತನಿಖೆ ನಡೆಸಲು ಭೂಮಿಕಾ, ಜೀವಾ ಮತ್ತು ಮಲ್ಲಿ ಪ್ಲಾನ್ ಮಾಡಿದ್ದರು. ಪೊಲೀಸ್ ಅಧಿಕಾರಿಯಾಗಿದ್ದರೂ ಪೆದ್ದಿಯಂತಿದ್ದ ಮಧುರಾಳೇ ಜೈದೇವ್ ಹೆಣೆದ ಚಕ್ರವ್ಯೂಹದಲ್ಲಿ ಸಿಲುಕಿದ್ದಳು. ಎಲ್ಲಾ ಸಿನಿಮಾ/ಸೀರಿಯಲ್‌ಗಳಂತೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮಧುರಾಳನ್ನು ಜೈದೇವ್ ಕಟ್ಟಿ ಹಾಕಿದ್ದನು.
35
ಮಧುರಾ ಸೇಫ್
ನಂತರ ಜೀವಾ ಮತ್ತು ಭೂಮಿಕಾಗೆ ಕಾಲ್ ಮಾಡಿ, ತನ್ನನ್ನು ಹಿಡಿಯಲು ಬಂದಿರೋ ಮಧುರಾಳನ್ನು ಕಟ್ಟಿ ಹಾಕಿದ್ದೇನೆ. ಆಕೆ ಸಂಗ್ರಹಿಸಿದ್ದ ಎಲ್ಲಾ ಆಡಿಯೋ ರೆಕಾರ್ಡ್ ತನಗೆ ನೀಡುವಂತೆ ವಾರ್ನ್ ಮಾಡಿದ್ದನು. ಜೈದೇವ್ ಮಾತು ಕೇಳುತ್ತಿದ್ದಂತೆ ಆತಂಕಕ್ಕೊಳಗಾದ ಭೂಮಿಕಾ & ಜೈದೇವ್ ಬಳಿಗೆ ಓಡಿ ಬಂದು ದಾಖಲೆಗಳನ್ನು ನೀಡಿ ಮಧುರಾಳನ್ನು ಕಾಪಾಡಿದ್ದರು.
ಇಷ್ಟಕ್ಕೆ ಜೈದೇವ್ ತಮ್ಮನ್ನು ಹೋಗಲು ಬಿಟ್ಟಿದ್ದು ಹೇಗೆ ಎಂಬ ಅನುಮಾನ ಭೂಮಿಕಾಗೆ ಬಂದಿತ್ತು. ಕೂಡಲೇ ಹಿಂದೆಯಿಂದ ಬಂದ ಜೈದೇವ್, ಹೌದು ಟೀಚರ್‌ಮ್ಮಾ ಅಂತೇಳಿ ಕಾರ್ ಡಿಕ್ಕಿ ಓಪನ್ ಮಾಡುತ್ತಾನೆ. ಕಾರ್ ಡಿಕ್ಕಿಯಲ್ಲಿ ಭೂಮಿಕಾಳ ಮಗಳನ್ನ ಕಟ್ಟಿ ಹಾಕಿರುತ್ತಾನೆ. ಮಿಂಚುಳನ್ನು ತೋರಿಸಿ, ನಿಮ್ಮ ಬಳಿಯಲ್ಲಿರೋ ಒರಿಜಿನಲ್ ರೆಕಾರ್ಡ್ ಕಾಪಿ ತಂದುಕೊಡುವಂತೆ ಎಚ್ಚರಿಸುತ್ತಾನೆ.
55
ಜೈದೇವ್ ಕಥೆಯೇ ಫಿನಿಶ್
ಅಷ್ಟರಲ್ಲಿ ಭೂಮಿಕಾ ಮಗಳಿಗೆ ಜೈದೇವ್‌ನ ಕೈಗೆ ಕಚ್ಚುವಂತೆ ಸಲಹೆ ನೀಡುತ್ತಾಳೆ. ಮಿಂಚು ಕೈ ಕಚ್ಚುತ್ತಿದ್ದಂತೆ ಜೀವ ಮತ್ತು ಜೈದೇವ್ ನಡುವೆ ಡಿಶುಂ ಡಿಶುಂ ನಡೆಯುತ್ತದೆ. ಈ ವೇಳೆ ಜೈದೇವ್ ಗನ್ ಹಿಡಿದು ಶೂಟ್ ಮಾಡುವಾಗ ಹಿಂದಿನಿಂದ ಬಂದು ಭೂಮಿಕಾ ಕಟ್ಟಿಗೆಯಿಂದ ಹಲ್ಲೆ ನಡೆಸುತ್ತಾಳೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಜೈದೇವ್ ಸಾಯುತ್ತಾನೆ ಎಂಬುದನ್ನು ಇಲ್ಲಿಯವರೆಗೆ ತೋರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.