ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ತನ್ನ ಮಕ್ಕಳ ಭವಿಷ್ಯದ ಚಿಂತೆಯಲ್ಲಿದ್ದಾಳೆ. ಈ ವಿಷಯ ತಿಳಿದ ಖಳನಾಯಕಿ ಶಕುಂತಲಾ ಮತ್ತು ಜೈದೇವ್ ಸಂಭ್ರಮಿಸುತ್ತಿದ್ದರೆ, ಇತ್ತ ಪತಿ ಗೌತಮ್ ಪತ್ನಿಯ ಆರೈಕೆಯಲ್ಲಿಯೇ ಸಮಯ ಕಳೆಯುತ್ತಿದ್ದಾನೆ.
ಅಮೃತಧಾರೆ ಸೀರಿಯಲ್ ಕಥಾ ನಾಯಕಿ ಭೂಮಿಕಾ ಕ್ಯಾನ್ಸರ್‌ಗೆ ತುತ್ತಾಗಿದ್ದು, ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.
25
ಬಚ್ಚಿಟ್ಟ ರಹಸ್ಯ ಬಯಲು
ಒಂದು ವೇಳೆ ನಾನು ಸತ್ತರೆ ನನ್ನ ಮಕ್ಕಳಿಗೆ ನೀನು ತಾಯಿಯಾಗಬೇಕೆಂದು ಮಲ್ಲಿ ಬಳಿ ಭೂಮಿಕಾ ಮನವಿ ಮಾಡಿಕೊಂಡಿದ್ದಾಳೆ. ಮಲ್ಲಿ ಮತ್ತು ಭೂಮಿಕಾ ಮಾತುಗಳನ್ನು ಖಳನಾಯಕಿ ಶಕುಂತಲಾ ಕೇಳಿಸಿಕೊಂಡು ಹಿರಿ ಹಿರಿ ಹಿಗ್ಗಿದ್ದಾಳೆ. ಭೂಮಿಕಾಳ ಕ್ಯಾನ್ಸರ್ ವಿಷಯ ತಿಳಿಯುತ್ತಿದ್ದಂತೆ ಸ್ವೀಟ್ ತೆಗೆದುಕೊಂಡು ಮಗ ಜೈದೇವ್ ಬಳಿ ಶಕುಂತಲಾ ಓಡಿ ಹೋಗಿದ್ದಾಳೆ.
35
ಮಗನಿಗೆ ಸಿಹಿ ಕೊಟ್ಟ ಶಕುಂತಲಾ
ಜೈದೇವ್‌ಗೆ ಸಿಹಿ ನೀಡಿ ಭೂಮಿಕಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಹೇಳಿದ್ದಾಳೆ. ತಾಯಿ ಹೇಳಿದ ಮಾತು ಕೇಳುತ್ತಿದ್ದಂತೆ ಜೈದೇವ್ ವಿಕೃತ ನಗೆಯನ್ನು ಬೀರಿದ್ದಾಳೆ. ಮುಂದೆ ಇವರಿಬ್ಬರು ಸೇರಿಕೊಂಡು ಗೌತಮ್ ಮತ್ತು ಭೂಮಿಕಾಳನ್ನು ಮತ್ಯಾವ ಸಂಕಷ್ಟದಲ್ಲಿ ಸಿಲುಕಿಸ್ತಾರೆ ಎಂಬ ಆತಂಕ ವೀಕ್ಷಕರಲ್ಲಿ ಮನೆ ಮಾಡಿದೆ. ಆದ್ರೆ ಭೂಮಿಕಾ ಜೊತೆ ಐಪಿಎಸ್ ಮಲ್ಲಿ ಇರೋದನ್ನು ವಿಲನ್‌ಗಳು ಮರೆತಂತೆ ಕಾಣಿಸುತ್ತಿದೆ.
ಇತ್ತ ಗೌತಮ್ ಕಂಪನಿಯ ಎಲ್ಲಾ ಕೆಲಸಗಳನ್ನು ಸೋದರ ಪಾರ್ಥ ಮತ್ತು ಗೆಳೆಯ ಆನಂದ್ ಹೆಗಲಿಗೆ ವರ್ಗಾಯಿಸಿ ಭೂಮಿಕಾ ಜೊತೆ ಸಮಯ ಕಳೆಯುತ್ತಿದ್ದಾನೆ. ಪತ್ನಿಯ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸುವಲ್ಲಿ ಮುಂದಾಗಿದ್ದಾನೆ. ಮಡದಿಗಾಗೇ ತಾನೇ ಹೋಳಿಗೆ ತಯಾರಿಸಿ ತಿನ್ನಿಸಿದ್ದಾನೆ. ಗೌತಮ್ ತಯಾರಿಸಿದ ಹೋಳಿಗೆಗೆ ಮಲ್ಲಿ, ಭೂಮಿಕಾ ಮತ್ತು ಪಾರ್ಥ ಫುಲ್ ಮಾರ್ಕ್ಸ್ ನೀಡಿದ್ದಾರೆ.
55
ಜೈದೇವ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ
ರಸ್ತೆಯಲ್ಲಿ ಕುಡಿದು ಗಲಾಟೆ ಮಾಡಿದ್ದ ಜೈದೇವ್‌ಗೆ ಮಲ್ಲಿ ಲಾಠಿ ಏಟು ನೀಡಿ ಜೈಲಿಗೆ ತಳ್ಳಿದ್ದಳು. ನಂತರ ಕೋರ್ಟ್‌ಗೆ ದಂಡ ಪಾವತಿಸಿ ಬಂದಿರುವ ಜೈದೇವ್, ಮಲ್ಲಿಯನ್ನು ಸುಮ್ಮನೆ ಬಿಡಲ್ಲ. ಎಲ್ಲರೂ ಮುಂದೆ ಹೊಡೆದಿದ್ದಾಳೆ. ನಾನು ಸಾಕಿರೋ ಕುನ್ನಿ. ಕಥೆ ಇಲ್ಲಿಗೆ ಮುಗಿದಿಲ್ಲ. ಅಸಲಿ ಕಥೆಯನ್ನು ನಾನು ಬರೆಯುತ್ತೇನೆ. ನನಗೆ ಕೊಟ್ಟಿರೋ ಒಂದೊಂದು ಏಟಿಗೆ ಸಾವಿರ ಪಟ್ಟು ರಿವರ್ಸ್ ಕೊಡುತ್ತೇನೆ ಎಂದು ಜೈದೇವ್ ಗುಡುಗಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.