Kusumanjali Serial: ಇಪ್ಪತ್ತು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದ, ಐಕಾನಿಕ್ ಧಾರಾವಾಹಿ ‘ಕುಸುಮಾಂಜಲಿ’ ನೆನಪಿದ್ಯಾ? ಆ ಧಾರಾವಾಹಿಯ ನಾಯಕಿಯರು ಇದೀಗ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.
2006ರ ಸುಮಾರಿಗೆ ಅಂದರೆ ಬರೋಬ್ಬರಿ 20 ವರ್ಷಗಳ ಹಿಂದೆ ‘ಉದಯ ಟಿವಿ’ಯಲ್ಲಿ ಪ್ರಸಾರವಾಗುತ್ತಿದ್ದ ಐಕಾನಿಕ್ ಧಾರಾವಾಹಿ ‘ಕುಸುಮಾಂಜಲಿ’ ನೆನಪಿದ್ಯಾ? 90ರ ಕಿಡ್ಸ್ ಶಾಲೆಗೆ ಹೋಗುತ್ತಿರುವಾಗ ಬಂದಂತಹ ಸೀರಿಯಲ್
26
20 ವರ್ಷಗಳ ನಂತ್ರ ನಟಿಯರ ರೀಯೂನಿಯನ್
ಇದೀಗ 20 ವರ್ಷಗಳ ನಂತ್ರ ಮತ್ತೆ ನಟಿಯರ ರೀಯೂನಿಯನ್ ನಡೆದಿದೆ. ಹೌದು 2006ರಲ್ಲಿ ಪ್ರಸಾರವಾದ ಧಾರಾವಾಹಿಯ ನಾಯಕಿಯರು ಇದೀಗ 2026ರಲ್ಲಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
36
ಅಂಜಲಿ-ಸುಮಾಂಜಲಿ-ಕುಸುಮಾಂಜಲಿ
‘ಕುಸುಮಾಂಜಲಿ’ ಮೂರು ಜನ ಅಕ್ಕ ತಂಗಿಯರ ಕಥೆಯಾಗಿತ್ತು. ಅಂಜಲಿ, ಸುಮ ಮತ್ತು ಕುಸುಮ. ಆ ಲೀಡ್ ಪಾತ್ರದಲ್ಲಿ ನಟಿಸಿರುವಂತಹ ಮೂವರು ನಟಿಯರು ಇದೀಗ ಜೊತೆಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರನ್ನು ನೋಡಿ ಸಂಭ್ರಮಿಸಿದ್ದಾರೆ.
ನಟಿಯರಾದ ನಯನಾ ಕಾವೇರಿಯಪ್ಪ, ಶಮಾ ಕೃಷ್ಣ ಹಾಗೂ ವನಿತಾ ‘ಕುಸುಮಾಂಜಲಿ’ ಧಾರಾವಾಹಿಯಲ್ಲಿ ಅಕ್ಕ ತಂಗಿಯರಾಗಿ ನಟಿಸುತ್ತಿದ್ದರು. ಈ ಧಾರಾವಾಹಿ ಆ ಸಮಯದಲ್ಲಿ ಭಾರಿ ಜನಪ್ರಿಯತೆ ಪಡೆದ ಧಾರಾವಾಹಿಯಾಗಿತ್ತು.
56
ಬ್ಲೂ ಡ್ರೆಸಲ್ಲಿ ಮಿಂಚಿದ ನಟಿಯರು
ಮೂವರು ನಟಿಯರು ಭೇಟಿ ಮಾಡುವ ಪ್ಲ್ಯಾನ್ ಅಷ್ಟೇ ಮಾಡಿದ್ದರು, ಆದರೆ ಕಾಕತಾಳೀಯ ಎಂಬಂತೆ ಮೂರು ಜನ ಕೂಡ ನೀಲಿ ಬಣ್ಣದ ಡ್ರೆಸ್ಸಲ್ಲಿ ಮಿಂಚಿದ್ದರು. ಇದನ್ನು ನಟಿಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
66
ಮೂವರು ವಿಭಿನ್ನ ಕರಿಯರ್ ಆಯ್ಕೆ
ಒಂದು ಕಾಲದಲ್ಲಿ ನಟಿಯರಾಗಿ ಗುರುತಿಸಿಕೊಂಡಿದ್ದ ಇವರು ಇಂದು ಬೇರೆ ಬೇರೆ ಹಾದಿಯಲ್ಲಿ ತಮ್ಮ ಕರಿಯರ್ ರೂಪಿಸಿಕೊಂಡಿದ್ದಾರೆ. ವನಿತಾ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದರೆ, ಶಮಾ ಭರತನಾಟ್ಯ ಕಲಾವಿದೆಯಾಗಿದ್ದಾರೆ. ನಯನಾ ಕಾವೇರಿಯಪ್ಪ 12 ವರ್ಷ ನಟನೆಯಿಂದ ದೂರ ಇದ್ದವರು, ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.