ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಬೇಕಿರೋದು ಏನೆಂದು ತೋರಿಸ್ತಿದೆ Amruthadhaare Serial

Published : Jul 31, 2026, 06:22 PM IST

ಕ್ಯಾನ್ಸರ್‌ಗೆ ಚಿಕಿತ್ಸೆಯಷ್ಟೇ ಕುಟುಂಬದ ಪ್ರೀತಿ ಮತ್ತು ಭರವಸೆಯ ಮಾತುಗಳು ಮುಖ್ಯ. 'ಅಮೃತಧಾರೆ' ಧಾರಾವಾಹಿಯು, ಸಂಗಾತಿಯ ಪ್ರೀತಿ ಮತ್ತು ಮನೆಯವರ ಬೆಂಬಲವು ಕ್ಯಾನ್ಸರ್ ರೋಗಿಗಳಲ್ಲಿ ಹೇಗೆ ಚೈತನ್ಯ ತುಂಬಿ, ರೋಗವನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿಕೊಡುತ್ತಿದೆ.

PREV
16
ಹೆಚ್ಚುತ್ತಿರುವ ಕ್ಯಾನ್ಸರ್​

ಕ್ಯಾನ್ಸರ್​ ಎನ್ನುವುದು ಇಂದು ಬಿಪಿ, ಶುಗರ್​ನಷ್ಟೇ ಸರ್ವೇ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಕ್ಯಾನ್ಸರ್​ ಆಸ್ಪತ್ರೆಗಳಿಗೆ ಹೋಗಿ ನೋಡಿದರೆ, ಅಲ್ಲಿಯ ಭಯಾನಕತೆ ತಿಳಿಯುತ್ತದೆ. ಚಿಕ್ಕ ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೂ ಕ್ಯಾನ್ಸರ್​ನಿಂದ ಬಳಲುತ್ತಿರುವವರು ಎಷ್ಟೋ ಮಂದಿ.

26
ಕ್ಯಾನ್ಸರ್​ ಔಷಧ

ಇಂದು ಕ್ಯಾನ್ಸರ್​ಗೆ ಹಲವಾರು ರೀತಿಯ ಔಷಧಗಳು ಲಭ್ಯ ಇವೆ. ತಜ್ಞ ಹೋಮಿಯೋಪಥಿ ವೈದ್ಯರೂ ಕ್ಯಾನ್ಸರ್​ ಗುಣಮುಖ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಕೊನೆಯ ಹಂತದ ಕ್ಯಾನ್ಸರ್​ ಕೂಡ ಗುಣವಾದವರಿದ್ದಾರೆ. ಆದ್ದರಿಂದ ಕ್ಯಾನ್ಸರ್​ ಯಾವುದೇ ಇದ್ದರೂ, ಅದಕ್ಕೆ ಜನರು ಭಯ ಪಡುವ ಅಗತ್ಯವೇ ಇಲ್ಲ.

36
ಅಮೃತಧಾರೆ ಸೀರಿಯಲ್​ ಸಾಕ್ಷಿ

ಆದರೆ ಕ್ಯಾನ್ಸರ್​ ರೋಗಿಗಳಿಗೆ ಬೇಕಿರುವುದು ಕೇವಲ ಚಿಕಿತ್ಸೆಯಲ್ಲ, ಬದಲಿಗೆ ಮನೆಯವರ ಪ್ರೀತಿ, ಭರವಸೆಯ ಮಾತು. ಅದರಲ್ಲಿಯೂ ಸಂಗಾತಿಯ ಪ್ರೀತಿ ಎನ್ನುವುದನ್ನು ತೋರಿಸಿಕೊಡುತ್ತಿದೆ ಅಮೃತಧಾರೆ ಸೀರಿಯಲ್​(Amruthadaare serial).

46
ರೋಚಕತೆ ಹೆಸರಲ್ಲಿ!

ಆರಂಭದಲ್ಲಿ ವೈದ್ಯರು ಭೂಮಿಕಾಗೆ ಇರೋದು ಇನ್ನು ಕೆಲವೇ ತಿಂಗಳು ಎಂದಾಗ, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸೀರಿಯಲ್​ ನಂಬಿಕೊಂಡರೆ ಕ್ಯಾನ್ಸರ್​ ರೋಗಿಗಳ ಪಾಡು ಏನಾಗಬೇಡ, ಇಂಥ ಸೂಕ್ಷ್ಮ ವಿಷಯಗಳನ್ನು ಹೀಗೆ ರೋಚಕತೆ ಸೃಷ್ಟಿಸಲು ಹೇಳಿದರೆ ಹೇಗೆ ಎಂದೆಲ್ಲಾ ಕಮೆಂಟ್ಸ್​ ಸುರಿಮಳೆಯಾಗುತ್ತಿತ್ತು.

56
ಪ್ರೀತಿ-ವಿಶ್ವಾಸ ಮುಖ್ಯ

ಕೊನೆಗೂ ಸೀರಿಯಲ್​ನಲ್ಲಿ, ಭೂಮಿಕಾ ಜೀವ ಕಾಪಾಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಗೆ ಕ್ಯಾನ್ಸರ್​ ರೋಗಿಗಳಿಗೆ ಮನೆಯಲ್ಲಿ ಯಾವ ರೀತಿಯ ವಾತಾವರಣ ಇಟ್ಟುಕೊಳ್ಳಬೇಕು, ಕೇವಲ ಚಿಕಿತ್ಸೆ ಮಾತ್ರ ನೆರವಾಗಲ್ಲ, ಪ್ರೀತಿ-ವಿಶ್ವಾಸ ಹೇಗೆ ಮುಖ್ಯ ಎನ್ನೋದನ್ನು ತೋರಿಸಿಕೊಡ್ತಿದೆ ಈ ಸೀರಿಯಲ್​.

66
ಭರವಸೆಯ ಮಾತುಗಳು

ನಿಜ ಜೀವನದಲ್ಲಿಯೂ ಕ್ಯಾನ್ಸರ್​ ರೋಗಿಗಳನ್ನು ಮನೆಯವರು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಈ ಸೀರಿಯಲ್​ ಉದಾಹರಣೆಯಾಗಿದೆ. ಆದರೆ ಇಂದು ಹಲವು ಮನೆಗಳಲ್ಲಿ ಸ್ಥಿತಿ ಬೇರೆಯದ್ದೇ ರೀತಿ ಇದೆ. ಆದರೆ ಪ್ರೀತಿಯಿಂದ ಎಂಥ ರೋಗಗಳನ್ನೂ ವಾಸಿ ಮಾಡಲು ಸಾಧ್ಯ. ಒಂದಿಷ್ಟು ಭರವಸೆಯ ಮಾತುಗಳು ರೋಗಿಗಳಿಗೆ ಇನ್ನಷ್ಟು ಚೈತನ್ಯ, ಬಲ ತುಂಬುತ್ತದೆ ಎನ್ನುವುದನ್ನು ಸೀರಿಯಲ್​ ತೋರಿಸುತ್ತಿದೆ,

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories