TRP ಗೋಸ್ಕರ ಕಥೆ ಕಟ್ಟುತ್ತಿದ್ದಾರೆ, ನನ್ನ ಮೇಲೆ ಜವಾಬ್ದಾರಿಗಳು ಜಾಸ್ತಿ ಇದೆ: ಮಾಧ್ಯಮಗಳ ವಿರುದ್ಧ ವರ್ಷ ಕಾವೇರಿ ಗರಂ

Published : Sep 04, 2024, 10:10 AM IST

ವರ್ಷ ಕಾವೇರಿ ಬಿಗ್ ಬಾಸ್‌ಗೆ ಬಂದೇ ಬರ್ತಾಳೆ ಎಂದು ಗೆಸ್ ಮಾಡುತ್ತಿರುವ ಫಾಲೋವರ್ಸ್‌ಗೆ ಕ್ಲಾರಿಟಿ ಕೊಟ್ಟ ನಟಿ.....  

PREV
17
TRP ಗೋಸ್ಕರ ಕಥೆ ಕಟ್ಟುತ್ತಿದ್ದಾರೆ, ನನ್ನ ಮೇಲೆ ಜವಾಬ್ದಾರಿಗಳು ಜಾಸ್ತಿ ಇದೆ: ಮಾಧ್ಯಮಗಳ ವಿರುದ್ಧ ವರ್ಷ ಕಾವೇರಿ ಗರಂ

ಟಿಕ್ ಟಾಕ್, ಮ್ಯೂಸಿಕಲಿ, ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್‌ ಮತ್ತು ಯೂಟ್ಯೂಬ್ ವ್ಲಾಗ್...ಹೀಗೆ ಹಂತ ಹಂತವಾಗಿ ಸೋಷಿಯಲ್ ಮೀಡಿಯಾದಲ್ಲಿ ಬೆಳೆದ ವರ್ಷ ಕಾವೇರಿ.

27

ಇದೀಗ ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 11 ಆರಂಭವಾಗುತ್ತಿದೆ, ಈ ಸೀಸನ್‌ನಲ್ಲಿ ವರ್ಷ ಕಾವೇರಿ ಭಾಗವಹಿಸಲಿದ್ದಾರೆ ಅನ್ನೋ ಪೋಸ್ಟ್ ವೈರಲ್ ಆಗುತ್ತಿದೆ.

37

'ಹಾಯ್ ಎಲ್ಲರಿಗೂ...ಪ್ರತಿಯೊಬ್ಬರು ಮೊದಲು ತಿಳಿದುಕೊಳ್ಳಬೇಕಿರುವುದು ಏನೆಂದರೆ ನೀವು ನೋಡುತ್ತಿರುವುದು ಅಥವಾ ಕೇಳುತ್ತಿರುವ ಸುದ್ದಿ ಮಾತ್ರ' ಎಂದು ವರ್ಷ ಕಾವೇರಿ ಬರೆದುಕೊಂಡಿದ್ದಾರೆ.

47

'ಟಿಆರ್‌ಪಿ ಗೋಸ್ಕರ ಕಥೆ ಕಟ್ಟುತ್ತಿದ್ದಾರೆ. ನಾನು ಯಾವುದೇ ರಿಯಾಲಿಟಿ ಶೋಗೆ ಹೋಗುತ್ತಿಲ್ಲ. ನನ್ನ ಪ್ರೊಫೈಲ್ ಮತ್ತು ಚಾನೆಲ್‌ಗಳ ಪ್ರೊಫೈಲ್‌ಗೆ ಜನರು ಕಾಮೆಂಟ್ ಮಾಡುತ್ತಿರುವುದು ನೋಡುತ್ತಿರುವೆ'

57

'ನನ್ನಿಂದ ಮಾಹಿತಿ ಬಂದಿಲ್ಲ ಅಂದ್ರೆ ನಂಬಬೇಡಿ. ಒಂದು ವೇಳೆ ನಾನು ಹೋಗುತ್ತಿದ್ದರೂ ನಿಮಗೆ ಒಂದು ಕ್ಲೂ ನೀಡುತ್ತೇನೆ. ಈಗ ನಾನು ಯಾವುದೇ ಶೋಗೆ ಹೋಗುತ್ತಿಲ್ಲ'

67

'ಸದ್ಯಕ್ಕೆ ನನಗೆ ಜವಾಬ್ದಾರಿ ಜಾಸ್ತಿ ಇದೆ, ನೋಡಿಕೊಳ್ಳಲು ಸಾಕಷ್ಟು ಕೆಲಸಗಳು ಇದೆ. ನಾನು ಯಾವ ಸಾಧನೆನೂ ಮಾಡಿಲ್ಲ ಇಂತಹ ದೊಡ್ಡ ಶೋಗೆ ಹೋಗಲು'

77

'ಸಾಧನೆ ಮಾಡಿರುವ ಅದೆಷ್ಟೋ ಜನರು ಮುಂದೆ ನಾನು ಏನೋ ಅಲ್ಲ..ನಾನು ಈಗಷ್ಟೇ ಬೆಳೆಯುತ್ತಿರುವ ವ್ಯಕ್ತಿ ನಾನು ಸಾಧನೆ ಮಾಡಲು ಸಾಕಷ್ಟಿದೆ' ಎಂದು ವರ್ಷ ಬರೆದುಕೊಂಡಿದ್ದಾರೆ.

Read more Photos on
click me!

Recommended Stories