ಗುರುತೇ ಸಿಗದಷ್ಟು ಬದಲಾದ ಲಕ್ಷ್ಮೀ ಬಾರಮ್ಮ ನಟಿ... ಮೇಕಪ್ ಹೆಚ್ಚಾಯ್ತೆಂದ ಫ್ಯಾನ್ಸ್… ಯಾರು ಗೊತ್ತಾಯ್ತ?

Published : Sep 03, 2024, 06:07 PM ISTUpdated : Sep 04, 2024, 08:46 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮನೆಕೆಲಸದಾಕೆ ಗಂಗಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಹರ್ಷಿತಾ ಹೊಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.   

PREV
17
ಗುರುತೇ ಸಿಗದಷ್ಟು ಬದಲಾದ ಲಕ್ಷ್ಮೀ ಬಾರಮ್ಮ ನಟಿ... ಮೇಕಪ್ ಹೆಚ್ಚಾಯ್ತೆಂದ ಫ್ಯಾನ್ಸ್… ಯಾರು ಗೊತ್ತಾಯ್ತ?

ಲಕ್ಷ್ಮೀ ಬಾರಮ್ಮ (Laskhmi Baramma) ಧಾರಾವಾಹಿಯ ಪ್ರತಿಯೊಂದು ಪಾತ್ರವೂ ಜನರಿಗೆ ಇಷ್ಟವಾಗಿದೆ ಅದರಲ್ಲೂ ಮನೆಕೆಲಸದಾಕೆ ಗಂಗಾ ಪಾತ್ರವು ಕಾಮಿಡಿ ಜೊತೆಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಈ ಪಾತ್ರದಲ್ಲಿ ನಟಿಸುತ್ತಿರುವ ನಟಿ ಹರ್ಷಿತಾ. 
 

27

ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು, ಕಿವಿಗೆ ಇಯರ್ ಫೋನ್ ಇಟ್ಕೊಂಡು, ಕೈಯಲ್ಲಿ ಸೌಟ್ ಇಡ್ಕೊಂಡು, ಎಲ್ಲರನ್ನೂ ನಗಿಸುತ್ತಿರುವ ಹಾಗೂ ಲಕ್ಷ್ಮೀಗೆ ಧೈರ್ಯ ತುಂಬುವ ಪಾತ್ರ ಹರ್ಷಿತಾರದ್ದು, (Harshitha) ಆ ಪಾತ್ರಕ್ಕೆ ತಕ್ಕಂತೆ ನಟಿಸುತ್ತಾರೆ ನಟಿ. 
 

37

ರಿಯಲ್ ಲೈಫಲ್ಲಿ ಹರ್ಷಿತಾ ಮಾಡೆಲ್ ಆಗೋದಕ್ಕೂ ಸೈ, ಟ್ರೆಡಿಷನಲ್ ಆಗೋದಕ್ಕೂ ಸೈ ಎನ್ನುವವರು. ಇದೀಗ ಹರ್ಷಿತಾ ಸ್ಟೈಲಿಶ್ ವಿಡಿಯೋ ವೈರಲ್ ಆಗುತ್ತಿದ್ದು, ಜನ ಇದೇನಾ ಲಕ್ಷ್ಮೀ ಬಾರಮ್ಮ ಗಂಗಕ್ಕಾ ಎನ್ನುವಂತೆ ಕಾಣಿಸಿಕುತ್ತಿದ್ದಾರೆ. 
 

47

ನೀಲಿ ಮತ್ತು ಬಿಳಿ ಬಣ್ಣದ ಸ್ಲೀವ್ ಲೆಸ್ ಡ್ರೆಸ್ ಧರಿಸಿರುವ ಹರ್ಷಿತಾ, ಕೂದಲನ್ನು ಓಪನ್ ಆಗಿ ಬಿಟ್ಟಿದ್ದಾರೆ. ಕಿವಿಗೆ ಮ್ಯಾಚ್ ಆಗುವ ನೀಲಿ ಇಯರಿಂಗ್ಸ್ ಧರಿಸಿದ್ದು, ಹೈ ಹೀಲ್ಸ್ ಧರಿಸಿ, ಗುರುತೇ ಸಿಗದಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

57

ಹರ್ಷಿತಾ ಹೊಸ ಲುಕ್ ನೋಡಿ ಕೆಲವರು ಇಷ್ಟಪಟ್ಟು ಸೂಪರ್, ಸೂಪರ್ ಎಂದರೆ, ಇನ್ನೂ ಕೆಲವರು ಮೇಕಪ್ ಸ್ವಲ್ಪ ಓವರ್ ಆಯ್ತು, ನೀವು ನ್ಯಾಚುರಲ್ ಆಗಿದ್ರೆನೆ ಚೆಂದ ಎಂದು ಕಾಮೆಂಟ್ ಮಾಡಿದ್ದಾರೆ. 
 

67

ಇನ್ನು ಹರ್ಷಿತಾ ಬಗ್ಗೆ ಹೇಳೊದಾದ್ರೆ ಈಕೆ ಮೂಲತಃಅ ತುಮಕೂರು ಜಿಲ್ಲೆಯ ಮಧುಗಿರಿಯವರು. ಲಕ್ಷ್ಮೀ ಬಾರಮ್ಮ ಸೇರಿ ವಿವಿಧ ವಾಹಿನಿಗಳ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಪತಿ ಕೂಡ ಕೆಲವು ರಿಯಾಲಿಟಿ ಶೋಗಳ ಕಾಮಿಡಿ, ಸ್ಕಿಟ್ ಗಳಿಗೆ ಕಥೆ ಬರೆಯುವ ಬರಹಗಾರ. 
 

77

ಸೋಶಿಯಲ್ ಮಿಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಮುದ್ದು ಮುಖದ ನಟಿ ಹರ್ಷಿತಾ, ಹೆಚ್ಚಾಗಿ ತಮ್ಮ ಲಕ್ಷ್ಮೀ ಬಾರಮ್ಮ ತಂಡದ ಜೊತೆಗೆ ರೀಲ್ಸ್ ಮಾಡ್ತಾ, ಡ್ಯಾನ್ಸ್ ಗಳಿಗೆ ಹೆಜ್ಜೆ ಹಾಕುವ ವಿಡೀಯೋ ಮಾಡಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಈಗಾಗಲೇ ಇವರು 81.4ಕೆ ಫಾಲೋವರ್ಸ್ ಗಳನ್ನು ಸಹ ಹೊಂದಿದ್ದಾರೆ. 
 

Read more Photos on
click me!

Recommended Stories