ಇಂಟರ್ನೆಟ್ಟಲ್ಲಿ ಸದ್ದು ಮಾಡ್ತಿದೆ ಬಿಗ್ ಬಾಸ್ ಸೀಸನ್ 11ರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್… ನಿಮ್ಮ ಫೇವರಿಟ್ ಯಾರು?

First Published | Sep 3, 2024, 5:27 PM IST

ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಬಗ್ಗೆ ಭಾರಿ ಕುತೂಹಲ ಸೃಷ್ಟಿಯಾಗಿದೆ. ಈ ಬಾರಿ ಜನಪ್ರಿಯ ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಕೂಡ ಹೆಚ್ಚಾಗಿದ್ದು, ಸಂಭಾವ್ಯ ಪಟ್ಟಿಯು ಸದ್ದು ಮಾಡುತ್ತಿದೆ. 
 

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Season 11) ಬಗ್ಗೆ ಜನರಲ್ಲಿ ವಿಪರೀತ ಕುತೂಹಲ ಉಂಟಾಗಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು, ನಿರೂಪಣೆ ಯಾರು ಮಾಡ್ತಾರೆ ಅನ್ನೋದೆ ದೊಡ್ಡ ಚರ್ಚೆಯ ವಿಷ್ಯವಾಗಿದೆ. ಇದೆಲ್ಲದರ ಮಧ್ಯೆ ಇದೀಗ ಸೀಸನ್ 11 ರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರ್ಯಾರಿದ್ದಾರೆ? ಇವರಲ್ಲಿ ನಿಮ್ಮ ಫೇವರಿಟ್ ಯಾರು ನೋಡಿ..
 

ಮೋಕ್ಷಿತಾ ಪೈ - ಗೌತಮಿ ಜಾದವ್
ಮೋಕ್ಷಿತಾ ಪೈ ಹಾಗೂ ಗೌತಮಿ ಜಾದವ್ ಇಬ್ಬರೂ ಸಹ ಕನ್ನಡ ಕಿರುತೆರೆಯ, ಅದರಲ್ಲೂ ಝೀ ಕನ್ನಡದ ಜನಪ್ರಿಯ ನಾಯಕಿಯರು. ಮೋಕ್ಷಿತಾ ಪೈ ಪಾರು ಆಗಿ ಮಿಂಚಿದ್ದರೆ, ಗೌತಮಿ ಜಾದವ್ ಸತ್ಯ ಆಗಿ ಧೂಳೆಬ್ಬಿಸಿದ್ದರು. ಇವರಿಬ್ಬರು ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾ ಪೋಹ ಕೂಡ ಇದೆ. 

Tap to resize

ಅಶ್ವಿನಿ ಗೌಡ - ಶರ್ಮಿತಾ ಗೌಡ
ಕನ್ನಡ ನಟಿ, ನಿರೂಪಕಿಯಾಗಿ ಗುರುತಿಸಿಕೊಂಡು ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿಯಾಗಿ ಕನ್ನಡ ಪರ ಹೋರಾಟಗಳಲ್ಲಿ ಮಿಂಚಿದ ಗುರುತಿಸಿಕೊಂಡಿರುವ ಅಶ್ವಿನಿ ಗೌಡ, (Ashwini Gowda) ಹಾಗೂ ಗೀತಾ ಧಾರಾವಾಹಿಯಲ್ಲಿ ವಿಲನ್ ಭಾನುಮತಿ ಪಾತ್ರದಲ್ಲಿ ಮಿಂಚಿದ ಸ್ಟೈಲಿಶ್ ನಟಿ ಶರ್ಮಿತಾ ಗೌಡ ಕೂಡ ಬರಲಿದ್ದಾರೆ ಎನ್ನುವ ಸುದ್ದಿ ಇದೆ. 

ತರುಣ್ ಚಂದ್ರ - ಚೇತನ್ ಚಂದ್ರ
ಖುಷಿ, ಲವ್ ಗುರು, ಗೆಳೆಯ ಸಿನಿಮಾಗಳ ಮೂಲಕ ಭರ್ಜರಿ ಮನರಂಜನೆ ನೀಡಿದ ಚಾಕಲೇಟ್ ಹೀರೋ ತರುಣ್ ಚಂದ್ರ (Tarun chandra)ಬಿಗ್ ಬಾಸ್ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ ಸಿನಿಮಾಗಳಲ್ಲಿ ಮಿಂಚಿ ಸತ್ಯಂ ಶಿವಂ ಸುಂದರಂ ಧಾರಾವಾಹಿಗಳಲ್ಲೂ ನಟಿಸಿದ್ದ ಚೇತನ್ ಚಂದ್ರ ಕೂಡ ಸ್ಪರ್ಧಿಸಲಿದ್ದಾರಂತೆ. 

ರೀಲ್ಸ್ ರೇಷ್ಮಾ - ಆಶಾ ಭಟ್
ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲಿ ಕಾಣಿಸಿಕೊಂಡಿರುವ ರೀಲ್ಸ್ ರೇಷ್ಮಾ ಹಾಗೂ ಗಾಯಕಿ ಆಶಾ ಭಟ್ ಹೆಸರು ಕೂಡ ಬಿಗ್ ಬಾಸ್ ಸೀಸನ್ 11 ರ ಸಂಭಾವ್ಯ ವ್ಯಕ್ತಿಗಳ ಪಟ್ಟಿಯಲ್ಲಿದೆ. ಆಶಾ ಭಟ್ ಹೆಸರು ಕಳೆದ ವರ್ಷದ ಬಿಗ್ ಬಾಸ್ ನಲ್ಲೂ ಸದ್ದು ಮಾಡಿತ್ತು. ಈ ಬಾರಿ ಬರ್ತಾರ ಕಾದು ನೋಡಬೇಕು. 
 

ಆಕಾಶ್ - ತನ್ವಿ ಬಾಲರಾಜ್
ಇನ್ನೇನು ಮುಕ್ತಾಯದ ಹಂತದಲ್ಲಿರುವ ಕೆಂಡ ಸಂಪಿಗೆ ಧಾರಾವಾಹಿಯ ನಾಯಕ ಆಕಾಶ್ ಹಾಗೂ ಅಂತರಪಟ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ತನ್ವಿಯಾ ಬಾಲರಾಜ್ ಕೂಡ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಬಗ್ಗೆ ಕೇಳಿ ಬಂದಿದೆ. 

ಸುಕೃತಾ ನಾಗ್, ಅಮಿತಾ ಸದಾಶಿವ
ಅಗ್ನಿಸಾಕ್ಷಿ, ಕಾವೇರಿ ಕನ್ನಡ ಮೀಡಿಯಂ ಮತ್ತು ಲಕ್ಷಣ ಸೀರಿಯಲ್ ಗಳಲ್ಲಿ ನಟಿಸಿದ್ದ ಬೆಡಗಿ ಸುಕೃತಾ ನಾಗ್ (Sukrutha Nag)ಹಾಗೂ ಒಲವಿನ ನಿಲ್ದಾಣದಲ್ಲಿ ಮಿಂಚಿದ್ದ ಮಂಗಳೂರಿನ ಬೆಡಗಿ ಅಮಿತಾ ಸದಾಶಿವ ಕೂಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಚಾನ್ಸ್ ಇದೆ ಎನ್ನುವ ಗುಸು ಗುಸು ಕೂಡ ಕೇಳಿ ಬರ್ತಿದೆ. 

ಪಂಕಜ್ ನಾರಾಯಣ್ - ತ್ರಿವಿಕ್ರಮ್
ಚೆಲುವಿನ ಚಿಲಿಪಿಲಿ ಸಿನಿಮಾ ಮೂಲಕ ಸದ್ದು ಮಾಡಿದ್ದ ನಟ ಹಾಗೂ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರ ಮಗ ಪಂಕಜ್ ನಾರಾಯಣ್ (Pankaj Narayan) ಕೂಡ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನುವ ಸುದ್ದಿ ಇದೆ. ಅಲ್ಲದೇ ಪದ್ಮಾವತಿ ಸೀರಿಯಲ್ ಮೂಲಕ ಮಿಂಚಿದ್ದ ನಟ ತ್ರಿವಿಕ್ರಮ್ ಕೂಡ ಸ್ಪರ್ಧಿಯಾಗಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

ಚಂದ್ರಪ್ರಭ - ರಾಘವೇಂದ್ರ
ಚಂದ್ರಪ್ರಭ ಮತ್ತು ರಾಘವೇಂದ್ರ ಇಬ್ಬರೂ ಸಹ ಕಾಮಿಡಿ ಕಿಲಾಡಿಗಳು, ಗಿಚ್ಚಿ ಗಿಲಿಗಿಯಲ್ಲಿ ಗುರುತಿಸಿಕೊಂಡವರು. ಇಬ್ಬರ ಕಾಮಿಡಿ ಟೈಮಿಂಗ್ಸ್ ಸಖತ್ತಾಗಿದೆ. ಇವರು ಬೆಸ್ಟ್ ಎಂಟರ್’ಟೈನರ್ ಕೂಡ ಹೌದು, ಇವರಿಬ್ಬರು ಈ ಬಾರಿ ಬಿಗ್ ಬಾಸ್ ಗೆ ಬಂದರೆ ನೋಡುಗರಿಗೆ ಮನರಂಜನೆಯ ಹಬ್ಬ. 
 

ವರ್ಷಾ ಕಾವೇರಿ, ವರುಣ್ ಆರಾಧ್ಯ
ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಸಖತ್ ಸೌಂಡ್ ಮಾಡಿದ್ದ ಜೋಡಿ ವರ್ಷಾ ಮತ್ತು ವರುಣ್ (Varsha Kaveri and Varun Aradhya). ಇಬ್ಬರು ಆರಂಭದಲ್ಲಿ ಲವ್ ಮಾಡುತ್ತಿದ್ದು, ನಂತರ ಬ್ರೇಕಪ್ ಆಗಿ ತುಂಬಾನೆ ಸುದ್ದಿ ಕೂಡ ಆಗಿತ್ತು. ನಂತರ ವರುಣ್ ವೃಂದಾವನ ಧಾರಾವಾಹಿಯಲ್ಲೂ ನಟಿಸಿದ್ದ. ಇದೀಗ ಇಬ್ಬರು ಜೊತೆಯಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ರೆ ಹೇಗಿರುತ್ತೆ ಅನ್ನೋದನ್ನ ವೀಕ್ಷಕರು ಕಾಯ್ತಿದ್ದಾರೆ. 

Latest Videos

click me!