ರಾಖಿ ಕಟ್ಟಿದ ಸಹೋದರಿಗೆ ಅತಿ ದುಬಾರಿ ಗಿಫ್ಟ್‌ ಕೊಟ್ಟ Youtuber Sameer! ಅದರ ಬೆಲೆ ಎಷ್ಟು?

Published : Aug 22, 2025, 04:53 PM IST

ಹಿಂದು ಧರ್ಮದ ಹಬ್ಬಗಳಲ್ಲಿ ರಕ್ಷಾಬಂಧನ ಕೂಡ ಒಂದು. ತನ್ನ ರಕ್ಷೆ ಮಾಡಲಿ ಎಂದು ಸಹೋದರನಿಗೆ ಸಹೋದರಿ ರಾಖಿ ಕಟ್ಟುವುದು ಒಂದು ಪದ್ಧತಿಯಾಗಿದೆ. ರಾಖಿ ಕಟ್ಟಿದ್ದಕ್ಕೆ ಸಹೋದರಿಗೆ ಸಹೋದರ, ಏನಾದರೂ ಗಿಫ್ಟ್‌ ಕೊಡುತ್ತಾನೆ. ಇಲ್ಲಿ ಸಮೀರ್‌ ಅವರು ಅಕ್ಕನಿಗೆ ದುಬಾರಿ ಗಿಫ್ಟ್‌ ಕೊಟ್ಟಿದ್ದಾರೆ. 

PREV
15

ರಕ್ಷಾ ಬಂಧನದ ಹಬ್ಬ ಮುಗಿದಿದೆ. ಆದರೆ ಯುಟ್ಯೂಬರ್‌ ಸಮೀರ್‌ ಅವರು ಅಕ್ಕನಿಗೆ ನೀಡಿದ ಉಡುಗೊರೆ ಬಗ್ಗೆ ಚರ್ಚೆ ಶುರುವಾಗಿದೆ. ಯುಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್‌ ಮಾಡುವ ವಿಡಿಯೋಗಳಲ್ಲಿ ಬೇರೆ ಬೇರೆ ರೀತಿಯ ಫ್ರಾಂಕ್‌ ಇರುತ್ತದೆ.

25

ರಾಖಿ ಕಟ್ಟಿದ್ದಕ್ಕೆ ಸಹೋದರರು ಏನೂ ಗಿಫ್ಟ್‌ ಕೊಟ್ಟಿಲ್ಲ ಅಂತ ಸೋನು ಬೇಸರ ಮಾಡಿಕೊಂಡಿದ್ದರು. ಮಾಲ್‌ನಲ್ಲಿ ಶಾಪಿಂಗ್‌ ಮಾಡಿಸಿ ಅಂತ ಸೋನು ತಮಾಷೆಗೆ ಹೇಳಿದ್ದರು. ಆದರೆ ಅದಕ್ಕಿಂತ ದೊಡ್ಡ ಗಿಫ್ಟ್‌ ಕೊಟ್ಟಿದ್ದಾರೆ.

35

ಸುಮ್ಮನೆ ಕರೆದುಕೊಂಡು ಹೋಗ್ತೀವಿ ಎಂದು ಅಕ್ಕನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ 185,000 ರೂಪಾಯಿ ಕೊಟ್ಟು ಸ್ಕೂಟಿಯನ್ನು ಕೊಡಿಸಿದ್ದಾರೆ. ಸಹೋದರರು ಫ್ರಾಂಕ್‌ ಮಾಡುತ್ತಾರೆ ಎಂದು ಅಂದುಕೊಂಡಿದ್ದ ಸೋನುಗೆ ಬಿಗ್‌ ಸರ್ಪ್ರೈಸ್‌ ಸಿಕ್ಕಿದೆ.

45

ಈ ರೀತಿ ಗಿಫ್ಟ್‌ ಸಿಕ್ಕಿದೆ ಎಂದು ಸೋನು ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಕೊನೆಯವರೆಗೂ ಫ್ರಾಂಕ್‌ ಎಂದು ಸೋನುಗೆ ಗೋಳು ಹೊಯ್ದುಕೊಳ್ಳಲಾಗಿತ್ತು. ಆಮೇಲೆ ಸೋನು ಮನೆಗೆ ಸ್ಕೂಟಿ ತೆಗೆದುಕೊಂಡು ಹೋಗಿದ್ದಾರೆ.

55

ಅಷ್ಟೇ ಅಲ್ಲದೆ ಅಕ್ಕನ ಹೊಸ ಸ್ಕೂಟಿಗೆ ಸಮೀರ್‌ ಅವರು ಹೊಸ ಲೈನ್‌ ಬರೆಸಬಹುದು ಎಂದು ಐಡಿಯಾ ಕೂಡ ಕೊಟ್ಟಿದ್ದಾರೆ. “ Do Not Follow me, I am tsunami” ಎಂದು ಬರೆಸಬೇಕಂತೆ. ಅಕ್ಕನಿಗೆ ಸ್ಕೂಟಿ ತಗೋಬೇಕು ಎನ್ನೋದು ದೊಡ್ಡ ಕನಸಾಗಿತ್ತು. ಆದರೆ ಅವಳು ನಮಗೋಸ್ಕರ ಆ ಕನಸನ್ನು ಹಾಗೆ ಇಟ್ಟುಕೊಂಡಿದ್ದಳು. ಹೀಗಾಗಿ ಈ ಬಾರಿ ಅವಳಿಷ್ಟದ ಸ್ಕೂಟಿ ಕೊಡಿಸೋಣ ಅಂತ ಅಂದುಕೊಂಡು, ಕೊಡಿಸಿದೆವು” ಎಂದು ಸಮೀರ್‌ ಹೇಳಿದ್ದಾರೆ.

Read more Photos on
click me!

Recommended Stories